Rashmika Mandanna: ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು? ಈಗ ಎಲ್ಲಾ ಕಿರುಕುಳದ ಮಿತಿಗಳನ್ನೂ ಮೀರಲಾಗಿದೆ; ರಶ್ಮಿಕಾ ಸಿಡಿಮಿಡಿ!

Published : Mar 12, 2026, 07:13 PM IST

ಸದ್ಯ ರಶ್ಮಿಕಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಅವರ ಬೆಂಬಲಕ್ಕೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ನಿಂತಿದ್ದಾರೆ. ಮದುವೆಯ ಖುಷಿಯ ನಡುವೆ ಈ ರೀತಿಯ ವಿವಾದಗಳು ನಟಿ ಮತ್ತು ಅವರ ಕುಟುಂಬಕ್ಕೆ ಮಾನಸಿಕ ಒತ್ತಡವನ್ನುಂಟು ಮಾಡಿರುವುದಂತೂ ಸುಳ್ಳಲ್ಲ. ಮುಂದೇನು..?

PREV
18

ರಶ್ಮಿಕಾ ಮಂದಣ್ಣ ಗರಂ: ತಾಯಿಯ ಖಾಸಗಿ ಆಡಿಯೋ ಲೀಕ್ ಬೆನ್ನಲ್ಲೇ ಕಿಡಿಕಾರಿದ ನಟಿ!

ಹೈದರಾಬಾದ್: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಸಂಭ್ರಮ ಇನ್ನೂ ಮಾಸಿಲ್ಲ. ಫೆಬ್ರವರಿ 16 ರಂದು ರಾಜಸ್ಥಾನದ ಉದಯಪುರದಲ್ಲಿ ಈ ಸ್ಟಾರ್ ಜೋಡಿ ಅತ್ಯಂತ ಖಾಸಗಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

28

ಮದುವೆಯ ಸಂಭ್ರಮದಲ್ಲಿ ತೇಲುತ್ತಿದ್ದ ಕೊಡಗಿನ ಬೆಡಗಿಗೆ ಈಗ ದೊಡ್ಡ ಆಘಾತವೊಂದು ಎದುರಾಗಿದೆ. ಅವರ ತಾಯಿಯ ಹಳೆಯ ಖಾಸಗಿ ಸಂಭಾಷಣೆಯ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳಿಂದ ವೈರಲ್ ಆಗಿದ್ದು, ಈ ಬಗ್ಗೆ ರಶ್ಮಿಕಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

38

ಏನಿದು ವಿವಾದ?

ಮದುವೆಯಾದ ಕೆಲವೇ ದಿನಗಳಲ್ಲಿ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಅವರ ಆಡಿಯೋ ಕ್ಲಿಪ್‌ವೊಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಆಡಿಯೋದಲ್ಲಿ ಅವರು ರಶ್ಮಿಕಾ ಮತ್ತು ನಟ ರಕ್ಷಿತ್ ಶೆಟ್ಟಿ ಅವರ ಮುರಿದುಬಿದ್ದ ನಿಶ್ಚಿತಾರ್ಥದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಈ ವಿಚಾರ ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ರಶ್ಮಿಕಾ ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತೆ ಟೀಕೆಗಳು ವ್ಯಕ್ತವಾಗತೊಡಗಿವೆ.

48

'ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು?': ರಶ್ಮಿಕಾ ಪ್ರಶ್ನೆ

ಈ ಬೆಳವಣಿಗೆಯಿಂದ ತೀವ್ರ ನೊಂದಿರುವ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. "ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು? ಕಳೆದ ಎಂಟು ವರ್ಷಗಳಿಂದ ನನ್ನ ವಿರುದ್ಧ ಒಂದು ವಿಭಾಗದ ಮಾಧ್ಯಮಗಳು ಮತ್ತು ವ್ಯಕ್ತಿಗಳು ವ್ಯವಸ್ಥಿತವಾಗಿ ಅಪಪ್ರಚಾರ, ಕಿರುಕುಳ ಮತ್ತು ಉದ್ದೇಶಪೂರ್ವಕ ದಾಳಿಗಳನ್ನು ನಡೆಸುತ್ತಿದ್ದಾರೆ.

