Published : Jul 19, 2022, 05:47 PM ISTUpdated : Jul 19, 2022, 05:54 PM IST
ರಣಬೀರ್ ಕಪೂರ್ (Ranbir Kapoor) ಅವರ ಚಿತ್ರ ಶಂಶೇರಾ (Shamshera) ಜುಲೈ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವು ಸಂಪೂರ್ಣ ಆಕ್ಷನ್ ಮತ್ತು ಥ್ರಿಲ್ಲರ್ ಆಗಿದೆ. ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಚಿತ್ರವನ್ನು ಕರಣ್ ಮಲ್ಹೋತ್ರಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಣಬೀರ್ ಜೊತೆ ವಾಣಿ ಕಪೂರ್ (Vaani Kapoor) ಮತ್ತು ಸಂಜಯ್ ದತ್ (Sanjay Dutt) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಂಶೇರಾ ರಣಬೀರ್ ಅವರ ಕೆರಿಯರ್‌ನ 16 ನೇ ಚಿತ್ರ. ಸತತ 4 ವರ್ಷಗಳಿಂದ ಚಿತ್ರರಂಗದಿಂದ ನಾಪತ್ತೆಯಾಗಿದ್ದ ರಣಬೀರ್ ಈ ಚಿತ್ರದಿಂದ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸುಂದರ ಮತ್ತು ಡ್ಯಾಶಿಂಗ್ ಲುಕ್ ಹೊಂದಿರುವ ರಣಬೀರ್ ತಮ್ಮ 15 ವರ್ಷಗಳ ವೃತ್ತಿಜೀವನದಲ್ಲಿ ಸುಮಾರು 15 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅದರಲ್ಲಿ 7 ಚಿತ್ರಗಳು ಮಾತ್ರ ಹಿಟ್ ಆಗಿವೆ. ರಣಬೀರ್ ಕಪೂರ್ ಅವರ ವೃತ್ತಿಜೀವನ ಮತ್ತು ಚಲನಚಿತ್ರಗಳಿಗೆ ಸಂಬಂಧಿಸಿದ ಮಾಹಿತಿಯಲ್ಲಿ ಇಲ್ಲಿದೆ
ರಣಬೀರ್ ಕಪೂರ್ ಕೊನೆಯದಾಗಿ 2018 ರಲ್ಲಿ ತೆರೆಕಂಡ ಸಂಜು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಜಯ್ ದತ್ ಅವರ ಜೀವನಚರಿತ್ರೆಯಲ್ಲಿ ರಣಬೀರ್ ಸಂಜಯ್ ಪಾತ್ರವನ್ನು ನಿರ್ವಹಿಸಿದ್ದಾರೆ, ಸಿನಿಮಾ ಜನರಿಂದ ಮೆಚ್ಚುಗೆ ಗಳಿಸಿತು.
29
ಸಂಜು ಸಿನಿಮಾಗಿಂತ ಮೊದಲ ಚಿತ್ರ ಏ ದಿಲ್ ಹೈ ಮುಷ್ಕಿಲ್ ಅನ್ನು ಬಿಟ್ಟು, ಅವರು ಸತತ 5 ಫ್ಲಾಪ್‌ಗಳನ್ನು ನೀಡಿದರು. ಅವುಗಳೆಂದರೆ ಬೇಶರಂ, ರಾಯ್, ಬಾಂಬೆ ವೆಲ್ವೆಟ್, ತಮಾಶಾ ಮತ್ತು ಜಗ್ಗಾ ಜಾಸೂಸ್.
39
ಬಾಲಿವುಡ್‌ನ ಪವರ್‌ಫುಲ್ ಫ್ಯಾಮಿಲಿ ಕಪೂರ್ ಕುಟುಂಬಕ್ಕೆ ಸೇರಿದ ರಣಬೀರ್ 2007 ರಲ್ಲಿ ಬಂದ ಸಂಜಯ್ ಲೀಲಾ ಬನ್ಸಾಲಿಯವರ ಸಾವರಿಯಾ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಸೋನಂ ಕಪೂರ್ ಜೊತೆಗಿನ ಈ ಚಿತ್ರ ಸೂಪರ್ ಫ್ಲಾಪ್ ಎಂದು ಸಾಬೀತಾಯಿತು. 40 ಕೋಟಿ ಬಜೆಟ್‌ನಲ್ಲಿ ಈ ಚಿತ್ರ ಗಳಿಸಿದ್ದು ಬರೋಬ್ಬರಿ 39 ಕೋಟಿ ಮಾತ್ರ.
