Animal ಗೆಲುವಿನ ಖುಷಿಯಲ್ಲಿರೋ ರಶ್ಮಿಕಾ ಮಂದಣ್ಣಗೆ ಕಂಡ್ ಕಂಡಲ್ಲಿ ಮನೆ ಇವೆ!

Published : Dec 04, 2023, 04:40 PM IST

ದಕ್ಷಿಣ ಸಿನಿಮಾದ ಟಾಪ್‌ ನಟಿಯರಲ್ಲಿ ಒಬ್ಬರಾದ  ರಶ್ಮಿಕಾ ಮಂದಣ್ಣ  (Rashmika Mandanna) ಬಾಲಿವುಡ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ.  2022 ರಲ್ಲಿ ಅಮಿತಾಭ್ ಬಚ್ಚನ್ ಅವರೊಂದಿಗೆ ಗುಡ್ ಬೈ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ರಶ್ಮಿಕಾ ಈಗ  ಅವರು ಸಂದೀಪ್ ರೆಡ್ಡಿ ವಂಗಾ ಅವರ ಆಕ್ಷನ್-ಥ್ರಿಲ್ಲರ್  ಆನಿಮಲ್‌ನಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಜೊತೆಗೆ ಕಾಣಿಸಿಕೊಂಡು  ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ  27 ವರ್ಷದ ರಶ್ಮಿಕಾರ ಜೀವನಶೈಲಿ ಹೇಗಿದೆ ಗೊತ್ತಾ?

PREV
19
Animal ಗೆಲುವಿನ ಖುಷಿಯಲ್ಲಿರೋ ರಶ್ಮಿಕಾ ಮಂದಣ್ಣಗೆ ಕಂಡ್ ಕಂಡಲ್ಲಿ ಮನೆ ಇವೆ!

ರಶ್ಮಿಕಾ ಮಂದಣ್ಣ ಅವರು ರಿಯಲ್ ಎಸ್ಟೇಟ್‌ನಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ.  ಬೆಂಗಳೂರಿನಲ್ಲಿ 8 ಕೋಟಿ ರೂಪಾಯಿ ಬಂಗಲೆಯನ್ನು ಹೊಂದಿದ್ದಾರೆ.

29

ಇದರ ಜೊತೆಗೆ , ಮುಂಬೈಯಲ್ಲಿ ಅದ್ದೂರಿ ಅಪಾರ್ಟ್ಮೆಂಟ್ ಮತ್ತು ಗೋವಾ, ಕೂರ್ಗ್ ಮತ್ತು ಹೈದರಾಬಾದ್‌ನಲ್ಲಿ ಇತರ  ಆಸ್ತಿಗಳನ್ನು ಹೊಂದಿದ್ದಾರೆ.  ಅವರು ತಮ್ಮ ಪ್ರತಿ ಕೆಲಸದ ತಾಣದಲ್ಲಿ ಹೊಸ ಮನೆಯನ್ನು ಕೊಂಡು ಕೊಂಡಿದ್ದಾರೆ

39

ರಶ್ಮಿಕಾ ಅವರು ಕಾರಿನ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ಪ್ರಯಾಣಕ್ಕಾಗಿ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಜರ್ಮನ್ SUV  Audi Q3ಯನ್ನು ರಶ್ಮಿಕಾ ಬಳಸುತ್ತಾರೆ
 

49

ಆಕೆಯ ಗ್ಯಾರೇಜ್‌ನಲ್ಲಿ ಬ್ರಿಟಿಷ್-ಮೇಕ್‌ ಐಷಾರಾಮಿ ವಾಹನವಾದ ರೇಂಜ್ ರೋವರ್ ಸ್ಪೋರ್ಟ್ (Range Rover Sports) ಇದೆ. ಜೊತೆಗೆ ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್, ಟೊಯೊಟಾ ಇನ್ನೋವಾ (Toyoto Innova) ಮತ್ತು ಹ್ಯುಂಡೈ ಕ್ರೆಟಾ, ಆಕರ್ಷಕವಾದ ಕಾರುಗಳ ಸಂಗ್ರಹವನ್ನೇ ನಟಿ ಹೊಂದಿದ್ದಾರೆ

59

ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ರಶ್ಮಿಕಾ ಮಂದಣ್ಣ ದುಬಾರಿ ಹಾಲಿಡೇಗಳ ಮೂಲಕ ವಿರಾಮದ ಕ್ಷಣಗಳನ್ನು ಎಂಜಾಯ್‌ ಮಾಡುತ್ತಾರೆ. ಆಕೆಯ ಸಾಮಾಜಿಕ ಮಾಧ್ಯಮದಲ್ಲಿ ಅವರ ರಜಾದಿನಗಳ ಝಲಕ್‌ ಕಾಣಸಿಗುತ್ತದೆ.

69

2016ರಲ್ಲಿ ಕಿರಿಕ್ ಪಾರ್ಟಿಯೊಂದಿಗೆ ತಮ್ಮ ನಟನಾ ಪ್ರಯಾಣವನ್ನು ಪ್ರಾರಂಭಿಸಿದ ರಶ್ಮಿಕಾ ನಂತರ  ಪುಷ್ಪ: ದಿ ರೈಸ್ ಮತ್ತು ಸರಿಲೇರು ನೀಕೆವ್ವರು ನಂತಹ ಹಿಟ್‌ ನೀಡಿ ಉದ್ಯಮದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದಾರೆ.

79

ಚಲನಚಿತ್ರಗಳ  ಹೊರತಾಗಿ  ರಶ್ಮಿಕಾ  ಕಲ್ಯಾಣ್ ಜ್ಯುವೆಲರ್ಸ್, ಎಪ್ಸನ್ ಇಂಡಿಯಾ, ಒನಿಟ್ಸುಕಾ ಟೈಗರ್ ಮತ್ತು ಪೆಪ್ಸಿಕೋನ 7UP ನಂತಹ ಫೇಮಸ್‌ ಬ್ರ್ಯಾಂಡ್ ಜೊತೆ ಕೈ ಜೋಡಿಸಿದ್ದಾರೆ. 

89

ಪ್ರತಿ ಪ್ರಾಜೆಕ್ಟ್‌ಗೆ ಅಂದಾಜು ರೂ 4 ಕೋಟಿ ಶುಲ್ಕದವರೆಗೆ ರಶ್ಮಿಕಾ ಚಾರ್ಜ್‌ ಮಾಡುತ್ತಾರೆ ಎನ್ನಲಾಗಿದೆ .ಈಗ ಅನಿಮಲ್ ನಲ್ಲಿನ ತನ್ನ ಪಾತ್ರಕ್ಕಾಗಿ ಅವರು ಅದೇ ಮೊತ್ತ ಕೇಳಿದ್ದಾರೆ ಎಂದು ವರದಿಗಳು ಹೇಳುತ್ತವೆ.

99

ಪ್ರಸುತ್ತ ಆಕೆಯ ನಿವ್ವಳ ಮೌಲ್ಯವು ಅಂದಾಜು 45 ಕೋಟಿ ರೂಪಾಯಿ ಎಂದು ವರದಿಗಳು ಸೂಚಿಸುತ್ತವೆ, ಚಲನಚಿತ್ರ ಗಳಿಕೆ ಮತ್ತು ಬ್ರ್ಯಾಂಡ್ ಅನುಮೋದನೆಗಳು ಅವರ ಆದಾಯದ ಪ್ರಮುಖ ಮೂಲವಾಗಿದೆ.

Read more Photos on
click me!

Recommended Stories