ಲೋನ್ ಕಟ್ಟಲಾಗದೇ ಕಾರನ್ನೇ ಕಳೆದುಕೊಂಡ ಡ್ರೈವರ್ ಗೆ 12 ಲಕ್ಷದ ದುಬಾರಿ ಕಾರ್ ಗಿಫ್ಟ್ ನೀಡಿದ್ದ ಅನುಷ್ಕಾ ಶೆಟ್ಟಿ

Published : Jul 26, 2024, 06:34 PM IST

ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ತಮ್ಮ ನಟನೆ ಮತ್ತು ಸಿನಿಮಾಗಳಿಂದ ಎಷ್ಟು ಜನಪ್ರಿಯತೆ ಪಡೆದಿದ್ದಾರೋ, ಇವರ ಸಮಾಜ ಸೇವೆಯಂತಹ ಕೆಲಸಗಳಿಂದಲೂ ನಟಿ ಸದಾ ಸುದ್ದಿಯಲ್ಲಿರುತ್ತಾರೆ.   

PREV
19
ಲೋನ್ ಕಟ್ಟಲಾಗದೇ ಕಾರನ್ನೇ ಕಳೆದುಕೊಂಡ ಡ್ರೈವರ್ ಗೆ 12 ಲಕ್ಷದ ದುಬಾರಿ ಕಾರ್ ಗಿಫ್ಟ್ ನೀಡಿದ್ದ ಅನುಷ್ಕಾ ಶೆಟ್ಟಿ

ನಟಿ ಅನುಷ್ಕಾ ಶೆಟ್ಟಿ (Anushka Shetty) ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ಎಂದೇ ಹೇಳಬಹುದು. ವಿಭಿನ್ನ ಪಾತ್ರಗಳು ಮತ್ತು ಅದ್ಭುತ ನಟನೆಯ ಮೂಲಕ ದೇಶಾದ್ಯಂತ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ ಅನುಷ್ಕಾ ಶೆಟ್ಟಿ. 

29

ಬಾಹುಬಲಿ, ಅರುಂಧತಿಯಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಂಗಳೂರಿನ ಬೆಡಗಿ ಸ್ವೀಟಿ ಶೆಟ್ಟಿ (Sweet Shetty) ತಮ್ಮ ಉತ್ತಮ ಕೆಲಸಗಳಿಂದಲೂ ಜನರಿಗೆ ಮಾದರಿಯಾಗುತ್ತಿರುತ್ತಾರೆ. ಇವರು ಹಲವು ರೀತಿಯಲ್ಲಿ ಸಮಾಜ ಸೇವೆಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದು, ಎಲ್ಲವನ್ನೂ ಯಾರಿಗೂ ಗೊತ್ತಾಗದಂತೆ ಮಾಡ್ತಾರೆ ನಟಿ. 
 

39

ಅನುಷ್ಕಾ ಅವರ ವೃತ್ತಿಜೀವನದಲ್ಲಿ ಗೇಮ್ ಚೇಂಜರ್ ಮತ್ತು ಗಮನಾರ್ಹ ಚಿತ್ರವಾದ ಅರುಂಧತಿಯನ್ನು ನಿರ್ಮಿಸಿದ ಶ್ಯಾಮ್ ಪ್ರಸಾದ್ ರೆಡ್ಡಿಯವರು (Shyam Prasad Reddy) ವರ್ಷಗಳ ಹಿಂದೆ ಅನುಷ್ಕಾ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದರು.  ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ  ಈಗಲೂ ವೈರಲ್ ಆಗುತ್ತಿದೆ. ಈ ಘಟನೆಯಿಂದ ಅನುಷ್ಕಾ ಕೇವಲ ಒಬ್ಬ ಒಳ್ಳೆ ನಟಿ ಮಾತ್ರ ಅಲ್ಲ, ಒಳ್ಳೆ ಹೃದಯದ ಮಹಿಳೆ ಅನ್ನೋದು ತಿಳಿಯುತ್ತೆ. 
 

49

ಶ್ಯಾಮ್ ಪ್ರಸಾದ್ ರೆಡ್ಡಿಯವರು ವರ್ಷಗಳ ಹಿಂದೆ ವೆಕೇಶನ್ ಎಂಜಾಯ್ ಮಾಡೊದಕ್ಕೆ ಜಾರ್ಜಿಯಾಕ್ಕೆ ಹೋಗಿದ್ದರಂತೆ, ಅಲ್ಲಿ ಅವರು ಝಾಝಾ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದರು. ದೂರ ದೇಶದಲ್ಲಿನ ಆ ವ್ಯಕ್ತಿ ಅನುಷ್ಕಾ ಬಗ್ಗೆ ಹೇಳಿದ ಮಾತು ಕೇಳಿ ರೆಡ್ಡಿಯವರು ಅಚ್ಚರಿಗೊಂಡಿದ್ರಂತೆ. 
 

