ಏನ್ ಗುರು ಎಲ್ಲಾ ಫೋಟೋದಲ್ಲೂ ಮುತ್ತು ಕೊಡ್ತಿರ್ತೀರಾ?; ಆಲಿಯಾ- ರಣಬೀರ್ ಕಾಲೆಳೆದ ನೆಟ್ಟಿಗರು

First Published | Jan 2, 2023, 11:22 AM IST

ಎಲ್ಲಿ ನೋಡಿದ್ದರೂ ಅಲಿಯಾ - ರಣಬೀರ್ ರೊಮ್ಯಾಂಟಿಕ್ ಪೋಟೋ. ತಲೆ ಕೆಡಿಸುತ್ತಿದೆ ಎಂದು ಕಾಲೆಳೆದ ನೆಟ್ಟಿಗರು....

 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಅದುವೇ ಕಿಸ್ಸಿಂಗ್ ಫೋಟೊ...

ಹೌದು! ಮದುವೆ ಆದ ದಿನದಿಂದ ಅಲಿಯಾ ರಣಬೀರ್ ಯಾವ ಫೋಟೋ ಶೇರ್ ಮಾಡಿಕೊಂಡರೂ ಅಲ್ಲಿ ಕಿಸ್ಸಿಂಗ್ ಸೀನ್ ಇರುತ್ತದೆ. ಪ್ರತಿ ಸಲ ರಣಬೀರ್ ಮುತ್ತಿಡುತ್ತಿರುತ್ತಾರೆ.

Tap to resize

 ರಣಬೀರ್ ಮತ್ತು ಅಲಿಯಾ ಕಿಸ್ಸಿಂಗ್ ಪೋಟೋ ಬಗ್ಗೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ನೀವು ಇಷ್ಟೊಂದು ರೊಮ್ಯಾಂಟಿಕ್ ಆಗಿದ್ದ ಸಾಮಾನ್ಯ ಜನರಿಗೆ ತುಂಬಾನೇ ಕಷ್ಟವಾಗುತ್ತದೆ ಎಂದಿದ್ದಾರೆ. 

ನೀವಿಬ್ಬರು ಕಿಸ್ ಮಾಡ್ತಾನೆ ಇರಿ ಇಲ್ಲಿ ನಮ್ಮ ಹೆಂಡತಿಯರು ನಮಗೆ ಕಾಟ ಕೊಡಲು ಶುರು ಮಾಡಿದ್ದಾರೆ. ಸುಮ್ಮನೆ ಪೋಸ್ ಕೊಟ್ಟರೆ ಆಗೋಲ್ವಾ? ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

 ಹಲವು ವರ್ಷಗಳ ಕಾಲ ರಣಬೀರ್ ಮತ್ತು ಆಲಿಯಾ ಪ್ರೀತಿಸಿ ಮದುವೆ ಆಗಿರುವುದು. ಇಬ್ಬರಿಗೂ ಹೊರ ಹೋಗಿ ಪಾರ್ಟಿ ಮಾಡುವುದಕ್ಕಿಂತ ಮನೆಯಲ್ಲಿರುವುದು ತುಂಬಾನೇ ಇಷ್ಟವಂತೆ.

ರಣ್ ಮತ್ತು ಆಲಿಗೆ ಡ್ಯಾನ್ಸ್‌ ಅಂದ್ರೆ ತುಂಬಾನೇ ಇಷ್ಟ. ಹಾಡು ಕೇಳಿಸಿದ್ದರೆ ಸಾಕು ನಿಂತಲ್ಲೇ ಒಂದು ಹೆಜ್ಜೆ ಹಾಕುತ್ತಾರಂತೆ. ಅಲ್ಲದೆ ಅಲಿಯಾ ಬಾಲ್ಯದಲ್ಲಿ ಪಾರ್ಟಿಗಳಿಗೆ ಸಿಡಿ ತೆಗೆದುಕೊಂಡು ಹೋಗುತ್ತಿದ್ದರಂತೆ.

ಅಲಿಯಾ ಭಟ್ ರಣಬೀರ್ ಕಣ್ಣಿಗೆ ಕಾಣಿಸಿಕೊಂಡಿಲ್ಲ ಅಂದ್ರೆ ಯಾವ ಕೆಲಸವೂ ಮಾಡುವುದಿಲ್ಲವಂತೆ. ನಿದ್ರೆ ಮಾಡುತ್ತಲ್ಲೇ ಟೈಂ ಪಾಸ್ ಮಾಡುತ್ತಾರಂತೆ. ಅಲಿಯಾ ಇದ್ರೆ ನನಗೆ ಎನರ್ಜಿ ಎಂದಿದ್ದಾರೆ.

Latest Videos

click me!