ಅದಿಪುರುಷ್‌ನಲ್ಲಿ ವಿಭಿಷಣನ ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಂದರ ನಟಿ ಯಾರು?

First Published Jun 19, 2023, 4:08 PM IST

ಓಂ ರಾವುತ್ ನಿರ್ದೇಶನದ 'ಆದಿಪುರುಷ' (Adipurush)  ಬಿಡುಗಡೆಯಾದಾಗಿನಿಂದ ಮುಖ್ಯಾಂಶಗಳಲ್ಲಿದೆ. ಚಿತ್ರದ ತಾರಾಬಳಗದ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಚಿತ್ರದಲ್ಲಿ ರಾಘವ್, ಜಾನಕಿ, ಲಂಕೇಶ್, ಲಕ್ಷ್ಮಣ್ ಮತ್ತು ಹನುಮಾನ್ ಪಾತ್ರಗಳ  ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ವಿಭೀಷಣನ ಹೆಂಡತಿ ಸರಮಾ ಪಾತ್ರವು ಸಾಕಷ್ಟು ವಿವಾವದಗಳಿಗೆ ಕಾರಣವಾಗಿದೆ. ವಿಭೀಷಣನ ಪತ್ನಿ ಸರಮಾ ಪಾತ್ರದಲ್ಲಿ ನಟಿಸಿರುವ ತೃಪ್ತಿ ತೋರದ್ಮಾಲ್ (Trupti Toradmal) ಎಲ್ಲರ ಗಮನ ಸೆಳೆದಿದ್ದಾರೆ. ಈ ನಟಿ ಬಗ್ಗೆ ಮಾಹಿತಿ ಇಲ್ಲಿದೆ.

Trupti Toradmal

ಸರಮಾ ರಾವಣನ ಸಹೋದರ ವಿಭೀಷಣನ ಹೆಂಡತಿ. 'ರಾಮಾಯಣ' ಆಧಾರಿತ 'ಆದಿಪುರುಷ' ಚಿತ್ರದಲ್ಲಿ, ಸರಮಾ ಪಾತ್ರವನ್ನು ನಟಿ ತೃಪ್ತಿ ತೋರದ್ಮಾಲ್ ನಿರ್ವಹಿಸಿದ್ದಾರೆ. 

ಆದಿಪುರುಷನಲ್ಲಿ ವಿಭೀಷಣನ ಹೆಂಡತಿ ಸರಮಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ತೃಪ್ತಿ ತೋರದ್ಮಾಲ್ ಅವರು ಈ ದಿನಗಳಲ್ಲಿ ಜನಮನದಲ್ಲಿದ್ದಾರೆ. ಆದಿಪುರುಷ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

Latest Videos


22 ನವೆಂಬರ್ 1992 ರಂದು ಜನಿಸಿದ ತೃಪ್ತಿ, ಮರಾಠಿ ನಟಿ, ಅವರು ಮನಮೋಹಕ ಅವತಾರಕ್ಕೆ ಫೇಮಸ್. ಚಲನಚಿತ್ರ ಹಿನ್ನೆಲೆಯಿಂದ ಬಂದವರು ಈ ತೃಪ್ತಿ.

 ಅವರ ತಂದೆ ಮಧುಕರ್ ತೋರ್ಡ್ಮಲ್ ಮರಾಠಿ ಚಿತ್ರರಂಗದ ಪ್ರಸಿದ್ಧ ನಟ ಮತ್ತು ಅನೇಕ ಚಲನಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ.

ತನ್ನ ತಂದೆಯಂತೆ, ತೃಪ್ತಿ ಕೂಡ ಚಲನಚಿತ್ರ ಜಗತ್ತಿನಲ್ಲಿ ತನ್ನನ್ನು ತಾನೇ ಗುರುತಿಸಿಕೊಳ್ಳಲು ನಿರ್ಧರಿಸಿದರು ಮತ್ತು 2018 ರಲ್ಲಿ 'ಸವಿತಾ ದಾಮೋದರ್ ಪರಂಜ್ಪೆ' ಮೂಲಕ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 

ಇದರ ನಂತರ, 2019 ರಲ್ಲಿ, ತೃಪ್ತಿ 'ಫತೇಶಿಕಾಸ್ಟ್' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು.ಈಗ ತೃಪ್ತಿ ಅವರು 'ಆದಿಪುರುಷ್' (2023) ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ, ಇದರಿಂದಾಗಿ ಅವರು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ.

‘ಆದಿಪುರುಷ’ ಬಿಡುಗಡೆಯಾದಾಗಿನಿಂದ ತೃಪ್ತಿ ಬಗ್ಗೆ ತಿಳಿದುಕೊಳ್ಳಲು ಜನರು  ಕೂತುಹಲ ತೋರಿಸುತ್ತಿದ್ದಾರೆ. ಈ ಚಿತ್ರ ಹಲವು ಕಾರಣಗಳಿಂದ ವಿವಾದಕ್ಕೀಡಾಗಿದ್ದು, ಅದರಲ್ಲಿ ತೃಪ್ತಿಯ ದೃಶ್ಯವೂ ಒಂದು. 

'ಆದಿಪುರುಷ' ಚಿತ್ರದಲ್ಲಿ ವಿಭೀಷಣನ ಪತ್ನಿ ಶರ್ಮಾ ಲೋ ಕಟ್ ಬ್ಲೌಸ್ ಧರಿಸಿ ಕಾಣಿಸಿಕೊಂಡಿದ್ದು ಭಾರೀ ಸಂಚಲನ ಮೂಡಿಸಿದೆ. ‘ರಾಮಾಯಣ’ ಕಥೆಯಾಧಾರಿತ ಸಿನಿಮಾದಲ್ಲಿ ಇಂತಹ ದೃಶ್ಯಗಳನ್ನು ತೋರಿಸಿರುವುದು ಏಕೆ ಎಂಬ ಪ್ರಶ್ನೆಗಳನ್ನು ಜನ ಎತ್ತುತ್ತಿದ್ದಾರೆ

ಜೂನ್ 16, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ಆದಿಪುರುಷ' ಚಿತ್ರದ ಸ್ಕ್ರಿಪ್ಟಿಂಗ್ ಅನ್ನು ಮನೋಜ್ ಮುಂತಾಶಿರ್ ಬರೆದಿದ್ದಾರೆ ಮತ್ತು ಇದನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ.  ಭೂಷಣ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರಭಾಸ್ ರಾಘವ್ (ರಾಮ್), ಕೃತಿ ಸನೋನ್ 'ಜಾನಕಿ' (ಸೀತಾ), ಸೈಫ್ ಅಲಿ ಖಾನ್ ಲಂಕೇಶ್ (ರಾವಣ) ಮತ್ತು ಸನ್ನಿ ಸಿಂಗ್ ಲಕ್ಷ್ಮಣನಾಗಿ ನಟಿಸಿದ್ದಾರೆ.
 

click me!