ವಿಕ್ಕಿ ಕೌಶಲ್ ಎದೆಗೊರಗಿದ ರಶ್ಮಿಕಾ ಮಂದಣ್ಣ, ಜಸ್ಟೀಸ್ ಫಾರ್ ವಿಜಯ್ ದೇವರಕೊಂಡ ಅಂತಿದ್ದಾರೆ ಫ್ಯಾನ್ಸ್ !

First Published | Aug 3, 2024, 4:26 PM IST

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆಯಾಗಿ ಫೋಟೋಗಳಿಗೆ ಪೋಸ್ ನೀಡಿದ್ದು, ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 
 

ಬಾಲಿವುಡ್ ನ ಟಾಲ್ ಆಂಡ್ ಹ್ಯಾಂಡ್ಸಮ್ ನಟ ವಿಕ್ಕಿ ಕೌಶಲ್ (Vicky Kaushal) ಇತ್ತೀಚೆಗಷ್ಟೇ ತೃಪ್ತಿ ಧಿಮ್ರಿ ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಭಾರಿ ಸುದ್ದಿಯಾಗಿತ್ತು. ಇದೀಗ ನಟ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಜೊತೆಗೆ ಫೋಟೋ ಶೂಟ್ ಮಾಡಿಸುವ ಮೂಲಕ ಸುದ್ದಿಯಾಗಿದ್ದಾರೆ. 
 

ಕೆಲ ದಿನಗಳ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಕ್ಕಿ ಕೌಶಲ್ ಜೊತೆಯಾಗಿ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಫಾಲ್ಗುಗಿ ಶೇನ್ ಪಿಕಾಕ್ ಕಲೆಕ್ಷನ್ ಅವರ ಸುಂದರವಾದ ವೆಡ್ಡಿಂಗ್ ವೇರ್ ಧರಿಸಿ ಶೋ ಸ್ಟಾಪರ್ ಆಗಿ ರ್ಯಾಂಪ್ ವಾಕ್ ಮಾಡಿದ್ದರು. 
 

Tap to resize

ವಿಕ್ಕಿ ಮತ್ತು ರಶ್ಮಿಕಾ ಜೊತೆಯಾಗಿ ಐತಿಹಾಸಿಕ ಚಿತ್ರ ಚವ್ವದಲ್ಲಿ ನಟಿಸಲಿದ್ದು, ಅದಕ್ಕೂ ಮುನ್ನ ಇಬ್ಬರು ಜೊತೆಯಾಗಿ ಫ್ಯಾಷನ್ ಶೋದಲ್ಲಿ ಕೈಕೈ ಹಿಡಿದು ರ್ಯಾಂಪ್ ವಾಕ್ ಮಾಡೋ ಮೂಲಕ ಮೋಡಿ ಮಾಡಿದ್ದರು. ಕಾರ್ಯಕ್ರಮದ ಬಳಿಕ ಇಬ್ಬರೂ ಜೊತೆಯಾಗಿ ಫೋಟೋ ಶೂಟ್ ಕೂಡ ಮಾಡಿದ್ದಾರೆ. 
 

ರಶ್ಮಿಕಾ ಮಂದಣ್ಣ  ಬಿಳಿ ಬಣ್ಣದ ಲೆಹೆಂಗಾ ಧರಿಸಿದ್ದು, ಅದರ ಮೇಲೆ ಗೋಲ್ಡನ್ ವರ್ಕ್ ಇದೆ. ಇದರ ಜೊತೆಗೆ ನಟಿ ಮುಂದಾಲೆ ಧರಿಸಿದ್ದಾರೆ. ರಶ್ಮಿಕಾಗೆ ಪರ್ಫೆಕ್ಟ್ ಮ್ಯಾಚ್ ಆಗುವಂತೆ ವಿಕ್ಕಿ ಐವರಿ ಮತ್ತು ಬಿಳಿ ಬಣ್ಣದ ಬಂದ್‌ಗಲಾ ಶೆರ್ವಾನಿ ಧರಿಸಿದ್ದಾರೆ. 
 

ರಶ್ಮಿಕಾ ಮತ್ತು ವಿಕ್ಕಿ ಕೌಶಲ್ ಜೋಡಿ ಜೊತೆಯಾಗಿ ವಧು ವರರಂತೆ ಫೋಟೋ ಶೂಟ್ (photo shoot) ಮಾಡಿಸಿಕೊಂಡಿದ್ದು, ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ಇವರಿಬ್ಬರ ಕೆಮೆಸ್ಟ್ರಿ ನೋಡಿ, ಇಂಟರ್ನೆಟ್‌ನಲ್ಲಿ ಭಾರಿ ಪರ ವಿರೋಧಗಳ ಚರ್ಚೆಯಾಗುತ್ತಿವೆ. 
 

ವಿಕ್ಕಿ ಮತ್ತು ರಶ್ಮಿಕಾ ಜೋಡಿ ನೋಡಿ ಪರ್ಫೆಕ್ಟ್ ಜೋಡಿ ಎಂದಿದ್ದಾರೆ ಕೆಲವರು, ಇನ್ನೂ ಕೆಲವರು ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್‌ಗೆ ಹೆಂಡ್ತಿಯಾಗಿದ್ದೋರನ್ನೆಲ್ಲಾ ಇವನು ಕದಿತಿದ್ದಾನೆ ಎಂದಿದ್ದಾರೆ. ಅಲ್ಲದೇ ಇಬ್ಬರು ಜೋಡಿಯಾಗಿ ನಟಿಸಿರುವ ಚವ್ವ ಸಿನಿಮಾ ನೋಡುವ ಕಾತುರ ಸಹ ವ್ಯಕ್ತಪಡಿಸಿದ್ದಾರೆ. 
 

ಇನ್ನು ವಿಕ್ಕಿ -ರಶ್ಮಿಕಾ ಇಷ್ಟೊಂದು ಕ್ಲೋಸ್ ಆಗಿ ಫೋಟೋ ಶೂಟ್ ಮಾಡಿರೋದನ್ನ ನೋಡಿ, ಜಸ್ಟೀಸ್ ಫಾರ್ ವಿಜಯ್ ದೇವರಕೊಂಡ, ರಶ್ಮಿಕಾ -ವಿಜಯ್ ಜೋಡಿಯೇ ಚೆಂದ ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ವಿಕ್ಕಿ ಸರ್ ನೀವು ಈ ರೀತಿಯೆಲ್ಲಾ ಫೋಟೊ ಹಾಕಿದ್ರೆ, ನಿಮ್ಮ ಹೆಂಡ್ತಿ ಏನು ಹೇಳೋದೆ ಇಲ್ವಾ ಎಂದು ಕೇಳಿದ್ದಾರೆ. 
 

Latest Videos

click me!