58

ನಾನು ಹೇಳದ ಮಾತುಗಳನ್ನು ತಿರುಚಲಾಗುತ್ತಿದೆ. ಕೇವಲ ವೀಕ್ಷಣೆ (Views) ಮತ್ತು ರೀಚ್‌ಗಾಗಿ ದ್ವೇಷವನ್ನು ಹರಡಲಾಗುತ್ತಿದೆ. ಇಷ್ಟು ದಿನ ನಾನು ಮೌನವಾಗಿದ್ದೆ, ಆದರೆ ಈಗ ಎಲ್ಲ ಮಿತಿಗಳನ್ನು ಮೀರಲಾಗಿದೆ" ಎಂದು ಕಿಡಿಕಾರಿದ್ದಾರೆ.

68

ಖಾಸಗಿತನಕ್ಕೆ ಧಕ್ಕೆ - ಕಾನೂನು ಕ್ರಮದ ಎಚ್ಚರಿಕೆ:

ವೈರಲ್ ಆಗಿರುವ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ರಶ್ಮಿಕಾ, "ಅದು ಸುಮಾರು ಎಂಟು ವರ್ಷಗಳ ಹಿಂದಿನ ಖಾಸಗಿ ಸಂಭಾಷಣೆ. ಸಂಬಂಧಪಟ್ಟವರ ಅನುಮತಿ ಇಲ್ಲದೆ ಅದನ್ನು ರೆಕಾರ್ಡ್ ಮಾಡಲಾಗಿದೆ. ನನ್ನ ವೈಯಕ್ತಿಕ ಜೀವನದ ಪ್ರಮುಖ ಘಟ್ಟದ ಸಮಯದಲ್ಲಿಯೇ (ಮದುವೆಯ ಸಂದರ್ಭ) ಇದನ್ನು ಬೇಕಂತಲೇ ಹಂಚಿಕೊಳ್ಳಲಾಗಿದೆ. ಇದು ನನ್ನ ಮತ್ತು ನನ್ನ ಕುಟುಂಬದ ಖಾಸಗಿತನದ ಮೇಲೆ ನಡೆದ ಗಂಭೀರ ದಾಳಿ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

78

ಅಭಿಮಾನಿಗಳಿಗೆ ಧನ್ಯವಾದ:

ತಮ್ಮ ಪೋಸ್ಟ್‌ನ ಕೊನೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿರುವ ಅವರು, "ಯಾರೋ ಅಪರಿಚಿತರು ಬಂದು ನಮ್ಮ ಬದುಕು ಹೇಗಿರಬೇಕು ಎಂದು ನಿರ್ಧರಿಸಲು ಸಾಧ್ಯವಿಲ್ಲ. ನಾವು ಹೇಗೆ ಬದುಕಬೇಕು ಎಂಬ ನಿರ್ಧಾರ ನಮ್ಮದು. ನನಗೆ ಬೆಂಬಲ ನೀಡುತ್ತಿರುವ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

88

ಸದ್ಯ ರಶ್ಮಿಕಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಅವರ ಬೆಂಬಲಕ್ಕೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ನಿಂತಿದ್ದಾರೆ. ಮದುವೆಯ ಖುಷಿಯ ನಡುವೆ ಈ ರೀತಿಯ ವಿವಾದಗಳು ನಟಿ ಮತ್ತು ಅವರ ಕುಟುಂಬಕ್ಕೆ ಮಾನಸಿಕ ಒತ್ತಡವನ್ನುಂಟು ಮಾಡಿರುವುದಂತೂ ಸುಳ್ಳಲ್ಲ. ಇದು ಎಲ್ಲಿಗೆ ಹೋಗಿ ತಲುಪಲಿದೆ, ರಶ್ಮಿಕಾ ಅವರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories