Alia Ranbir Wedding ಸಂಗೀತ್‌ ಕಾರ್ಯಕ್ರಮದಲ್ಲಿ Raaziಯ ಹಾಡಿಗೆ ಹೆಜ್ಜೆಹಾಕೋ ನಟಿ

First Published | Apr 13, 2022, 6:35 PM IST

ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್  (Ranbir Kapoor) ಮದುವೆ ಬಗ್ಗೆ ಎಲ್ಲjರೂ ಕಾತುರರಾಗಿದ್ದಾರೆ. ಇಬ್ಬರ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ರಣಬೀರ್ ಮನೆಯನ್ನು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಲಾಗಿದೆ. ಆರ್‌ಕೆ ಸ್ಟುಡಿಯೋ, ಕೃಷ್ಣ ರಾಜ್ ಹೌಸ್ ಮತ್ತು ವಾಸ್ತು ಅಪಾರ್ಟ್‌ಮೆಂಟ್‌ಗಳನ್ನು ಸುಂದರವಾಗಿ ಅಲಂಕರಿಸಲಾಗಿದೆ. ಆಲಿಯಾ ಅವರ ಮನೆಯೂ ಸುಂದರವಾಗಿ ಅಲಂಕರಿಸಲ್ಪಟ್ಟಿದೆ. ಈ ನಡುವೆ ಆಲಿಯಾ ತಮ್ಮ ಸಂಗೀತ ಸಮಾರಂಭದಲ್ಲಿ  ಪ್ರದರ್ಶನ ನೀಡಲಿದ್ದಾರೆ ಎಂಬ ಸುದ್ದಿ ಇದೆ. 

ಬಾಲಿವುಡ್ ಲೈಫ್ (Bollywood Life) ವರದಿಗಳ ಪ್ರಕಾರ ಅವರು ತಮ್ಮ ರಾಝಿ ಚಿತ್ರದ ದಿಲ್ಬರೋ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ . ಈ ಹಾಡು ಅವರ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಹೇಳಲಾಗುತ್ತಿದೆ.

Raazi

2018ರ ರಾಝಿ ಚಲನಚಿತ್ರದ ಅವರ ಕೆಲಸವನ್ನು ಹೆಚ್ಚು ಪ್ರಶಂಸಿಸಲಾಯಿತು ಮತ್ತು ಚಿತ್ರ ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಅದೇ ಸಮಯದಲ್ಲಿ, ದಿಲ್ಬರೋ ಹಾಡು ಕೂಡ ಬಹಳ ಜನಪ್ರಿಯವಾಗಿತ್ತು.

Tap to resize

ಹೊರ ಬರುತ್ತಿರುವ ಸುದ್ದಿಗಳ ಪ್ರಕಾರ ರಣಬೀರ್ ಕಪೂರ್ (Ranbir Kapoor)- ಆಲಿಯಾ ಭಟ್ (Alia Bhatt) ಮದುವೆಗೆ ಕೇವಲ 28 ಅತಿಥಿಗಳು ಬರಲಿದ್ದಾರೆ. ಈ ಹಿಂದೆ ಇವರಿಬ್ಬರ ಮದುವೆಗೆ 450 ಅತಿಥಿಗಳು ಆಗಮಿಸಲಿದ್ದಾರೆ ಎಂಬ ಸುದ್ದಿ ಇತ್ತು. ಆರ್‌ಕೆ ಸ್ಟುಡಿಯೋದಲ್ಲಿ (RK Studio) ಜೋಡಿಯ ಮೆಹಂದಿ, ಹಲ್ದಿ ಮತ್ತು ಸಂಗೀತ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ. 
 

ಅದೇ ಸಮಯದಲ್ಲಿ, ರಣಬೀರ್- ಆಲಿಯಾ ವಾಸಿಸುವ ವಾಸ್ತು ಅಪಾರ್ಟ್‌ಮೆಂಟ್‌ನಲ್ಲಿ ಮದುವೆಯ ವಿಧಿವಿಧಾನಗಳು ಪೂರ್ಣಗೊಳ್ಳುತ್ತವೆ. ಆದರೆ  ಈ ಮದುವೆ ಬಗ್ಗೆ ಯಾವುದೇ ಕುಟುಂಬಸ್ಥರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಇತ್ತೀಚೆಗೆ, ಆಲಿಯಾ ಭಟ್ ಅವರ ಸಹೋದರ ರಾಹುಲ್ ಭಟ್ (Rahul Bhatt) ಅವರು ತಮ್ಮ ಸಹೋದರಿಯ ಮದುವೆಯ ಬಗ್ಗೆ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದ್ದರು. ಆಲಿಯಾ ಮದುವೆಯನ್ನು ಮುಂದೂಡಲಾಗಿದೆ ಎಂದು ಅವರು ಹೇಳಿದ್ದಾರೆ. ನಿಗದಿತ ದಿನಾಂಕದಂದು ಮದುವೆ ನಡೆಯುವುದಿಲ್ಲ ಎಂದೂ ಹೇಳಿದ್ದರು.

ಮದುವೆಯ ಹೊಸ ದಿನಾಂಕವನ್ನೂ ಶೀಘ್ರದಲ್ಲೇ ಪ್ರಕಟಿಸಲಾಗುವುದು. ಅಷ್ಟೇ ಅಲ್ಲ, ಮದುವೆಗೂ ಮುನ್ನ ಆಲಿಯಾ-ರಣಬೀರ್ ಅವರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದೂ ಅವರು ಹೇಳಿದ್ದರು. ಏಪ್ರಿಲ್ 20ರ ಮಧ್ಯದಲ್ಲಿ ಮದುವೆ ಆಗಬಹುದು ಎಂಬ ಸುಳಿವು ಕೂಡ ನೀಡಿದ್ದರು.

ಖ್ಯಾತ ಗಾಯಕಿ ಇಲಾ ಅರುಣ್ ತಮ್ಮ ಪೋಸ್ಟ್ ಒಂದರ ಮೂಲಕ ಆಲಿಯಾ-ರಣಬೀರ್ ಮದುವೆಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅವರು ಆಲಿಯಾ ತಾಯಿ ಸೋನಿ ರಜ್ದಾನ್ ಅವರನ್ನು ಅಭಿನಂಧಿಸಿದ್ದಾರೆ. ನಮ್ಮ ಸೋನಿ ಅತ್ತೆ ಆಗುತ್ತಿದ್ದಾರೆ. ಮಹೇಶ್ ಮತ್ತು ಆತ್ಮೀಯ ಸೋನಿ ಅವರಿಗೆ ಅಭಿನಂದನೆಗಳು. ಆಲಿಯಾ ಮತ್ತು ರಣಬೀರ್‌ಗೂ ಅನೇಕ ಅಭಿನಂದನೆಗಳು ಮತ್ತು ಆಶೀರ್ವಾದಗಳು ಎಂದು ಅವರು ಬರೆದಿದ್ದಾರೆ.

Latest Videos

click me!