'ಗೆಹ್ರಾಯಿಯಾ' ಪ್ರಮೋಷನ್‌ ವೇಳೆಯ Deepika Padukone ಸೆಕ್ಸಿ ಹಾಟ್‌ ಲುಕ್‌ !

First Published | Feb 12, 2022, 10:42 AM IST

ದೀಪಿಕಾ ಪಡುಕೋಣೆ (Deepika Padukone ) ಇತ್ತೀಚಿನ ದಿನಗಳಲ್ಲಿ ತಮ್ಮ 'ಗೆಹ್ರಾಯಿಯಾ' (Gehraiyaan)  ಸಿನಿಮಾದ ಕಾರಣದಿಂದ   ಚರ್ಚೆಯಲ್ಲಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಅವರ ಹಾಟ್ ಕೆಮಿಸ್ಟ್ರಿ ಕಾಣಿಸಿಕೊಳ್ಳುತ್ತಿದೆ. ಈ ಚಿತ್ರ ಫೆಬ್ರವರಿ 11 ರಂದು OTT ನಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ದೀಪಿಕಾ ಅವರ ಸಖತ್ ನಟನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಸಿನಿಮಾದ ಪ್ರಚಾರದ ವೇಳೆ ದೀಪಿಕಾ ಚಿತ್ರದ ಪಾತ್ರದಂತೆಯೇ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಪ್ರಚಾರದ ವೇಳೆಯ ದೀಪಿಕಾರ ಸೆಕ್ಸಿ ಲುಕ್‌ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ.  ದೀಪಿಕಾ ಅವರ  ಹಾಟೆಸ್ಟ್ ಲುಕ್‌ಗಳು ಇಲ್ಲಿವೆ.

ಗೆಹ್ರಾಯಿಯಾ ಸಿನಿಮಾದ ಪ್ರಚಾರದ ವೇಳೆ ದೀಪಿಕಾ ಅವರ ಹಲವು ಲುಕ್‌ಗಳು ಜನಮನ ಸೆಳೆದಿವೆ. ಕೆಲವೊಮ್ಮೆ ಅವರು ಬಾಡಿಸೂಟ್‌ನಲ್ಲಿ ಮತ್ತು ಕೆಲವೊಮ್ಮೆ ಹಾಲ್ಟ್‌ನೆಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಕೆಲವೊಮ್ಮೆ ಅವರು ಚರ್ಮದ ಜಾಕೆಟ್‌ ಧರಿಸಿ ಸೌಂದರ್ಯವನ್ನು ಹೆಚ್ಚಿಸುತ್ತಿರುವುದು ಕಂಡುಬಂದಿದೆ ಮತ್ತು ಕೆಲವೊಮ್ಮೆ ಬ್ಲ್ಯಾಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅವರು ಹಾಟ್ ರೆಡ್ ಬಾಡಿಕಾನ್ ಡ್ರೆಸ್‌ನಲ್ಲಿ 'ಗೆಹ್ರಾಯಿಯಾ' ಚಲನಚಿತ್ರವನ್ನು ಪ್ರಚಾರ ಮಾಡಿದರು. ಚರ್ಮದಿಂದ ಮಾಡಲ್ಪಟ್ಟ ಈ ಉಡುಗೆಯು ನಟಿಯ ಪರಿಪೂರ್ಣ ವ್ಯಕ್ತಿತ್ವವನ್ನು ತೋರಿಸುತ್ತದೆ. ಈ ಉಡುಪಿನ ಕುತ್ತಿಗೆಯಲ್ಲಿ ಕೀಹೋಲ್ ಕಟ್‌ ಇದ್ದು, ಇದರೊಂದಿಗೆ ಬೋಲ್ಡ್ ಬರ್ಗಂಡಿ ಲಿಪ್ ಸ್ಟಿಕ್ ಹಚ್ಚಿ  ತನ್ನ ಕೂದಲನ್ನು ಓಪನ್‌ ಆಗಿ ಬಿಡುವುದರ ಮೂಲಕ ಅವರ ಈ  ಲುಕ್‌  ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು.

Tap to resize

ದೀಪಿಕಾ ಪಡುಕೋಣೆ ಹೈ ಸ್ಲಿಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆರೆಂಜ್ ಡ್ರೆಸ್ ಗೆ ತೊಡೆಯ ಬಳಿ ಕಟ್ ಇದ್ದು, ಎದೆಯ ಬಳಿ ಕಟ್ ಮಾಡಿ ಸೆಕ್ಸಿಯಾಗಿ  ವಿನ್ಯಾಸ ಮಾಡಲಾಗಿದೆ. ಫುಲ್ ಸ್ಲೀವ್ ಡ್ರೆಸ್ ನಲ್ಲಿ ದೀಪಿಕಾ ತುಂಬಾ ಹಾಟ್‌ ಆಗಿ  ಕಾಣಿಸಿಕೊಂಡಿದ್ದರು. ಅವರು ದೊಡ್ಡ ಕಿವಿಯೋಲೆಗಳನ್ನು ಧರಿಸಿದ್ದರು. ಇದರೊಂದಿಗೆ, ಸಂಪೂರ್ಣ ನೋಟವನ್ನು ಮ್ಯಾಟ್ ಸ್ಕಿನ್ ಮೇಕಪ್‌ನೊಂದಿಗೆ ಪೂರ್ಣಗೊಳಿಸಲಾಯಿತು.

ಬಾಲಿವುಡ್‌ನಿಂದ ಹಾಲಿವುಡ್‌ಗೆ ತನ್ನದೇ ಆದ ಛಾಪು ಮೂಡಿಸಿರುವ  ದೀಪಿಕಾ ಕಪ್ಪು-ಬಿಳಿ ಬ್ಲೇಜರ್ ಡ್ರೆಸ್‌ನೊಂದಿಗೆ ಕಪ್ಪು ಬಣ್ಣದ ಲಾಂಗ್ ಬೂಟ್ ಧರಿಸಿದ್ದರು. ಇದರೊಂದಿಗೆ ತಲೆಗೂದಲನ್ನು ಕಟ್ಟಿಕೊಂಡಿದ್ದರು. ಬಗ್ಗೆ ಅವರು ಗುಲಾಬಿ ಶೈನಿಂಗ್‌ ಲಿಪ್‌ಸ್ಟಿಕ್‌ ಧರಿಸಿದ್ದರು ಐಶ್ಯಾಡೋಗೆ ಪಾಪ್ ಬಣ್ಣವನ್ನು ನೀಡಲಾಗಿತು.
 

ಈ ಡ್ರೆಸ್ ಧರಿಸಿ ದೀಪಿಕಾ ತನ್ನ ಗ್ಲಾಮರ್ ಅನ್ನು ಬೇರೆ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಬಾಡಿಕಾನ್ ಡ್ರೆಸ್ ಮೆಶ್ ಬಾರ್ಡರ್, ಶಾರ್ಪ್‌ ಬ್ಲ್ಯಾಕ್‌ ಲ್ಯಾಪಲ್ಸ್ ಮತ್ತು ಅರ್ಧ ತೋಳುಗಳನ್ನು ಹೊಂದಿರುವ ಡೀಪ್‌ ವಿ ಪೋಲೋ ನೆಕ್‌ಲೈನ್  ಒಳಗೊಂಡಿತ್ತು. ಚಿನ್ನದ ಕಿವಿಯೋಲೆಗಳು ಮತ್ತು ನ್ಯೂಡ್ ಮೇಕ್ಅಪ್ ಅವರನ್ನು ಇನ್ನೂ ಸುಂದರವಾಗಿ ಕಾಣುವಂತೆ ಮಾಡಿದ್ದವು.

ದೀಪಿಕಾ ಪಡುಕೋಣೆ ಕಪ್ಪು ಬಣ್ಣದ ಬ್ಲೇಜರ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು. ಅವರು ಈ ಶಾರ್ಟ್‌ ಡ್ರೆಸ್‌ ಜೊತೆ  ಹೈ ಹೀಲ್ಸ್ ಧರಿಸಿದ್ದರು. ಕಡು ಕೆಂಪು ಬಣ್ಣದ ಲಿಪ್ ಸ್ಟಿಕ್ ಮತ್ತು ಕೊರಳಲ್ಲಿ ದಪ್ಪ ಚೈನ್ ಹಾಕಿಕೊಂಡು ಮನಮೋಹಕ ಲುಕ್ ಕೊಟ್ಟಿದ್ದಾರೆ. 

ಸಿನಿಮಾ ಪ್ರಚಾರದ ವೇಳೆ ದೀಪಿಕಾ ಹೆಚ್ಚಾಗಿ ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು. ಅವರು ಒನ್‌ಸೈಡ್ ಆಫ್-ಸೋಲ್ಡರ್ ಲೆದರ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ, ಅವರು ಚಿನ್ನದ ಕಿವಿಯೋಲೆಯನ್ನು ಧರಿಸಿದ್ದಾರೆ. ಅಲ್ಲದೆ, ನ್ಯೂಡ್ ಮೇಕ್ಅಪ್ ಮೂಲಕ, ಅವರು ಲುಕ್‌ ಅನ್ನು ಪೂರ್ಣಗೊಳಿಸಿದರು.
 

ದೀಪಿಕಾ ಮೆರೂನ್ ಮತ್ತು ನೀಲಿ ಬಾಡಿಕಾನ್ ಡ್ರೆಸ್ ಧರಿಸಿ ಜನರ ಮನ ಗೆದ್ದಿದ್ದಾರೆ. ಗೆಹ್ರೆಯಿಯಾ ಸಿನಿಮಾ ಪ್ರಚಾರದ ವೇಳೆ ದೀಪಿಕಾ ಪಡುಕೋಣೆ ಅವರು  ಈ ಲುಕ್‌ನಲ್ಲಿ ತಲುಪಿದಾಗ ಎಲ್ಲರ ಕಣ್ಣು ಅವರ ಮೇಲೆ ನೆಟ್ಟಿತ್ತು.

ಇದರಲ್ಲಿ ನಟಿ ಡೆನಿಮ್ ಜಂಪ್‌ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಡೀಪ್ ನೆಕ್ ಉಡುಪಿನಲ್ಲಿ ದೀಪಿಕಾ ಅದ್ಭುತವಾಗಿ ಕಾಣುತ್ತಿದ್ದರು. ಡೆನಿಮ್ ಉಡುಪಿನೊಂದಿಗೆ ಬಿಳಿ ಹೀಲ್ಡ್‌ ಚಪ್ಪಲಿಯನ್ನು ಧರಿಸಿದ್ದರು. ಇದರೊಂದಿಗೆ, ಹೇರ್‌ ಸ್ಟೈಲ್‌ ಮ್ಯಾಚ್‌ ಮಾಡಿಕೊಂಡಿದ್ದ  ದೀಪಿಕಾ ಗುಲಾಬಿ ಬಣ್ಣದ ಲಿಪ್‌ಸ್ಟಿಕ್‌ನೊಂದಿಗೆ ಎಲ್ಲರಿಗೂ ಸ್ಮೈಲ್‌ ನೀಡಿದ್ದರು.

ದೀಪಿಕಾ ಪಡುಕೋಣೆ ತನ್ನ ಸುಂದರ ಲುಕ್‌ ಹಾಗೂ ಮಿಲಿಯನ್ ಡಾಲರ್ ನಗುವಿನಿಂದ ಎಲ್ಲರ ಮನ ಗೆದ್ದಿದ್ದಾರೆ. ನಟಿ ಕಪ್ಪು ಟಾಪ್ ಮತ್ತು ಲೆದರ್ ಜಾಕೆಟ್ ಧರಿಸಿದ್ದರು. ಅದೇ ಸಮಯದಲ್ಲಿ, ಅವರು ಅದನ್ನು  ಹಸಿರು ಸ್ಕರ್ಟ್‌ ಜೊತೆಗೆ ಪೇರ್‌ ಮಾಡಿದ್ದರು.

ದೀಪಿಕಾ ಪಡುಕೋಣೆ 'ಗೆಹ್ರಾಯಿಯಾ' ಸಿನಿಮಾ ಬಿಡುಗಡೆಯ ದಿನ ಅಂದರೆ ಫೆಬ್ರವರಿ 11 ರಂದು ಈ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಬಿಳಿ ಡ್ರೆಸ್‌ ನ ಜೊತೆ ಬೂಟು ಧರಿಸಿದ್ದರು. ತಲೆಗೂದಲನ್ನು ಎತ್ತಿ ಕಟ್ಟಿದ್ದರು. ಈ ಲುಕ್‌ನಲ್ಲಿ  ದೀಪಿಕಾ ತುಂಬಾ ಸುಂದರವಾಗಿ ಕಾಣುತ್ತಿದ್ದರು.

Latest Videos

click me!