ರಣವೀರ್ ಸಿಂಗ್ ಅವರ ಜಯೇಶ್‌ಭಾಯ್ ಜೋರ್ದಾರ್ ಸಿನಿಮಾದ ಹಾಡು 'ಫೈರ್‌ಕ್ರ್ಯಾಕರ್' ಬಿಡುಗಡೆಗಾಗಿ ಮುಂಬೈನ ಕಾಲೇಜಿಗೆ ತಲುಪಿದರು. ಈ ಸಮಯದಲ್ಲಿ ರಣವೀರ್ ಅವರ ಎನರ್ಜಿ ಸಹ ಎಂದಿನಂತೆ ಹೈ ಇತ್ತು.
ರಣವೀರ್ ಸಿಂಗ್ ಅಭಿನಯದ ಜಯೇಶ್‌ಭಾಯ್ ಜೋರ್ದಾರ್ ಸಿನಿಮಾದ ಮೊದಲ ಹಾಡು ಫೈರ್‌ಕ್ರಾಕರ್ ಇದೀಗ ಹೊರಬಂದಿದೆ. ಈ ಲವಲವಿಕೆಯ ಟ್ರ್ಯಾಕ್‌ಗೆ ರಣವೀರ್ ಅವರ ಮ್ಯೂವ್ಸ್‌ಗಳು ಪರ್ಫೇಕ್ಟ್ ಆಗಿದ್ದು ಹಾಡು ಟೋಟಲ್ ಫನ್‌ನಿಂದ ಕೂಡಿದೆ
ಫೈರ್‌ಕ್ರ್ಯಾಕರ್ ಹಾಡಿನ ಸಾಂಗ್ ಲಾಂಚ್‌ನಲ್ಲಿ, ರಣವೀರ್ ಸಿಂಗ್ ತನ್ನ ನಿಜ ಜೀವನದ 'ಫೈರ್‌ಕ್ರ್ಯಾಕರ್' ದೀಪಿಕಾ ಪಡುಕೋಣೆಯನ್ನು ಹೊಗಳುವುದನ್ನು ನಟ ಮರೆಯಲಿಲ್ಲ. ದೀಪಿಕಾ ಸಿಕ್ಕಿದ್ದಕ್ಕೆ ಅವರು ಅದೃಷ್ಟವಂತರು ಎಂದು ಹೇಳಿಕೊಂಡಿದ್ದಾರೆ 'ನಾನು ಲಕ್ಕಿ, ನನ್ನ ಮನೆಯಲ್ಲಿ ಲಕ್ಷ್ಮಿ ಇದ್ದಾಳೆ' ಎಂದಿದ್ದಾರೆ ರಣವೀರ್.
ಮುಂಬೈನ ಕಾಲೇಜಿನಲ್ಲಿ ಹಾಡಿನ ಬಿಡುಗಡೆಯಲ್ಲಿ ತನ್ನ ಎನರ್ಜಿ ಪ್ರದರ್ಶಿಸಿದ ರಣವೀರ್ ಸಿಂಗ್ ಅವರು ಈ ಕಾರ್ಯಕ್ರಮಕ್ಕಾಗಿ ಕೂಲ್ ಮತ್ತು ವರ್ಣರಂಜಿತ ಲುಕ್ ಅನ್ನು ಧರಿಸಿದ್ದರು.ಈ ಸಮಯದಲ್ಲಿ ನಟ ಕಲರ್ ಕಲರ್ ಪಟ್ಟೆ ಪ್ಯಾಂಟ್‌ನೊಂದಿಗೆ ಹೂವಿನ ಪ್ರಿಂಟ್ ಶರ್ಟ್ ಧರಿಸಿ ಕಾಣಿಸಿಕೊಂಡರು.
ಕಳೆದ ವಾರ ರಣವೀರ್ ಸಿಂಗ್ ಅಭಿನಯದ 'ಜಯೇಶ್‌ಭಾಯ್ ಜೋರ್ದಾರ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಜಯೇಶ್‌ಭಾಯ್ ಜೋರ್ದಾರ್' ಚಿತ್ರ ಗುಜರಾತ್ ಹಿನ್ನಲೆಯಲ್ಲಿ ನಿರ್ಮಾಣವಾಗಿದೆ.
ಒಂದು ಹಳ್ಳಿಯಲ್ಲಿ ಒಬ್ಬ ಸರಪಂಚ್ (ಬೊಮನ್ ಇರಾನಿ) , ಅವನ ಮಗ ಜಯೇಶ್ (ರಣವೀರ್ ಸಿಂಗ್). ಬೊಮನ್ ಇರಾನಿ ಅವರು ಸರಪಂಚ್ ಪಾತ್ರದಲ್ಲಿದ್ದಾರೆ. ಜಯೇಶ್ ಪತ್ನಿ ತಾಯಿಯಾಗಲಿದ್ದಾರೆ. ಮನೆಯಲ್ಲಿ ಕುಲದೀಪಕ್ ಅಂದರೆ ಗಂಡು ಬೇಕು ಬಯಸುತ್ತಾರೆ ಆದರೆ ಅವರ ಪತ್ನಿ (ಶಾಲಿನಿ ಪಾಂಡೆ) ಮಗಳನ್ನು ಹೊಂದಲಿದ್ದಾರೆ.
ಬೊಮನ್ ಇರಾನಿ ಮತ್ತು ಅವರ ಪತ್ನಿ ತಮ್ಮ ಸೊಸೆಯ ಅಬಾರ್ಷನ್ ಮಾಡಲು ಬಯಸುತ್ತಾರೆ. ಆದರೆ ರಣವೀರ್ ಸಿಂಗ್‌ಗೆ ಇದು ಇಷ್ಟವಿಲ್ಲ. ಜಯೇಶ್ ತನ್ನ ತಂದೆಯ ವಿರುದ್ಧ ಬಂಡಾಯವೇಳುತ್ತಾನೆ. ಟ್ರೈಲರ್ ತುಂಬಾ ತಮಾಷೆಯಾಗಿದೆ. ಮೇ 13 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.