ಇಂದು ಅಂದರೆ ಏಪ್ರಿಲ್ 25ರಂದು ನಡೆದ ಸೋಹಾ ಅಲಿ ಖಾನ್ ಮತ್ತು ಕುನಾಲ್ ಕೆಮ್ಮು ಅವರ ಪುಸ್ತಕದ ಬಿಡುಗಡೆ ಈವೆಂಟ್‌ಗೆ ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್ ಮತ್ತು ತೈಮೂರ್ ಅಲಿ ಖಾನ್ ಚಿಯರ್ ಲೀಡರ್‌ಗಳಾಗಿ ಆಗಮಿಸಿದರು.
ಈ ಸಮಯದಲ್ಲಿ ಕರೀನಾ ಕಪೂರ್ ಸಖತ್ ಸ್ಟೈಲಿಸ್ಟ್ ಆಗಿ ಕಾಣುತ್ತಿದ್ದರು. ಕರೀನ ಆಲೀವ್ ಗ್ರೀನ್ ಪ್ಯಾಂಟ್ ಜೊತೆ ಬಿಳಿಯ ಓವರ್ ಸೈಜ್ ಶರ್ಟ್ ಧರಸಿದ್ದರು. ತಮ್ಮ ಔಟ್‌ಫಿಟ್ ಜೊತೆ ಸನ್‌ಗ್ಲಾಸ್ ಮತ್ತು ಸ್ಟಿಲೆಟೊಸ್ ಪೇರ್ ಮಾಡಿಕೊಂಡಿದ್ದರು ಬೇಬೊ.
ಅದೇ ಸಮಯದಲ್ಲಿ ಸೈಫ್ ಆಲಿ ಖಾನ್ ಲೈಟ್ ಬ್ಲ್ಯೂ ಜೀನ್ಸ್ ಜೊತೆ ವೈಟ್ ಟೀ ಶರ್ಟ್‌ನಲ್ಲಿ ಸಖತ್ ಕೂಲ್ ಹಾಗೂ ಡ್ಯಾಶಿಂಗ್ ಆಗಿ ಕಾಣಿಸಿಕೊಂಡರು.
ಸೈಫ್ ಮತ್ತು ಕರೀನಾ ಸೊಗಸಾದ ನೋಟವನ್ನು ಆರಿಸಿಕೊಂಡರೆ, ತೈಮೂರ್ ಜೀನ್ಸ್‌ನೊಂದಿಗೆ ಕ್ಯಾಶುಯಲ್ ಟೀನಲ್ಲಿ ಕಾಣಿಸಿಕೊಂಡಿದ್ದು ಫೋಟೋಗೆ ಪೋಸ್ ಕೊಡಲು ನಿರಾಕರಿಸುವುದು ಕಂಡು ಬಂದಿದೆ.
ಸೋಹಾ ಆಲಿ ಖಾನ್ ಪ್ಲೋರಲ್ ಪ್ರಿಂಟ್ ಡ್ರೆಸ್‌ನಲ್ಲಿದ್ದರೆ ಕುನಾಲ್ ಕ್ಯಾಶುಯಲ್ ಲುಕ್ ಆಯ್ಕೆ ಮಾಡಿಕೊಂಡರು. ಇನಾಯಾ ಕೂಡ ತನ್ನ ಅಮ್ಮ ಸೋಹಾರಂತೆ ಹೂವಿನ ಪ್ರಿಂಟ್ ಇರುವ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಳು.
ಸೋಹಾ ಅಲಿ ಖಾನ್ ಮತ್ತು ಕುನಾಲ್ ಕೆಮ್ಮು ಅವರು ಉದ್ಯಮದ ಸ್ನೇಹಿತರು ಮತ್ತು ಅವರ ಮಕ್ಕಳ ನಡುವೆ ದಂಪತಿಗಳು ಜೊತೆಯಾಗಿ ಬರೆದಿರುವ ಇನ್ನಿ ಮತ್ತು ಬೋಬೋ (Inni and BoBo) ಪುಸ್ತಕವನ್ನು ಬಿಡುಗಡೆ ಮಾಡಿದರು.
ಬಿಡುಗಡೆ ಸಮಾರಂಭದಲ್ಲಿ ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ದಿಯಾ ಮಿರ್ಜಾ, ಗೇಬ್ರಿಯೆಲಾ, ಪ್ರಜ್ಞಾ ಕಪೂರ್ ತಮ್ಮ ಮಕ್ಕಳೊಂದಿಗೆ ಇದ್ದರು ಎಂದು ವರದಿಯಾಗಿದೆ. ಈ ಇವೆಂಟ್ ಇಂದು ಮಧ್ಯಾಹ್ನ ಮುಂಬೈನ ಬಾಂದ್ರಾದ ಟೈಟಲ್ ವೇವ್ಸ್‌ನಲ್ಲಿ ನಡೆದಿದೆ.