ಫ್ಲಾಪ್‌ ಮೇಲೆ ಫ್ಲಾಪ್‌ ಸಿನೆಮಾ ಕೊಡುತ್ತಿದ್ದರೂ, ರಣ್ವೀರ್‌ ಪಡೀತಾರೆ ಭಾರೀ ದೊಡ್ಡ ಸಂಭಾವನೆ

First Published | Jul 5, 2022, 5:31 PM IST

ಜುಲೈ 6 ರಂದು ಬಾಲಿವುಡ್‌ ನಟ ರಣವೀರ್ ಸಿಂಗ್ (Ranveer Singh) 37 ನೇ ವರ್ಷಕ್ಕೆ ಕಾಲಿಡಲಿದ್ದಾರೆ.  1985 ರಲ್ಲಿ ಮುಂಬೈನಲ್ಲಿ ಜನಿಸಿದ ರಣವೀರ್ ಕಳೆದ 12 ವರ್ಷಗಳಿಂದ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಈ ವರ್ಷಗಳಲ್ಲಿ, ರಣವೀರ್ ಸುಮಾರು 15 ಚಿತ್ರಗಳಲ್ಲಿ ಕೆಲಸ ಮಾಡಿದರು, ಅದರಲ್ಲಿ ಅವರ 6 ಚಿತ್ರಗಳು ಮಾತ್ರ ಹಿಟ್ ಆಗಿದ್ದವು.  ಆದರೆ ಅವರ ಶುಲ್ಕದ ಬಗ್ಗೆ ಹೇಳುವುದಾದರೆ ಅವರು ಹೊಸ ಮತ್ತು ಹಲವು  ನಾಯಕರನ್ನು ಸೋಲಿಸಿದ್ದಾರೆ. ಅಂದಹಾಗೆ, ರಣವೀರ್‌ಗೆ ಬಾಲಿವುಡ್‌ನ ಪ್ರಯಾಣವು ಸುಲಭವಲ್ಲ. ಅವರು ಚಲನಚಿತ್ರವನ್ನು ಪಡೆಯಲು ಹಲವು ವರ್ಷಗಳು ಕಾದರು. ನಂತರ  ಅವರಿಗೆ ಯಶ್ ರಾಜ್ ಬ್ಯಾನರ್‌ನ ಬ್ಯಾಂಡ್ ಬಾಜಾ ಬಾರಾತ್ (Band Baaja Baaraat) ಚಲನಚಿತ್ರವನ್ನು ಆಫರ್ ಮಾಡಲಾಗಿದೆ ಎಂದು ತಿಳಿದ್ದರು ಮತ್ತು ಈ ಚಿತ್ರಕ್ಕಾಗಿಯೂ ಅವರು ಶ್ರಮಿಸಿದ್ದಾರೆ. 2010 ರ ಈ ಸಿನಿಮಾದಲ್ಲಿ ರಣವೀರ್‌ ಅನುಷ್ಕಾ ಶರ್ಮಾ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದರು.  

ಚಲನಚಿತ್ರಗಳಲ್ಲಿ ವೃತ್ತಿಜೀವನವನ್ನು ಮಾಡುವ ಮೊದಲು, ರಣವೀರ್ ಸಿಂಗ್ ಜಾಹೀರಾತು ಏಜೆನ್ಸಿಯಲ್ಲಿ ಕಾಪಿ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಅವರು ಚಲನಚಿತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಯೋಚಿಸಿದರು.

ರಣವೀರ್ ಸಿಂಗ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಮಾಡಲು ಬಯಸದ ಕೆಲವು ಚಿತ್ರಗಳಿಂದ ಆಫರ್‌ಗಳನ್ನು ಪಡೆದರು. ಅವರು ಸುಮಾರು 3 ವರ್ಷಗಳ ಕಾಲ ಚಪ್ಪಲಿಗಳನ್ನು ಸವೆಸಿದರು.  

Tap to resize

ನಂತರ ನಿರ್ಮಾಪಕ-ನಿರ್ದೇಶಕ ಆದಿತ್ಯ ಚೋಪ್ರಾ ಅವರಿಗೆ ಬ್ಯಾಂಡ್ ಬಾಜಾ ಬಾರಾತ್ ನೀಡಿದರು. 3 ವರ್ಷಗಳ ಪರಿಶ್ರಮದ ನಂತರ ಚಿತ್ರ ಸಿಕ್ಕಾಗ ಭಾವುಕರಾಗಿ ಕಣ್ಣೀರು ಹಾಕಿದರು ಎನ್ನಲಾಗಿದೆ. ಈ ಚಿತ್ರದಲ್ಲಿ ಅವರು ತಮ್ಮ ಅಮೋಘ ಅಭಿನಯ ನೀಡಿದ್ದಾರೆ. 

