55 ವಯಸ್ಸಿನಲ್ಲಿ 18ರ ನಟಿಯನ್ನು ಮೂರನೇ ಮದುವೆಯಾಗಿ ವಿವಾದದಲ್ಲಿದ್ದ ಪ್ರಸಿದ್ದ ನಿರ್ಮಾಪಕನಿಗೆ ಹುಬ್ಬಳ್ಳಿ ನಂಟು!

Published : Dec 04, 2023, 02:34 PM IST

ಅವರು ಭಾರತೀಯ ಚಲನಚಿತ್ರ ಕಂಡ ಪ್ರಸಿದ್ದ ನಿರ್ಮಾಪಕ. ಆದರೆ ಇಬ್ಬರು ಹೆಂಡತಿಯರು ಇದ್ದಾಗಲೇ  55ನೇ ವಯಸ್ಸಿಗೆ 18 ವರ್ಷದ ನಟಿಯನ್ನು ಮೂರನೇ ಮದುವೆಯಾಗಿ ವಿವಾದದಲ್ಲಿ ಸಿಲುಕಿದ್ರು. 7 ಮಕ್ಕಳ ತಂದೆಯಾಗಿದ್ದ ಈ ನಿರ್ಮಾಪಕನಿಗೆ ಕರ್ನಾಟಕದ ಹುಬ್ಬಳ್ಳಿ ನಂಟಿತ್ತು. ಯಾರು ಆ ಸ್ಟಾರ್‌ ಇಲ್ಲಿದೆ ಸಂಪೂರ್ಣ ವಿವರ.

PREV
113
55 ವಯಸ್ಸಿನಲ್ಲಿ 18ರ ನಟಿಯನ್ನು ಮೂರನೇ ಮದುವೆಯಾಗಿ ವಿವಾದದಲ್ಲಿದ್ದ ಪ್ರಸಿದ್ದ ನಿರ್ಮಾಪಕನಿಗೆ ಹುಬ್ಬಳ್ಳಿ ನಂಟು!

50 ಮತ್ತು 60 ರ ದಶಕ  ಹಿಂದಿ ಚಿತ್ರರಂಗದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಇದು ಭಾರತೀಯ ಚಲನಚಿತ್ರ ನಿರ್ಮಾಣಕ್ಕೆ  ನವೋದ್ಯಮಿಗಳು ಆಗಮಿಸಿದ ಸಮಯ. ಜೊತೆಗೆ  ಬಾಲಿವುಡ್ ನಿರ್ದೇಶಕರು ಹೊಸ ಪ್ರಕಾರಗಳು ಮತ್ತು ತಂತ್ರಗಳನ್ನು ಪ್ರಯೋಗಿಸಿ, ಹಿಂದಿ ಚಿತ್ರರಂಗವನ್ನು ಗಡಿಯಾಚೆ ಕರೆದುಕೊಂಡು ಹೋದರು. 

213

ಈ ಹೊಸತನವನ್ನು ಭಾರತೀಯ ಚಲನಚಿತ್ರ ನಿರ್ಮಾಣದಲ್ಲಿ ತಂದ ಪ್ರಮುಖ ಹೆಸರುಗಳಲ್ಲಿ ವಿ ಶಾಂತಾರಾಮ್ ಅವರು ಕೂಡ ಒಬ್ಬರು. ತಮ್ಮ ವೈಯಕ್ತಿಕ ಜೀವನದಿಂದಲೇ ಹೆಚ್ಚು ಕುಖ್ಯಾತಿಯನ್ನು ಗಳಿಸಿದ್ದರೂ,  ತಮ್ಮ ತೆರೆಯ ಮೇಲಿನ ಕೆಲಸಕ್ಕಾಗಿ ಖ್ಯಾತಿಯನ್ನು ಗಳಿಸಿದ್ದರು.

313

ಮರಾಠಿ ಮತ್ತು ಹಿಂದಿ ಸಿನಿಮಾಗಳಲ್ಲಿನ ಮಾಡಿದ ಕೆಲಸಕ್ಕಾಗಿ ಹೆಸರುವಾಸಿಯಾದ ವಿ ಶಾಂತಾರಾಮ್ ಅವರು ವೈದ್ಯಕೀಯ ನಾಟಕ ಡಾ ಕೊಟ್ನಿಸ್ ಕಿ ಅಮರ್ ಕಹಾನಿ (1946), ಸಂಗೀತ ಝಣಕ್ ಝಣಕ್ ಝನಕ್ ಪಾಯಲ್ ಬಾಜೆ (1955), ಮತ್ತು ದೋ ಆಂಖೇನ್ ಬಾರಾ ಹಾತ್ (1957) ನಂತಹ ಹಿಟ್‌ ಚಲನಚಿತ್ರಗಳನ್ನು ಮಾಡಿದರು. 

413

ನೈತಿಕತೆ ಮತ್ತು ಜೈಲು ಸುಧಾರಣೆಗಳ ಮೇಲಿನ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಶಾಂತಾರಾಮ್ ಅವರ ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಆದರೆ ಹೆಚ್ಚಾಗಿ ದೂರದೃಷ್ಟಿಯ ನಿರ್ದೇಶಕರಾಗಿ ಖ್ಯಾತಿಯನ್ನು ಗಳಿಸಿದರು.  ಫಿಲ್ಮ್‌ಫೇರ್, ಗೋಲ್ಡನ್ ಗ್ಲೋಬ್, ಒಂದು ರಾಷ್ಟ್ರೀಯ ಪ್ರಶಸ್ತಿ ಮತ್ತು ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. 
 

513

ಶಾಂತಾರಾಮ್ ಅವರು 1901 ರಲ್ಲಿ ಕೊಲ್ಲಾಪುರದಲ್ಲಿ ಜನಿಸಿದರು. ಅವರು 20 ವರ್ಷದವರಾಗಿದ್ದಾಗ, ಅವರು ತಮ್ಮ ಮೊದಲ ಪತ್ನಿ ವಿಮಲಾಬಾಯಿಯನ್ನು ವಿವಾಹವಾದರು. ಇದು ಹಿರಿಯರು ನಿಂತು ಮಾಡಿದ  ವಿವಾಹವಾಗಿತ್ತು. ಇವರಿಬ್ಬರಿಗೆ ಮಗ ಪ್ರಭಾತ್ ಸೇರಿದಂತೆ ಮೂರು ಹೆಣ್ಣು ಮಕ್ಕಳು ಸೇರಿ ನಾಲ್ಕು ಮಕ್ಕಳಿದ್ದರು. ಮಗ ಪ್ರಭಾತ್ ಹೆಸರಿನಲ್ಲಿ  ತಮ್ಮ ಪ್ರಸಿದ್ಧ ಚಲನಚಿತ್ರ ಕಂಪನಿ ತೆರೆದರು. 

613

20 ರ ದಶಕದ ಉತ್ತರಾರ್ಧದಲ್ಲಿ, ಶಾಂತಾರಾಮ್ ಚಿತ್ರರಂಗಕ್ಕೆ ಪ್ರವೇಶಿಸಿದರು ಮತ್ತು ಅಂತಿಮವಾಗಿ ನಟಿ ಜಯಶ್ರೀ ಅವರನ್ನು ಭೇಟಿಯಾದರು. 1941 ರಲ್ಲಿ, ಶಾಂತಾರಾಮ್ ಅವರು ಪತ್ನಿ ವಿಂಬಲಾಬಾಯಿ ಇದ್ದಂತೆ ನಟಿ ಜಯಶ್ರೀ ಅವರನ್ನು ಕೂಡ ವಿವಾಹವಾದರು. ಎರಡನೇ ಪತ್ನಿಯಿಂದ ನಟಿ ರಾಜಶ್ರೀ ಸೇರಿದಂತೆ ಅವರು ಮೂರು ಮಕ್ಕಳನ್ನು ಹೊಂದಿದ್ದರು. 

713

1956 ರಲ್ಲಿ, ಭಾರತ ಸರ್ಕಾರವು ಬಹುಪತ್ನಿತ್ವದ ಕುರಿತಾದ ಕಾನೂನಿನಲ್ಲಿ ಬದಲಾವಣೆಗೆ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ಬಂದವು. ಬಹುಪತ್ನಿತ್ವವನ್ನು ನಿಷೇಧಿಸುವ ಪ್ರಸ್ತಾವಿತ ಹೊಸ ಕಾನೂನು ಜಾರಿಗೆ ಬರುವ ಮೊದಲು  ಶಾಂತಾರಾಮ್ ಎರಡು ಮದುವೆಯಾಗಿದ್ದರು.

813

ಬಹುಪತ್ನಿತ್ವ ಕಾನೂನು ಬಗ್ಗೆ ಚರ್ಚೆಯಾಗುತ್ತಿದ್ದ ಸಮಯದಲ್ಲಿ ಶಾಂತಾರಾಮ್ ತಮ್ಮ 55 ವರ್ಷ ವಯಸ್ಸಿನವರಾಗಿದ್ದಾಗ 18 ವರ್ಷದ ನಟಿ ಸಂಧ್ಯಾ ಅವರನ್ನು ಮದುವೆಯಾದರು.  ಸಂಧ್ಯಾ  ಅವರ ಚಲನಚಿತ್ರ ಝನಕ್ ಝನಕ್ ಪಾಯಲ್ ಬಾಜೆ ಚಿತ್ರದ ನಟಿಯಾಗಿದ್ದರು. 

913

ಬಹುಪತ್ನಿತ್ವವು ಆ ಸಮಯದಲ್ಲಿ ಕಾನೂನುಬದ್ಧವಾಗಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಾಗಿದ್ದರೂ, ಕಾನೂನು ಬದಲಾವಣೆಗೆ ಕೆಲವೇ ದಿನಗಳ ಮೊದಲು ಈ ಹಠಾತ್ ವಿವಾಹವು ದೇಶದಾದ್ಯಂತ ಸುದ್ದಿಯಾಯ್ತು. ಚಲನಚಿತ್ರ ನಿರ್ಮಾಪಕ ಟೀಕಿಗೆ ಒಳಗಾಗಿ  ವಿವಾದವನ್ನು ಸೃಷ್ಟಿಸಿತು. ಆದಾಗ್ಯೂ, ಶಾಂತಾರಾಮ್ ಅವರ ಕುಟುಂಬ ಜೀವನವು ಸಾಮರಸ್ಯದಿಂದ ಉಳಿಯಿತು.
 

