Ramayana Trailer Leak: ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ! ಬಿಡುಗಡೆಗೂ ಮುನ್ನವೇ ಟ್ರೇಲರ್ ಲೀಕ್

Published : Jul 19, 2026, 01:05 PM IST

Ramayana Trailer Leaked Online Yash as Ravana Sai Pallavi as Sita ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಅಧಿಕೃತ ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ರಾವಣನ ಪಾತ್ರದಲ್ಲಿ ನಟ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಅವರ ಫಸ್ಟ್ ಲುಕ್ ಭಾರೀ ಸದ್ದು ಮಾಡುತ್ತಿದೆ.

PREV
14
Ramayana Trailer Leak: ಲೀಕ್ ಆಯ್ತು ರಾಮಾಯಣ ಮೂವಿ ಟ್ರೇಲರ್!

ಬಾಲಿವುಡ್‌ನ ಸಿನಿ ಜಗತ್ತಿನಲ್ಲೇ ಅತ್ಯಂತ ದುಬಾರಿ ವೆಚ್ಚದ 'ರಾಮಾಯಣ' ಸಿನಿಮಾ ಪ್ರಪಂಚದಾದ್ಯಂತ ಭಾರೀ ಕುತೂಹಲ ಹುಟ್ಟಿಸಿದೆ. ಈ ಚಿತ್ರ ನಿರ್ಮಾಣಕ್ಕಾಗಿ ಬಹುಕೋಟಿ ಹಣ ವೆಚ್ಚ ಮಾಡಲಾಗಿದೆ. ಆದರೆ 'ರಾಮಾಯಣ' ಬಿಡುಗಡೆಗೂ ಮುನ್ನವೇ, ಚಿತ್ರದ ಅಧಿಕೃತ ಟ್ರೇಲರ್ ರಿಲೀಸ್ ಆಗುವ ಮೊದಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಇದರಲ್ಲಿನ ಪಾತ್ರಧಾರಿಗಳ ಫಸ್ಟ್ ಲುಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

24
ರಾಮನಿಗಿಂತ ರಾವಣದ್ದೇ ಅರ್ಭಟ!

ಈ ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದರೂ, ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿರುವುದು ರಾವಣನಾಗಿ ಯಶ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ. ಸೋಷಿಯಲ್ ಮೀಡಿಯಾಗಳಲ್ಲಿ ಲೀಕ್ ಆಗಿರುವ ಟ್ರೇಲರ್ ತುಣುಕುಗಳಲ್ಲಿನ ಪಾತ್ರಗಳ ಫಸ್ಟ್ ಲುಕ್‌ಗೆ ಪ್ರೇಕ್ಷರಿಂದಲೂ ಅದ್ಭುತ ಪ್ರತಿಕ್ರಿಯೆ ಬರುತ್ತಿದೆ. ಅದರಲ್ಲೂ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಯಶ್ ಅವರ ಲುಕ್ ಎಲ್ಲರನ್ನೂ ಬೆರಗುಗೊಳಿಸಿದೆ. ಅವರ ಖಡಕ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಪಾತ್ರಕ್ಕೆ ಯಶ್ ಸಂಪೂರ್ಣ ನ್ಯಾಯ ಒದಗಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

34
ಯಶ್-ಸಾಯಿ ಪಲ್ಲವಿಯದ್ದೇ ಮಾತು

ಈ ಚಿತ್ರದಲ್ಲಿ ಸೀತೆಯ ಪಾತ್ರವನ್ನು ನಟಿ ಸಾಯಿ ಪಲ್ಲವಿ ಮಾಡಿದ ಅವರ ಲುಕ್ ಸೀತೆಯ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ ಎಂದು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಯಾವುದೇ ಆಡಂಬರವಿಲ್ಲದ ಅವರ ಅಭಿನಯವು ಪಾತ್ರಕ್ಕೆ ಜೀವ ತುಂಬಲಿದೆ ಎಂಬ ನಿರೀಕ್ಷೆಗಳು ಹೆಚ್ಚಾಗಿವೆ. ಯಶ್ ಮತ್ತು ಸಾಯಿ ಪಲ್ಲವಿ ಅವರ ಪಾತ್ರಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದ್ದರೂ, ರಣಬೀರ್ ಕಪೂರ್ ಕೂಡ ಈ ಚಿತ್ರದ ಪ್ರಮುಖ ಆಕರ್ಷಣೆ. ಆದರೆ ಲೀಕ್ ಆಗಿರುವ ವಿಡಿಯೋ ತುಣುಕುಗಳಲ್ಲಿ ಯಶ್ ಮತ್ತು ಸಾಯಿ ಪಲ್ಲವಿ ಅವರೇ ಹೈಲೈಟ್ ಆಗಿದ್ದಾರೆ.

44
ರಾಮಯಣ ಬಿಡುಗಡೆಗೆ ಮೊದಲೇ ಭಾರೀ ಸದ್ದು

ಒಟ್ಟಿನಲ್ಲಿ, ಅಧಿಕೃತ ಪ್ರಕಟಣೆಗೂ ಮುನ್ನವೇ ಪಾತ್ರಗಳ ಲುಕ್ ಬಹಿರಂಗವಾಗಿರುವುದು ಚಿತ್ರತಂಡಕ್ಕೆ ತಲೆನೋವು ತಂದರೂ, ಸಿಕ್ಕಿರುವ ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಅಂದಹಾಗೆ, ಚಿತ್ರತಂಡವು ಈ ಸೋರಿಕೆಯ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ಬಿಡುಗಡೆಗೂ ಮುನ್ನವೇ ಈ ಮಟ್ಟಿಗೆ ಸದ್ದು ಮಾಡುತ್ತಿರುವುದು ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿರುವುದಂತೂ ಸುಳ್ಳಲ್ಲ. ಪ್ರೇಕ್ಷಕರು ಇದೀಗ ಅಧಿಕೃತ ಟ್ರೇಲರ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories