ಹೂವಿನ ಡ್ರೆಸ್‌ನಲ್ಲಿ ಮಿಂಚಿದ ಪಟಾಕ ಪೋರಿ ನಭಾ ನಟೇಶ್: ಬಾನಿಂದ ಜಾರಿದ ಬೆಳದಿಂಗಳ ಬಾಲೆ ಎಂದ ಫ್ಯಾನ್ಸ್‌!

First Published | Aug 2, 2024, 5:05 PM IST

ಟಾಲಿವುಡ್ 'ಡಾರ್ಲಿಂಗ್' ಸಿನಿಮಾ ಮೂಲಕ ಮತ್ತೆ ಬೆಳ್ಳಿಪರದೆ ಮೇಲೆ ರೀ-ಎಂಟ್ರಿ ಕೊಟ್ಟ ನಭಾ ನಟೇಶ್‌ ನಟನೆಗೆ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅದೇ ಖುಷಿಯಲ್ಲಿ ಇದೀಗ ನಭಾ ಹೊಸ ಫೋಟೋಶೂಟ್‌ನಲ್ಲಿ ಕಂಗೊಳಿಸಿದ್ದಾರೆ.

ಶಿವರಾಜ್‌ಕುಮಾರ್ ಅಭಿನಯದ ವಜ್ರಕಾಯ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶೃಂಗೇರಿ ಮೂಲದ ನಭಾ ನಟೇಶ್‌ ಟಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದು, ಇದೀಗ ಒಂದರ ಹಿಂದೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ಳಿತ್ತಿದ್ದಾರೆ. 
 

ಕನ್ನಡಿಗರಿಗೆ ಪಟಾಕ ಪೋರಿ ಅಂತ ಚಿರಪರಿಚಿತರಾದ ನಭಾ ನಟೇಶ್‌ ಸಿನಿಮಾಗಳಿಗಿಂತಲೂ ಫೋಟೋ ಶೂಟ್‌ನಲ್ಲಿಯೇ ಹೆಚ್ಚು ಮಿಂಚುತ್ತಿರುತ್ತಾರೆ. ಹಾಗೆ ಇದೀಗ ಅವರ ಹೊಸ ಫೋಟೋಶೂಟ್ ಭರ್ಜರಿಯಾಗಿ ವೈರಲ್ ಆಗಿದೆ.

Tap to resize

ಪುಟಾಣಿ ನೀಲಿ ಬಣ್ಣದ ಹೂವಿನ ಡ್ರೆಸ್‌ನಲ್ಲಿ ನಭಾ ನಟೇಶ್‌ ಮಿಂಚಿದ್ದಾರೆ, ಅವರ ಆಕರ್ಷಕವಾದ ನಗು, ಅವರು ಧರಿಸಿದ ಹೂವಿನ ಡ್ರೆಸ್‌ನಲ್ಲಿನ ದಳಗಳು ಸಖತ್ ಹೈಲೈಟ್ ಆಗಿದೆ. ವಿಶೇಷವಾಗಿ ಫೋಟೋ ಬ್ಯಾಕ್‌ಗ್ರೌಂಡ್‌ನಲ್ಲಿನ ಚಂದಿರ ನೋಡುಗರ ಮೋಡಿ ಮಾಡಿದೆ.
 

ಶಾರ್ಟ್ ಫ್ಲವರ್ ಡ್ರೆಸ್‌ನಲ್ಲಿ ಮಿಂಚಿರುವ ನಭಾ ನಟೇಶ್ ಫೋಟೋಶೂಟ್‌ ನೋಡಿದ ಫ್ಯಾನ್ಸ್ ಲೈಕ್ಸ್ ಮತ್ತು ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಬಾನಿಂದ ಜಾರಿದ ಬೆಳದಿಂಗಳ ಬಾಲೆ ನೀನು, ಸೋ ಇಂಪ್ರೆಸ್ಸೀವ್, ಲುಕ್ಕಿಂಗ್ ಸೋ ಪ್ರೆಟ್ಟಿ ಜೊತೆಗೆ ರೆಡ್ ಹಾರ್ಟ್ ಎಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ.

ಅಪಘಾತದಿಂದ ಚೇತರಿಸಿಕೊಂಡ ಬಳಿಕ ನಭಾ ತೆಲುಗಿನ  ಡಾರ್ಲಿಂಗ್ ಚಿತ್ರದಲ್ಲಿ ಸಖತ್ತಾಗಿ ಮಿಂಚಿದ್ದು, ಆನಂದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಡಾರ್ಲಿಂಗ್ ಚಿತ್ರದಲ್ಲಿ ನಟ ಪ್ರಿಯಾದರ್ಶಿಗೆ ನಾಯಕಿಯಾಗಿ ನಭಾ ಅಭಿನಯಿಸಿದ್ದಾರೆ.

ಜೊತೆಗೆ ನಭಾ ನಟೇಶ್ 'ಸ್ವಯಂಭು' ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಕೆಲಸ ಕೂಡ ಬಿರುಸಾಗಿ ನಡೆಯುತ್ತಿದೆ. ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್‌ಗೆ ನಾಯಕಿಯಾಗಿ ನಭಾ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಸ್ಯಾಂಡಲ್‌ವುಡ್ ಅಲ್ಲದೇ ನಭಾ ನಟೇಶ್ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆ ಎಲ್ಲ ಚಿತ್ರಗಳಲ್ಲಿ ರಾಮ್ ಪೋತಿನೇನಿ ಅಭಿನಯದ 'ಇಸ್ಮಾರ್ಟ್ ಶಂಕರ್' ಸಿನಿಮಾ ಹೆಚ್ಚು ಗಮನ ಸೆಳೆದಿತ್ತು. ನಂತರ ಡಿಸ್ಕೋ ರಾಜಾ ಸಿನಿಮಾದಲ್ಲೂ ನಭಾ ನಟೇಶ್ ಅಭಿನಯ ಜನರಿಗೆ ಸಖತ್ ಇಷ್ಟವಾಗಿತ್ತು.

Latest Videos

click me!