ಇಷ್ಟೆಲ್ಲಾ ಹೈಪ್ ಕೊಟ್ಟರೆ ಕತ್ತೆಗೂ ಸಿಂಹ ಅನಿಸುತ್ತೆ; ಸೋಶಿಯಲ್ ಮೀಡಿಯಾದಲ್ಲಿ ವರ್ಮಾ ಗಲಾಟೆ!

First Published | Jul 27, 2024, 6:53 PM IST

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೋಶಿಯಲ್ ಮೀಡಿಯಾ ಸಂಚಲನಕ್ಕೆ ಕಾರಣವಾಗಿದ್ದಾರೆ. ಇಂದು ಮಾಡಿರುವ ಟ್ವೀಟ್ ಮೂಲಕ ಹೊಸ ಚರ್ಚೆಯನ್ನು ರಾಮ್ ಗೋಪಾಲ್ ವರ್ಮಾ ಸೃಷ್ಟಿಸಿದ್ದಾರೆ.

ಇಷ್ಟೆಲ್ಲಾ ಹೈಪ್ ಕೊಟ್ಟರೆ ಕತ್ತೆಗೂ ಸಿಂಹ ಅನಿಸುತ್ತೆ ಎಂಬ ರಾಮ್ ಗೋಪಾಲ್ ವರ್ಮಾ ಟ್ವೀಟ್ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ. ರಾಮ್ ಗೋಪಾಲ್ ವರ್ಮಾ ಸಿನಿಮಾದ ಜೊತೆಯಲ್ಲಿ ರಾಜಕೀಯದ ಬಗ್ಗೆಯೂ ಆಸಕ್ತಿ ಹೊಂದಿದ್ದಾರೆ.

ಟಿಡಿಪಿ ಮತ್ತು ಜನಸೇನಾ ಪಕ್ಷಗಳ ವಿರುದ್ಧ ಕೆಲ ಸಿನಿಮಾಗಳನ್ನು ವರ್ಮಾ ಮಾಡಿದ್ದಾರೆ. 201ರಲ್ಲಿ ಪವರ್ ಸ್ಟಾರ್ ಶೀರ್ಷಿಕೆಯಡಿ ಸಿನಿಮಾ ಮಾಡಿ ಪವನ್ ಕಲ್ಯಾಣ್ ವಿರುದ್ಧವೇ ವಾಗ್ದಾಳಿ ನಡೆಸಿದ್ದರು. ಎನ್‌ಟಿಆರ್ ಹಾಗೂ ಚಂದ್ರಬಾಬು ವಿರುದ್ಧವೂ ರಾಮ್‌ ಗೋಪಾಲ್ ವರ್ಮಾ ಸಿನಿಮಾ ಮಾಡಿದ್ದಾರೆ.

Tap to resize

ಆಂಧ್ರ ಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ರಾಜಕೀಯ ಸಿದ್ದಾಂತಗಳನ್ನು ಒಪ್ಪುವ ವರ್ಮಾ, ಅವರ ಜೀವನಾಧರಿತ ತಥಾಗತ ಮತ್ತು ಸಬಧಂ ಎಂಬ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ನಾವು ಹೆಚ್ಚು ಅಟೆನ್ಷನ್‌ ನೀಡುತ್ತಿದ್ದೇವೆ. ಹಾಗಾಗಿ ಕತ್ತೆಗೂ ತಾನು ಸಿಂಹ ಎಂಬ ಭಾವನೆ ಬಂದಿರಬೇಕು ಎಂದು ವ್ಯಂಗ್ಯ ಟ್ವೀಟ್ ಮಾಡಿದ್ದಾರೆ. ಈ ವ್ಯಂಗ್ಯ ಸಾಲನ್ನು ಯಾರ ಬಗ್ಗೆ ಬರೆದುಕೊಂಡಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ.

ರಾಮ್‌ ಗೋಪಾಲ್ ವರ್ಮಾ ಟ್ವಿಟ್‌ಗೆ ಕಮೆಂಟ್ ಮಾಡುತ್ತಿರುವ ನೆಟ್ಟಿಗರು, ಇದು ಯಾರ ಬಗ್ಗೆ ಬರೆದ ಸಾಲು ಎಂದು ಹೇಳಿ ಅಂತಿದ್ದಾರೆ. ಕೆಲವರು ಪವನ್ ಕಲ್ಯಾಣ್ ಬಗ್ಗೆ ಇರಬಹುದು ಎಂದು ಊಹಿಸಿದ್ದಾರೆ.

ಇನ್ನು ಕೆಲವರು ಜಗನ್ ಮೋಹನ್ ರೆಡ್ಡಿ ನಗುತ್ತಿರುವ ಜಿಫ್ ಹಾಕಿದ್ದಾರೆ. ಫನ್ನಿ ಕಮೆಂಟ್‌ಗಳು ಓದಿ ಕೆಲವರು ಎಂಜಾಯ್ ಸಹ ಮಾಡುತ್ತಿದ್ದಾರೆ. ಕಮೆಂಟ್ ಓದಲೆಂದಲೇ ಜನರು ಎಕ್ಸ್ ಖಾತೆಗೆ ಬರುತ್ತಿದ್ದಾರೆ.

ರಾಮ್ ಗೋಪಾಲ್ ವರ್ಮಾ ಅವರ ಸತ್ಯ, ರಂಗೀಲಾ ಮತ್ತು ಸರ್ಕಾರ್ ಚಿತ್ರಗಳು ಭಾರೀ ಮೆಚ್ಚುಗೆ ಪಾತ್ರವಾಗಿವೆ. ಆದ್ರೆ ಇತ್ತೀಚೆಗೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾ ಗುಣಮಟ್ಟ ಕಳಪೆಯಾಗ್ತಿದೆ ಎಂಬ ವಿಶ್ಲೇಷಣೆಗಳು ಸಹ ಕೇಳಿ ಬರುತ್ತಿವೆ

Latest Videos

click me!