ರಣವೀರ್ ಸಿಂಗ್ ವರ್ಲ್ಡ್‌ ಬೆಸ್ಟ್ ಹಸ್ಬೆಂಡ್‌ ಎಂದ ದೀಪಿಕಾ ಪಡುಕೋಣೆ!

First Published Oct 27, 2021, 6:11 PM IST

ದೀಪಿಕಾ ಪಡುಕೋಣೆ (Deppika Padukone) ಮತ್ತು ರಣವೀರ್‌ಸಿಂಗ್ (Ranv‌eer Singh)  ಮೋಸ್ಟ್‌ ಅಡರೋಬಲ್‌ ಕಪಲ್‌ಗಳಲ್ಲಿ (most adorable) ಒಬ್ಬರು.ಈ ಜೋಡಿ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ವ್ಯಕ್ತ ಪಡಿಸುವ ಯಾವುದೇ ಅವಕಾಶವನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ. ರಣವೀರ್‌  ವರ್ಲ್ಡ್‌ ಬೆಸ್ಟ್ ಹಸ್ಬೆಂಡ್‌  (World's best husband) ಎಂದು ದೀಪಿಕಾ ಹೇಳಿದ್ದಾರೆ. ರಣವೀರ್‌ ಬೆಸ್ಟ್ ಪತಿ ಎಂದು ಹೇಗೆ ಸಾಬೀತುಪಡಿಸಿದ್ದಾರೆ, ಅವರು ತಮ್ಮ ಪತ್ನಿ ದೀಪಿಕಾ ಪಡುಕೋಣೆಗಾಗಿ ಏನು ಮಾಡಿದ್ದಾರೆ ಎಂಬುದನ್ನು  ನೋಡಿ'

(Photos-Instagram)

ಬಾಲಿವುಡ್ ಸ್ಟಾರ್ ಜೋಡಿಗಳಾದ (Star Couple) ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು 2022 ರಲ್ಲಿ ಎರಡು ಹೊಸ ಐಪಿಎಲ್ ಟೀಮ್‌ಗಳಿಗೆ ಬಿಡ್ ಮಾಡಲು ಯೋಜಿಸುತ್ತಿದ್ದಾರೆ ಎಂಬ ಕಾರಣದಿಂದ ಸುದ್ದಿಯಲ್ಲಿದ್ದರು. 

Actress


ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಅತ್ಯಂತ ಪ್ರೀತಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು ಮತ್ತು ಅವರ ಆನ್‌ಲೈನ್ PDA,ಅವವರಿಬ್ಬರ ನಡುವಿನ ಪ್ರೀತಿ ಹಾಗೂ ಕೆಮಿಸ್ಟ್ರಿಗೆ  ಅವರ ಅಭಿಮಾನಿಗಳು ತುಂಬಾ ಇಷ್ಟ ಪಡುತ್ತಾರೆ.  

ಇತ್ತೀಚಿಗೆ ಸ್ಪೋರ್ಟ್ಸ್ ಬ್ರ್ಯಾಂಡ್ ಫೋಟೋಶೂಟ್‌ನ  ಒಂದು ವಿಡೀಯೋವನ್ನು ದೀಪಿಕಾ ಪೋಸ್ಟ್‌ ಮಾಡಿದ್ದಾರೆ. 'ನಾನು ವೃತ್ತಿಯಲ್ಲಿ ನಟಿ, ಆದರೆ ನಾನು ನನ್ನ ಜೀವನವನ್ನು ಕ್ರೀಡಾಪಟುವಿನಂತೆ ಅಪ್ರೋಚ್‌ ಮಾಡುತ್ತೇನೆ. ಇದು ನನ್ನ ಎರಡನೆಯ ಸ್ವಭಾವ' ಎಂದು ಕ್ಯಾಪ್ಷನ್‌  ನೀಡಿದ್ದಾರೆ.

Ranveer Singh is best husband in the world says Deepika Padukone

ವೀಡಿಯೊ ಅನೇಕ ಪಾಸಿಟಿವ್‌ ಕ ಕಾಮೆಂಟ್‌ಗಳು ಮತ್ತು ಲೈಕ್ಸ್‌  ಪಡೆದುಕೊಂಡಿದೆ.ದೀಪಿಕಾ ಅವರ ಈ ವೀಡಿಯೋಗೆ ರಣವೀರ್  ಸಹ' ಕಾಮೆಂಟ್‌ ಮಾಡಿದ್ದಾರೆ 'ನಾನು ವೃತ್ತಿಯಲ್ಲಿ ಹಾಟಿ, ಆದರೆ ನಾನು ನನ್ನ ಜೀವನವನ್ನು ಕ್ಯೂಟಿಯ ಹಾಗೆ ಅಪ್ರೋಚ್‌ ಮಾಡುತ್ತೇನೆ ಇದು ನನ್ನ ಎರಡನೆಯ ಸ್ವಭಾವ!' ಎಂದು ರಣವೀರ್‌ ದೀಪಿಕಾರ ಕ್ಯಾಪ್ಷನ್‌ಗೆ ಬರೆದಿದ್ದಾರೆ,

Ranveer Singh is best husband in the world says Deepika Padukone

ದೀಪಿಕಾ ರಣವೀರ್‌ರ ಈ ಕಾಮೆಂಟ್‌ ಅನ್ನು ಇಷ್ಟಪಡದೆ ಇರಲು ಸಾಧ್ಯವಾಗಲಿಲ್ಲ ಮತ್ತು ರಣವೀರ್ ಅವರಿಗೆ ಪ್ರತ್ಯುತ್ತರ ನೀಡಿದ ಅವರು 'ವಿಶ್ವದ ಅತ್ಯುತ್ತಮ ಪತಿ... ಹ್ಯಾಂಡ್ಸ್ ಡೌನ್! @ರಣವೀರ್‌ಸಿಂಗ್‌ ಎಂದು  ದೀಪಿಕಾ ಸೋಶಿಯಲ್‌ ಮೀಡಿಯಾದಲ್ಲಿ ಪತಿ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಾರೆ

Ranveer Singh is best husband in the world says Deepika Padukone

ದೀಪಿಕಾ  ಪಡುಕೋಣೆಯ ಅವರ ಈ ವೀಡಿಯೊ  ಅಡಿಡಾಸ್ ಹೊಸ ಜಾಹೀರಾತ್ತಿಗೆ ಶೂಟ್‌ ಮಾಡಿರುವುದಾಗಿದೆ. ಈ ವಿಡೀಯೋದಲ್ಲಿ  ದೀಪಿಕಾರ ಪರ್ಫೇಕ್ಟ್‌ ಫಿಟ್‌ ಬಾಡಿ ಮತ್ತು ಅಬ್ಸ್‌ ಅನ್ನು ನೋಡಬಹುದು.
 

Ranveer Singh is best husband in the world says Deepika Padukone

ಕೆಲವು ದಿನಗಳ ಹಿಂದೆ, ದೀಪಿಕಾ ಇದೇ ಫೋಟೋಶೂಟ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡರು. ' ಕ್ರೀಡಾಪಟು ಆಗಿರುವುದು ಮತ್ತು ಆಟ   ಆಡುವುದು ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮತ್ತು ನಾನು ಇಂದಿನ ವ್ಯಕ್ತಿಯಾಗಲು ಸಹಾಯ ಮಾಡುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ಇದು ನನಗೆ ಬೇರೆ ಯಾವ ಜೀವನದ ಅನುಭವಗಳಲ್ಲಿ ಇಲ್ಲದ ಮೌಲ್ಯಗಳನ್ನು ಕಲಿಸಿದೆ.   ಇಂದು,ಫಿಸಿಕಲ್‌ ಮತ್ತು ಎಮೋಷನಲ್‌ ಫಿಟ್ನೆಸ್‌ ಎರಡೂ ನನ್ನ ಲೈಫ್‌ಸ್ಟೈಲ್‌ನ ಅವಿಭಾಜ್ಯ ಅಂಗವಾಗಿದೆ' ಎಂದು ಬರೆದುಕೊಂಡಿದ್ದರು.

Ranveer Singh is best husband in the world says Deepika Padukone

ಕೆಲಸದ ಬಗ್ಗೆ ಹೇಳುವುದಾದರೆ, ದೀಪಿಕಾ ಪಡುಕೋಣೆ ಶಾರುಖ್ ಖಾನ್ ಜೊತೆ  ಪಠಾಣ್, ಅನನ್ಯ ಪಾಂಡೆ ಜೊತೆ  ಶಕುನ್ ಬಾತ್ರಾ ಅವರ ಮುಂದಿನ ಚಿತ್ರ, ಸಿದ್ಧಾಂತ್ ಚತುರ್ವೇದಿ, ಧೈರ್ಯ ಕರ್ವಾ ಮುಂತಾದ ಕೆಲವು ದೊಡ್ಡ-ಬಜೆಟ್ ಚಲನಚಿತ್ರಗಳನ್ನು ಹೊಂದಿದ್ದಾರೆ. ಅವರು ಅಮಿತಾಬ್ ಬಚ್ಚನ್ ಅವರೊಂದಿಗೆ ದಿ ಇಂಟರ್ನ್‌ನ ಹಿಂದಿ ರೂಪಾಂತರದ ಪ್ರಾಜೆಕ್ಟ್‌ ಸಹ ಹೊಂದಿದ್ದಾರೆ.

click me!