ಶಾರುಖ್‌ಗೆ ಮತ್ತಿಟ್ಟ ದೀಪಿಕಾ ಪಡುಕೋಣೆ ಫೋಟೋ ವೈರಲ್‌; ಪತಿ ರಣವೀರ್‌ ಪ್ರತಿಕ್ರಿಯಿಸಿದ್ದು ಹೇಗೆ?

Published : Sep 16, 2023, 04:20 PM IST

ದೀಪಿಕಾ ಪಡುಕೋಣೆ (Deepika Padukone) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಫೋಟೋದಲ್ಲಿ ಅವರು ಶಾರುಖ್‌ ಖಾನ್‌ (Shah Rukh Khan) ಕೆನ್ನೆಗೆ ಮುತ್ತಿಡುತ್ತಿದ್ದಾರೆ. ಈ ಫೋಟೋ ಸಖತ್‌ ವೈರಲ್‌ ಆಗಿದೆ. ಅದರ ಜೊತೆಗೆ ಅವರ ಪತಿ ರಣವೀರ್‌ ಸಿಂಗ್‌ (Ranveer Singh)  ಪ್ರತಿಕ್ರಿಯೆ ಇಂಟರ್‌ನೆಟ್‌ನಲ್ಲಿ ಎಲ್ಲರಗಮನ ಸೆಳೆದಿದೆ. ಪತ್ನಿ ದೀಪಿಕಾರ ಫೋಟೋ ರಣವೀರ್‌ ಏನು ಕಾಮೆಂಟ್‌ ಮಾಡಿದ್ದಾರೆ ನೋಡಿ.

PREV
18
ಶಾರುಖ್‌ಗೆ ಮತ್ತಿಟ್ಟ ದೀಪಿಕಾ ಪಡುಕೋಣೆ ಫೋಟೋ ವೈರಲ್‌; ಪತಿ ರಣವೀರ್‌ ಪ್ರತಿಕ್ರಿಯಿಸಿದ್ದು ಹೇಗೆ?

ಇತ್ತೀಚೆಗಷ್ಟೇ ಬಿಡುಗಡೆಯಾದ ಜವಾನ್ ಸಿನಿಮಾದ ಮೆಗಾ ಯಶಸ್ಸಿನ ಸಂಭ್ರಮದಲ್ಲಿರುವ ಶಾರುಖ್ ಖಾನ್ ಶುಕ್ರವಾರ (ಸೆಪ್ಟೆಂಬರ್ 15) ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. 

 

28

ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ ಸಹ ಈ ಪ್ರೆಸ್ ಮೀಟಿನಲ್ಲಿ ಸೇರಿಕೊಂಡಿದ್ದಾರೆ. ಈವೆಂಟ್‌ನ ನಂತರ, ದೀಪಿಕಾ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

38

ಕಪ್ಪು, ಸೀಕ್ವಿನ್ಡ್ ಬಾರ್ಡರ್ ಮತ್ತು ಹಾಲ್ಟರ್-ನೆಕ್ ಬ್ಲೌಸ್‌ನೊಂದಿಗೆ ಬಿಳಿ ಶಿಫಾನ್ಫೋ ಸೀರೆಯಲ್ಲಿ ದೀಪಿಕಾ ಕೆಲವು ಸ್ಟನ್ನಿಂಗ್‌ ಫೋಟೋಗಳ ಸರಣಿಯನ್ನು ಹಂಚಿಕೊಂಡಿದ್ದಾರೆ.

48

ಆದರೆ  ದೀಪಿಕಾ ಪಡುಕೋಣೆ ಅವರ ಪೋಸ್ಟ್‌ನಲ್ಲಿನ ಕೊನೆ ಫೋಟೋವು ತಕ್ಷಣವೇ  ಅಭಿಮಾನಿಗಳ ಗಮನ  ಮಾತ್ರವಲ್ಲದೇ  ಪತಿ ರಣವೀರ್‌ ಸಿಂಗ್‌ ಗಮನವನ್ನೂ ಸೆಳೆಯಿತು.  