49
2008 ರ ಚಲನಚಿತ್ರ ಬಚ್ನಾ ಹೈ ಹಸೀನೋ ಗಲ್ಲಾಪೆಟ್ಟಿಗೆಯಲ್ಲಿ ಸರಾಸರಿಯಾಗಿತ್ತು. ಈ ಸಿದ್ಧಾರ್ಥ್ ಆನಂದ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಬಿಪಾಶಾ ಬಾಶು ಮತ್ತು ಮಿನಿಶಾ ಲಂಬಾ ಮುಖ್ಯ ಭೂಮಿಕೆಯಲ್ಲಿದ್ದರು. ಸುಮಾರು 2.5 ಕೋಟಿ ಬಜೆಟ್‌ನಲ್ಲಿ ಚಿತ್ರ 61 ಕೋಟಿ ಗಳಿಸಿದೆ.
59
2009 ರಲ್ಲಿ, ರಣಬೀರ್ ಕಪೂರ್ ವೇಕಪ್ ಸಿದ್, ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಮತ್ತು ರಾಕೆಟ್ ಸಿಂಗ್ ಚಿತ್ರದಲ್ಲಿ ನಟಿಸಿದರು. ಈ ಪೈಕಿ ರಾಕೆಟ್ ಸಿಂಗ್ ಸಂಪೂರ್ಣ ನೆಲಕಚ್ಚಿತು. ಉಳಿದೆರಡು ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
69
ರಣಬೀರ್ ಕಪೂರ್ 2010 ರಲ್ಲಿ ರಾಜನೀತಿ ಮತ್ತು ಅಂಜನಾ ಅಂಜನಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ರಾಜನೀತಿ ಉತ್ತಮವಾಗಿ ಗಳಿಸಿದರೆ, ಅಂಜನಾ ಅಂಜನಿ ಫ್ಲಾಪ್ ಎಂದು ಸಾಬೀತಾಯಿತು.
79
2011ರಲ್ಲಿ ಬಂದ ರಾಕ್‌ಸ್ಟಾರ್ ಚಿತ್ರವನ್ನೂ ಅವರ ಸರಾಸರಿ ಚಿತ್ರಗಳ ಸಾಲಿಗೆ ಸೇರಿದೆ. 2012-13 ರಲ್ಲಿ ಬಿಡುಗಡೆಯಾದ ಬರ್ಫಿ ಮತ್ತು ಯೇ ಜವಾನಿ ಹೈ ದಿವಾನಿ ಚಿತ್ರಗಳು ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಇವೆರಡೂ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದವು. ಬರ್ಫಿ 112 ಕೋಟಿ ಗಳಿಸಿದರೆ, ಯೇ ಜವಾನಿ ಹೈ ದಿವಾನಿ 188 ಕೋಟಿ ಗಳಿಸಿದೆ.
89
ಶಂಶೇರಾ ಹೊರತುಪಡಿಸಿ, ರಣಬೀರ್ ಕಪೂರ್ ಅವರು ಪತ್ನಿ ಆಲಿಯಾ ಭಟ್ ಅವರೊಂದಿಗೆ ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ಲವ್ ರಂಜನ್ ಅವರ ಹೆಸರಿಡದ ಚಿತ್ರದಲ್ಲಿ ಶ್ರದ್ಧಾ ಕಪೂರ್ ಎದುರು ಮತ್ತು ಅನಿಮಲ್ ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ಕಾಣಿಸಿಕೊಳ್ಳಲಿದ್ದಾರೆ.
99
ಯಶ್ ರಾಜ್ ಬ್ಯಾನರ್‌ನಲ್ಲಿ ತಯಾರಾದ ಜಯೇಶ್‌ಭಾಯ್ ಜೋರ್ದಾರ್ ಮತ್ತು ಸಾಮ್ರಾಟ್ ಪೃಥ್ವಿರಾಜ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿವೆ . ಈಗ ಶಂಶೇರಾ ಚಿತ್ರದಿಂದ ಬ್ಯಾನರ್ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ. 150 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ರಣಬೀರ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.