ದೀಪಿಕಾ ರಣವೀರ್ ತಿಂಗಳ ಆಹಾರದ ಖರ್ಚಿಷ್ಟು... !

First Published | May 20, 2020, 2:47 PM IST

ಸಿನಿಮಾರಂಗದಲ್ಲಿ ಸ್ಥಾನ ಉಳಿಸಿಕೊಳ್ಳಲು ಪ್ರತಿಭೆಯ ಜೊತೆ ಹಲವು ವಿಷಯಗಳ ಬಗ್ಗೆ ಕಟ್ಟುನಿಟ್ಟಾದ ಗಮನ ಕೊಡುವುದು ಅಗತ್ಯ. ಫಿಟ್‌ನೆಸ್‌ ಜೊತೆ ಡಯಟ್‌ ಕೂಡ ನಟನಟಿಯರ ಜೀವನದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಬಾಲಿವುಡ್ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಉದ್ಯಮದ ಅತ್ಯಂತ  ಫೇಮಸ್‌ ಮತ್ತು ಶ್ರೀಮಂತ ನಟ ದಂಪತಿ. ಈ ಪ್ರತಿಭಾವಂತ ಜೋಡಿ ಫ್ಯಾಷನ್ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದಕ್ಕೆ ಸಹ ಹೆಸರುವಾಸಿಯಾಗಿದ್ದಾರೆ. ಈ ಕಪಲ್‌ ತಮ್ಮ ಬ್ಯಾಲೆನ್ಸಡ್‌ ಡಯಟ್‌ಗಾಗಿ ಪ್ರತಿ  ತಿಂಗಳು ವ್ಯಯಸಿಸುವ ಹಣ ಎಷ್ಟು ಎಂದು ಯಾರಾದರೂ ಗೆಸ್‌ ಮಾಡಿದ್ದೀರಾ? ಕೇಳಿದರೆ ದಂಗಾಗುವುದು ಗ್ಯಾರಂಟಿ.

ಬಾಲಿವುಡ್‌ನ ಮೋಸ್ಟ್‌ ಹ್ಯಾಪಿನಿಂಗ್‌ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ.
ಕೇವಲ ನಟನೆ, ಫ್ಯಾಶನ್‌ಗೆ ಮಾತ್ತವಲ್ಲದೆ ಫಿಟ್‌ನೆಸ್‌ ಹಾಗೂ ಆರೋಗ್ಯಕರ ಲೈಫ್‌ಸ್ಟೈಲ್‌ಗೂ ಫೆಮಸ್‌ ರಣವೀರ್‌ ದೀಪಿಕಾ.
Tap to resize

ಈ ಜೋಡಿ ಪ್ರತಿ ತಿಂಗಳು ಫುಡ್‌ಗಾಗಿ ಎಷ್ಟು ಖರ್ಚು ಮಾಡುತ್ತಾರೆಂದು ನಿಮಗೆ ತಿಳಿದಿದೆಯೇ?
ಇಬ್ಬರೂ ನಟರು ತಮ್ಮ ಶೂಟಿಂಗ್‌ ಶೆಡ್ಯೂಲ್‌ ಪ್ರಕಾರ ತಮ್ಮ ದೈನಂದಿನ ಆಹಾರದ ಅವಶ್ಯಕತೆ ಬಗ್ಗೆ ಗಮನ ಹರಿಸುತ್ತಾರೆ.
ರಣವೀರ್ ಮತ್ತು ದೀಪಿಕಾ ರೆಗ್ಯೂಲರ್‌ ಆಗಿ ಸ್ಥಿರ ಪೌಷ್ಠಿಕಾಂಶವನ್ನು ಕಾಯ್ದುಕೊಳ್ಳುತ್ತಾರೆ, ಅವರು ಕೆಲಸ ಮಾಡುತ್ತಿರುವ ಸಿನಿಮಾದಲ್ಲಿನ ಪಾತ್ರಕ್ಕೆ ಅನುಗುಣವಾಗಿ ಇದು ಬದಲಾಗುತ್ತದೆ.
ಈ ಕಪಲ್‌ನ ಫಿಟ್‌ನೆಸ್ ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುವುದು ಸೆಲೆಬ್ರಿಟಿಗಳ ಆಹಾರ ಮತ್ತು ಆಹಾರ ಕ್ರಮವನ್ನು ನೋಡಿಕೊಳ್ಳುವ ಪರ್ಸನಲ್ ಆಪ್ಟಿಮೈಸ್ಡ್ ಡಯಟ್ (ಪಿಒಡಿ) ಸಪ್ಲೈ ಎಂಬ ಆಹಾರ ಪೂರೈಕೆ ಸಂಸ್ಥೆ.
ಬಾಲಿವುಡ್‌ನ ಅನೇಕ ನಟರಾದ ಅಕ್ಷಯ್ ಕುಮಾರ್, ಅನಿಲ್ ಕಪೂರ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಇನ್ನೂ ಅನೇಕರು ಪಿಒಡಿ ಸಪ್ಲೈಯ ಮಾಸಿಕ ಚಂದಾದಾರಿಕೆಯನ್ನು ತೆಗೆದುಕೊಂಡಿದ್ದಾರೆ ಎಂದು ಈ ಸಂಸ್ಥೆಯ ಸಹ ಸಂಸ್ಥಾಪಕ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ತಿಂಗಳಿಗೆ 4 ಮೀಲ್‌ ಪ್ಲಾನ್‌ ಹೊಂದಿದ್ದು, ತಲಾ 90,000 ರೂ. ಮತ್ತು ನಂತರದ ಪ್ರತಿ ಊಟಕ್ಕೆ 10,000 ರೂ ಚಾರ್ಜ್‌ ಆಗುತ್ತದೆ ಅಂತೆ.
ಅಷ್ಟೇ ಅಲ್ಲ, ಔಟ್‌ಡೋರ್‌ ಶೂಟ್ ಇದ್ದಾಗ ಅವರಿಗಾಗಿಯೇ ಪ್ರತ್ಯೇಕ ಶೆಫ್‌ಹೊಂದಲು ಬಯಸಿದರೆ, ಅವರ ದಿನದ ಚಾರ್ಜ್‌ 12,000 ರೂ.

Latest Videos

click me!