59

ಜಾರ್ಜಿಯಾದಲ್ಲಿ ಶ್ಯಾಮ್ ಪ್ರಸಾದ್ ಒಳ್ಲೆಯ ಚಾಲಕ ಮತ್ತು ಕೇರ್ ಟೇಕರ್ (Care taker)  ಒಬ್ಬರನ್ನು ಹುಡುಕುತ್ತಿದ್ದಾಗ,   ಅವರನ್ನು ಏರ್ ಪೋರ್ಟ್ ನಿಂದ ಕರೆದೊಯ್ಯಲು ಬೆಂಜ್ ಕಾರಿನಲ್ಲಿ  ಝಾಝಾ ಎಂಬ ವ್ಯಕ್ತಿ ಬಂದಿದ್ದರಂತೆ. ಡ್ರೈವರ್ ಮಾತನಾಡುತ್ತಾ, ಎಲ್ಲಿಂದ ಬಂದವರು ಎಂದು ಕೇಳಿದಾಗ, ಶ್ಯಾಮ್ ಪ್ರಸಾದ್ ತಾವು ಭಾರತದಲ್ಲಿನ ಹೈದರಾಬಾದ್ ನಿಂದ ಬಂದಿರೋದಾಗಿ ಹೇಳಿದಾಗ ಡ್ರೈವರ್ ಝಾಝಾಗೆ ತುಂಬಾನೆ ಖುಷಿಯಾಯಿತಂತೆ. 
 

69

ಅಷ್ಟೇ ಅಲ್ಲ ಜಾಜಾ ಅವರು ಶ್ಯಾಮ್ ಪ್ರಸಾದ್ ಬಳಿ ನಿಮಗೆ ಸ್ವೀಟಿ (ಅನುಷ್ಕಾ) ಪರಿಚಯ ಇದ್ಯಾ ಎಂದು ಕೇಳಿದಾಗ, ಶ್ಯಾಮ್ ಪ್ರಸಾದ್ ಹೌದು, ಅವರ ಜೊತೆ ತಾವು ಕೆಲಸ ಮಾಡಿರೋದಾಗಿ ಹೇಳಿದ್ದರಂತೆ. ಆವಾಗ ಝಾಝಾ ತೆಲುಗಿನ ವರ್ಣಾ ಚಿತ್ರದ ಚಿತ್ರೀಕರಣದ (Varna cinema shooting) ಸಮಯದಲ್ಲಿ ಅನುಷ್ಕಾ ಅವರೊಂದಿಗಿನ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 
 

79

ಜಾರ್ಜಿಯಾದಲ್ಲಿ ಮೂರು ತಿಂಗಳ ಕಾಲ ವರ್ಣಾ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಝಾಝಾ ಅನುಷ್ಕಾ ಅವರ ಕೇರ್ ಟೇಕರ್ ಮತ್ತು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರಂತೆ. ಮೂರು ವಾರಗಳ ನಂತರ, ಅನುಷ್ಕಾ ಮತ್ತು ಝಾಝಾ ನಡುವೆ ಉತ್ತಮ ಸ್ನೇಹ ಬೆಳೆಯಿತು. ಒಂದು ದಿನ ಝಾಝಾ ಕೆಲಸಕ್ಕೆ ಇದ್ದಕ್ಕಿದ್ದಂತೆ ಗೈರುಹಾಜರಾಗಿದ್ದರು. 
 

89

ಈ ಬಗ್ಗೆ ಅನುಷ್ಕಾ ತಮ್ಮ ಮ್ಯಾನೇಜರ್ ಗೆ ಕೇಳಿದಾಗ, ಅವರು ಝಾಝಾ  ತಮ್ಮ ಕಾರಿನ ಲೋನ್ ಕಟ್ಟಲು ಸಾಧ್ಯವಾಗದ ಕಾರಣ, ಅವರ ಕಾರನ್ನು ಜಪ್ತಿ ಮಾಡಲಾಗಿದೆ ಅನ್ನೋದು ಅನುಷ್ಕಾಗೆ ತಿಳಿಯಿತು.  ಅನುಷ್ಕಾ ಆ ಸಂಜೆಯೇ  ಝಾಝಾ ಅವರನ್ನು ಭೇಟಿಯಾಗಿ, ಅವರನ್ನ ಕಾರು ಶೋರೂಮಿಗೆ ಕರೆದುಕೊಂಡು ಹೋಗಿ ಹೊಚ್ಚ ಹೊಸ ದುಬಾರಿ ಕಾರನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದರಂತೆ. 
 

99

ತಮ್ಮದಲ್ಲದ ದೇಶದಲ್ಲಿನ ಒಬ್ಬ ಸಾಮಾನ್ಯ ಕಾರ್ ಡ್ರೈವರ್ ಗೆ ಅನುಷ್ಕಾ ನೀಡಿದ ಕೊಡುಗೆ ನೋಡಿ, ಝಾಝಾ ಕುಟುಂಬವು ಕಣ್ಣೀರಿಟ್ಟಿತ್ತಂತೆ ಮತ್ತು ಅನುಷ್ಕಾಗೆ ಧನ್ಯವಾದ ಅರ್ಪಿಸಿದರಂತೆ. ಆದರೆ ಅನುಷ್ಕಾ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದ್ರೆ ನಿರ್ಮಾಪಕರು ಈ ಗುಟ್ಟು ಹೇಳಿದ ಬಳಿಕ ವರ್ಷಗಳಿಂದ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories