ಸೌತ್ ಸೆನ್ಸೇಷನ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ತಮ್ಮ ನಡುವೆ ಏನಿಲ್ಲ ಏನಿಲ್ಲ ಎನ್ನುತ್ತಲೇ ಟ್ರಿಪ್, ಪಾರ್ಟಿ ಅಂತ ಮಸ್ತ್ ಮಜಾ ಮಾಡುತ್ತಿದ್ದಾರೆ ರಶ್ಮಿಕಾ ಮತ್ತು ವಿಜಯ್. ಬೆಸ್ಟ್ ಫ್ರೆಂಡ್ಸ್ ಅಷ್ಟೆ ಎನ್ನುವ ವಿಜಯ್ ಮತ್ತು ರಶ್ಮಿಕಾ ಜೋಡಿ ಇತ್ತೀಚಿಗಷ್ಟೆ ಮಾಲ್ಡೀವ್ಸ್‌ಗೆ ಒಟ್ಟಿಗೆ ಹಾರಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು. ಏರ್ಪೊರ್ಟ್‌ನಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ ಕೆಲವೇ ಕ್ಷಣಗಳ ಅಂತರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮಾಲ್ಡೀವ್ಸ್ ಫ್ಲೈಟ್ ಹತ್ತಿದ್ದರು.