58

ದೀಪಿಕಾ ಪಡುಕೋಣೆ  ಅವರು ಶಾರುಖ್‌ಖಾನ್‌ ಅವರ ಕೆನ್ನೆಗೆ ಮುತ್ತಿಡುವ ಮೋಹಕವಾದ ಫೋಟೋ ಆದಾಗಿದೆ ಹಾಗೂ ಫೋಟೋ ಸಖತ್‌ ವೈರಲ್‌ ಆಗಿದೆ. 

68

ರಣವೀರ್ ಸಿಂಗ್ ಜವಾನ್ ಹಾಡಿನ ಸಾಹಿತ್ಯ ಬರೆಯುವ ಮೂಲಕ ಫೋಟೋಗೆ  'ಇಷ್ಕ್ ಮೇ ದಿಲ್ ಬನಾ ಹೈ. ಇಷ್ಕ್ ಮೇ ದಿಲ್ ಫನ್ನಾ ಹೈ. ಹೋ...' ಎಂದು ರಣವೀರ್‌ ಸಿಂಗ್‌ ಬರೆದಿದ್ದಾರೆ.

78

 ಜವಾನ್ ಸಕ್ಸಸ್ ಪ್ರೆಸ್ ಈವೆಂಟ್‌ನಲ್ಲಿ, ದೀಪಿಕಾ ಶಾರುಖ್ ಖಾನ್ ಅಭಿನಯದ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವುದರ ಕುರಿತು ಮಾತನಾಡಿದ್ದಾರೆ.

88

'ನಾನು ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರೀಕರಣದಲ್ಲಿದ್ದೆ. ಅಟ್ಲಿ ಮತ್ತು ಶಾರುಖ್ ಹೈದರಾಬಾದ್‌ಗೆ ಬಂದರು , ಅವರು ನನಗೆ ಇಡೀ ಕಥೆಯನ್ನು ವಿವರಿಸಿದರು, ಅವರು ಈ ಪ್ರಮುಖ ಭಾಗವಾದ ಐಶ್ವರ್ಯಾ ಬಗ್ಗೆ ಹೇಳಿದರು. ಪಾತ್ರದ ಉದ್ದದ ಬಗ್ಗೆ ಅಲ್ಲ. ಆದರೆ ಇಡೀ ಚಿತ್ರದ ಮೇಲೆ ಈ ಪಾತ್ರ ಬೀರುವ ಪ್ರಭಾವದ ಬಗ್ಗೆ ನನಗೆ ಮುಖ್ಯವಾಯಿತು.ಎರಡು ಕಾರಣಕ್ಕೆ ಒಪ್ಪಿಕೊಂಡೆ. ಒಂದು ಅವರ ಮೇಲಿನ ನನ್ನ ಪ್ರೀತಿ ಎಲ್ಲರಿಗೂ ತಿಳಿದಿದೆ, ಅವರು ಏನು ಬಯಸುತ್ತೇರೋ, ನಾನು ಯಾವಾಗಲೂ ಇರುತ್ತೇನೆ. ಮತ್ತು, ಎರಡು, ಚಲನಚಿತ್ರವು ತುಂಬಾ ವಿಶೇಷವಾಗಿತ್ತು. ಯಾವುದೇ ನಟ ಅದಕ್ಕೆ ಒಪ್ಪಿಗೆ ಎಂದು ಹೇಳಬಹುದು. ಶಾರುಖ್ ಮತ್ತು ನಾನು ಒಟ್ಟಿಗೆ ಕೆಲಸ ಮಾಡುವಾಗ, ನಾವು ಸಹನಟರಲ್ಲ. ಇದು ಫಾರ್ಮಲ್‌ ಅಲ್ಲ. ಕೇವಲ ಬಹಳಷ್ಟು ಪ್ರೀತಿ ಇದೆ. ಅದು ಯಾವಾಗಲೂ ಬರುತ್ತದೆ' ಎಂದು ದೀಪಿಕಾ ಪಡುಕೋಣೆ  ಹೇಳಿದರು.

Read more Photos on
click me!

Recommended Stories