ರಾಣಾ-ಮಿಹೀಕಾ ರಿಂಗ್ ಬದಲಾಯಿಸಿಕೊಂಡ್ರು,  ಮದುವೆ ಯಾವಾಗ?

First Published | May 20, 2020, 2:57 PM IST

ಹೈದರಾಬಾದ್(ಮೇ 20)  ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ ತನ್ನ ಮನದನ್ನೆಯನ್ನು ಇಡೀ ಪ್ರಪಂಚಕ್ಕೆ ಪರಿಚಯ ಮಾಡಿಸಿದ್ದರು. ಬುಧವಾರ ಪ್ರೇಯಸಿ ಮಿಹೀಕಾ ಬಜಾಜ್‌  ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡು ಮುಂದಿನ ಜೀವನಕ್ಕೆ ನಾಂದಿ ಹಾಡಿದ್ದಾರೆ.

ಸೋಶಿಯಲ್ ಮೀಡಿಯಾ ಮೂಲಕವೇ ಇಡೀ ಜಗತ್ತಿಗೆ ಪ್ರೇಯಸಿಯ ಪರಿಚಯ ಮಾಡಿಸಿದ್ದರು.
undefined
ದೇಶದಲ್ಲಿ ಕೊರೊನಾ ವೈರಸ್‌ ಆರ್ಭಟ ಮುಂದುವರಿಸಿದ್ದರೂ ಹಾಕುತ್ತಿದ್ದರೂ ಸೆಲೆಬ್ರಿಟಿಗಳ ಮದುವೆ ಸಮಾರಂಭಕ್ಕೆ ಏನು ಕಡಿಮೆ ಇಲ್ಲ.
undefined

Latest Videos


ನಿಖಿಲ್‌ ಕುಮಾರಸ್ವಾಮಿ-ರೇವತಿ, ನಿರ್ದೇಶಕ ಎ.ಪಿ. ಅರ್ಜುನ್‌-ಅನ್ನಪೂರ್ಣ, ಟಾಲಿವುಡ್‌ನಲ್ಲಿ ನಿಖಿಲ್‌ ಸಿದ್ಧಾರ್ಥ್‌ ಮತ್ತು ಡಾ. ಪಲ್ಲವಿ ಶರ್ಮಾ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.
undefined
'ಬಾಹುಬಲಿ' ಸಿನಿಮಾದಲ್ಲಿ ಬಲ್ಲಾಳದೇವನ ಪಾತ್ರ ಮಾಡಿ ದೇಶವ್ಯಾಪಿ ಜನಪ್ರಿಯತೆ ಗಳಿಸಿದ ನಟ ರಾಣಾ ದಗ್ಗುಬಾಟಿ ಕೂಡ ಈಗ ಮದುವೆಯ ಮೂಡ್‌ನಲ್ಲಿ ಇದ್ದಾರೆ. ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ
undefined
ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ನಲ್ಲಿ ರಾಣಾ ಮತ್ತು ಮಿಹೀಕಾ ಹಸೆಮಣೆ ಏರಲಿದ್ದಾರೆ. ಅಷ್ಟರೊಳಗೆ ಕೊರೊನಾ ವೈರಸ್‌ ನಿರ್ಮೂಲನೆ ಆಗಿದ್ದರೆ ಅದ್ದೂರಿಯಾಗಿ ರಾಣಾ ಮದುವೆ ನಡೆಯುತ್ತದೆ.
undefined
ಸೋಶಿಯಲ್‌ ಮೀಡಿಯಾದಲ್ಲಿ ಇಂಟೀರಿಯರ್‌ ಡಿಸೈನರ್‌ ಮಿಹೀಕಾ ಬಜಾಜ್‌ ಅವರ ಫೋಟೋವನ್ನು ಹಂಚಿಕೊಂಡು ಪ್ರೇಯಸಿಯ ಪರಿಚಯ ಮಾಡಿಸಿದ್ದರು.
undefined
ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್‌ ಆಗಿರುವ ಮಿಹೀಕಾ ಬಜಾಜ್‌ಗೆ ಚಿತ್ರರಂಗದ ನಂಟು ಇಲ್ಲ. ಆದರೆ ರಾಣಾ ಮತ್ತೆ ಮಿಹಿಕಾ ನಡುವೆ ಪ್ರೇಮಾಂಕುರವಾಗಿದೆ.
undefined
ಮದುವೆ ದಿನಾಂಕವನ್ನು ಸದ್ಯವೇ ತಿಳಿಸಲಿದ್ದೇವೆ. ಮದುವೆ ಸಿದ್ಧತೆಗಳು ಒಂದೊಂದಾಗಿ ಆರಂಭವಾಗಿದೆ ಎಂದು ರಾಣಾ ತಂದೆ ಸುರೇಶ್ ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ.
undefined
ಏನೇ ಆದರೂ ರಣಾ ಮತ್ತೆ ಮಿಹೀಕಾ ಬಹಿರಂಗವಾಗಿ ಮಾಧ್ಯಮಗಳ ಎದುರು ಕಾಣಿಸಿಕೊಂಡಿಲ್ಲ.
undefined
click me!