1013

ಇವೆಲ್ಲ ವಿವಾದಾತ್ಮಕ ಘಟನೆ ನಡೆದು ಶಾಂತಾರಾಮ್ ಮತ್ತು ಜಯಶ್ರೀ ಒಂದೇ ವರ್ಷಕ್ಕೆ ವಿಚ್ಛೇದನ ಪಡೆದರು. ಆದರೆ ಸಂಧ್ಯಾ ಮತ್ತು ವಿಮಲಾಬಾಯಿ ಒಂದೇ ಮನೆಯಲ್ಲಿ ವರ್ಷಗಳ ಕಾಲ ವಾಸಿಸುತ್ತಿದ್ದರು. ಸಂಧ್ಯಾ ಮತ್ತು ಶಾಂತಾರಾಮ್ ಗೆ ಮಕ್ಕಳಿಲ್ಲ. ಗೌರವಾನ್ವಿತ ತಾಯಿಯಾಗಿ ವಿಮಲಾಬಾಯಿ ಮತ್ತು ಅವರ ಮಕ್ಕಳೊಂದಿಗೆ ಗಟ್ಟಿಯಾದ ಬಂಧವನ್ನು ಹೊಂದಿದ್ದರು.

1113

 ಶಾಂತಾರಾಮ್ ಅವರು 1990 ರಲ್ಲಿ ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಮೂವರು ಹೆಂಡತಿಯರು ಮತ್ತು ಅವರ ಏಳು ಮಕ್ಕಳನ್ನು ಅಗಲಿದ್ದರು. ನಾಲ್ಕು ವರ್ಷಗಳ ಕಾಲ ಹಾಸಿಗೆ ಹಿಡಿದ ವಿಮಲಾಬಾಯಿ 1996ರಲ್ಲಿ ನಿಧನರಾದರು. ಜಯಶ್ರೀ 2003ರಲ್ಲಿ ನಿಧನರಾದರು.  ಸಂಧ್ಯಾ ಈಗ ಕೇರಳದಲ್ಲಿ ನೆಲೆಸಿದ್ದಾರೆ.

1213

ವಿ.ಶಾಂತಾರಾಮ್ ಅವರ ಕುಟುಂಬವು 1917 ರಲ್ಲಿ ಖೋಲಾಪುರದಿಂದ ಹುಬ್ಬಳ್ಳಿಗೆ ಆರ್ಥಿಕ ಕಾರಣಕ್ಕೆ ವಲಸೆ ಬಂದಿದ್ದರು. ಹದಿಹರೆಯದ ಶಾಂತಾರಾಮ್ ಹುಬ್ಬಳ್ಳಿಯ ರೈಲ್ವೆ ವರ್ಕ್‌ಶಾಪ್‌ನಲ್ಲಿ ಫಿಟ್ಟರ್ ಆಗಿ ದಿನಕ್ಕೆ 8 ಆಣೆ (50 ಪೈಸೆ) ಸಂಬಳಕ್ಕೆ ಸೇರಿಕೊಂಡರು. ಸಂಜೆ ಹುಬ್ಬಳ್ಳಿಯ ನ್ಯೂ ಡೆಕ್ಕನ್ ಸಿನಿಮಾ ಥಿಯೇಟರ್‌ನಲ್ಲಿ ಡೋರ್ ಕೀಪರ್ ಆಗಿ ಕೆಲಸ ಮಾಡಿದರು. ಈ ಕೆಲಸಕ್ಕೆ ಸಂಭಾವನೆ ಪಡೆಯದಿದ್ದರೂ ಎಲ್ಲಾ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಸಿಗುತ್ತಿತ್ತು.

1313

ಹುಬ್ಬಳ್ಳಿಯ ನ್ಯೂ ಡೆಕ್ಕನ್ ಸಿನಿಮಾ ಥಿಯೇಟರ್‌ನಲ್ಲಿ ಅವರು ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರ ಚಲನಚಿತ್ರಗಳನ್ನು ವೀಕ್ಷಿಸಿ ಪ್ರಭಾವಿತರಾಗಿ ಛಾಯಾಗ್ರಹಣ, ಸೈನ್ ಬೋರ್ಡ್ ಪೇಂಟಿಂಗ್  ಎಲ್ಲವನ್ನು ಹುಬ್ಬಳ್ಳಿಯಲ್ಲಿ ಕಲಿತುಕೊಂಡರು. ಮೊದಲ ಬಾರಿಗೆ ಕ್ಯಾಮೆರಾವನ್ನು ಸ್ಪರ್ಶಿಸಿದಾಗ  ಹುಬ್ಬಳ್ಳಿಯನ್ನು ನೆನಪಿಸಿಕೊಂಡಿದ್ದರು. 
 

click me!

Recommended Stories