ಆದರೆ ಚಿತ್ರ ಬಿಡುಗಡೆಯಾದ ಮೇಲೆ ರಣವೀರ್ ತಂದೆ ಮಗನಿಗಾಗಿ ಚಿತ್ರ ಪಡೆಯಲು ಹಣ ಹೂಡಿದ್ದಾರೆ ಎಂಬ ಆರೋಪಗಳು ಅವರ ವಿರುದ್ಧ ಕೇಳಿಬಂದಿದ್ದವು. ಆದರೆ, ಅದೆಲ್ಲಾ ವದಂತಿ ಎಂದು ರಣವೀರ್ ಸ್ಪಷ್ಟಪಡಿಸಿದ್ದು, ತಮ್ಮ ಪ್ರತಿಭೆಯ ಆಧಾರದ ಮೇಲೆ ಚಿತ್ರ ಸಿಕ್ಕಿದೆ ಎಂದರು.

ತಮ್ಮ ಕಡಿಮೆ ವೃತ್ತಿಜೀವನದಲ್ಲಿಯೂ ರಣವೀರ್ ಸಿಂಗ್ ಸಾಕಷ್ಟು ಆಸ್ತಿ ಮಾಡಿದ್ದಾರೆ. ಅವರು ಸುಮಾರು 217 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಮುಂಬೈ ಹೊರತುಪಡಿಸಿ ಗೋವಾದಲ್ಲಿ ಅವರ ಬಂಗಲೆ ಇದೆ. ಇದಲ್ಲದೇ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರುಗಳ ಕಲೆಕ್ಷನ್‌ ಇವರ ಬಳಿ ಇದೆ.

ರಣವೀರ್ ಸಿಂಗ್ ಚಿತ್ರವೊಂದಕ್ಕೆ ಸುಮಾರು 70 ಕೋಟಿ ರೂ ಪಡೆಯುತ್ತಾರೆ. ರಣಬೀರ್ ಕಪೂರ್ ಹೊರತಾಗಿ, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ, ಕಾರ್ತಿಕ್ ಆರ್ಯನ್ ಮತ್ತು ವಿಕ್ಕಿ ಕೌಶಲ್ ಶುಲ್ಕದ ವಿಷಯದಲ್ಲಿ ರಣವೀರ್‌ಗಿಂತ ತುಂಬಾ ಹಿಂದುಳಿದಿದ್ದಾರೆ.

ರಣವೀರ್ ಸಿಂಗ್ ಅವರು ಶೂಗಳನ್ನು ತುಂಬಾ ಇಷ್ಟಪಡುತ್ತಾರೆ. ಅವರ ಬಳಿ ಸಾವಿರಕ್ಕೂ ಹೆಚ್ಚು ಜೋಡಿ ಶೂಗಳಿವೆ ಮತ್ತು ಅವುಗಳ ಬೆಲೆಯೂ ಲಕ್ಷಗಳಲ್ಲಿದೆ. 

ಈ ದಿನಗಳಲ್ಲಿ ರಣವೀರ್ ಸಿಂಗ್ ಫ್ಲಾಪ್ ಆಗುತ್ತಿದ್ದಾರೆ. ಈ ವರ್ಷದಲ್ಲಿ ಬಿಡುಗಡೆಯಾದ 83 ಚಿತ್ರ ಮತ್ತು ಜಯೇಶ್‌ಭಾಯ್ ಜೋರ್ದಾರ್ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸಾಗಿಲ್ಲ ಅವರ ಕೊನೆಯ ಹಿಟ್ ಚಿತ್ರ ಗಲ್ಲಿ ಬಾಯ್. 

ಮುಂಬರುವ  ದಿನಗಳಲ್ಲಿ ಅವರು ರೋಹಿತ್ ಶೆಟ್ಟಿ ಅವರ ಸರ್ಕಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಈ ವರ್ಷದ ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಅದೇ ಸಮಯದಲ್ಲಿ, ಅವರು ಕರಣ್ ಜೋಹರ್ ಅವರ ಚಿತ್ರ ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿಯಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ರಣವೀರ್ ಸಿಂಗ್ ಅವರ ವೃತ್ತಿಜೀವನದಲ್ಲಿ ಗೋಲಿಯೋನ್ ಕಿ ರಾಸ್ಲೀಲಾ ರಾಮ್ ಲೀಲಾ, ಗುಂಡೇ, ಬಾಜಿರಾವ್ ಮಸ್ತಾನಿ, ಪದ್ಮಾವತ್, ಸಿಂಬಾ, ಗಲ್ಲಿ ಬಾಯ್ ಹಿಟ್ ಆಗಿವೆ. ಬ್ಯಾಂಡ್ ಬಾಜಾ ಬಾರಾತ್, ಲೇಡಿ Vs ರಿಕಿ ಬೆಹ್ಲ್ ಮತ್ತು ದಿಲ್ ಧಡಕ್ನೆ ಕೋ ಸರಾಸರಿ ಸಿನಿಮಾಗಳಾಗಿವೆ.

Latest Videos

click me!