OTTಯಲ್ಲಿ ಸದ್ದು ಮಾಡ್ತಿದೆ ಬಹಿಷ್ಕರಣ… ಮೊದಲ ಬಾರಿ ಹಸಿಬಿಸಿ ದೃಶ್ಯದಲ್ಲಿ ನಟಿಸಿದ ಅನುಭವ ಬಿಚ್ಚಿಟ್ಟ ನಟಿ ಅಂಜಲಿ

First Published | Jul 26, 2024, 6:37 PM IST

ರಣವಿಕ್ರಮ ಸಿನಿಮಾದ ನಟಿ ಅಂಜಲಿ ಮುಖ್ಯ ಪಾತ್ರದಲ್ಲಿ ನಟಿಸಿದ ಬಹಿಷ್ಕರಣ ಚಿತ್ರ ಜುಲೈ 19 ರಿಂದ ಜೀ 5 ನಲ್ಲಿ ಪ್ರಸಾರವಾಗಲಿದೆ. ಅಂಜಲಿ ಈ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದು, ಹಸಿಬಿಸಿ ದೃಶ್ಯದಲ್ಲಿನ ನಟನೆ ಬಗ್ಗೆ ಮಾತನಾಡಿದ್ದಾರೆ. 
 

ಪುನೀತ್ ರಾಜ್ ಕುಮಾರ್ ನಟಿಸಿದ್ದ ರಣವಿಕ್ರಮ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಅಂಜಲಿ (Anjali) ಸದ್ಯ ತೆಲುಗು ಸಿನಿಮಾಗಳಲ್ಲಿ, ವೆಬ್ ಸೀರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅಂಜಲಿ ಮುಖ್ಯ ಪಾತ್ರದಲ್ಲಿ ನಟಿಸಿದ ಅಂಜಲಿ ಅವರ ಬಹಿಷ್ಕರಣ’ ವೆಬ್ ಸೀರೀಸ್ ಜುಲೈ 19 ರಿಂದ ಜೀ 5 ನಲ್ಲಿ ಪ್ರಸಾರವಾಗುತ್ತಿದೆ.
 

ವೇಶ್ಯಾವಾಟಿಕೆಯ ಕಥೆ ಮತ್ತು ಹಳ್ಳಿಗಾಡಿನ ಚಿತ್ರಣವನ್ನು ಹೊಂದಿರುವ ಬಹಿಷ್ಕರಣ ಸೀರೀಸ್ (Bahishkarana Web series) ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಸೀರೀಸ್ ನ ಇಮೋಶನಲ್ ಸೀನ್ ಗಳು, ಅದ್ಭುತ ನಟನೆಗಾಗಿ ಅಂಜಲಿ ಸೇರಿದಂತೆ ಇತರ ನಟರ ಕುರಿತು ಉತ್ತಮ ಪ್ರತಿಕೃಯೆ ವ್ಯಕ್ತವಾಗಿದೆ. 
 

Tap to resize

ಅಂಜಲಿಯ ಬಗ್ಗೆ ಹೇಳೋದಾದ್ರೆ ಬಹಿಷ್ಕರಣ ಸೀರೀಸ್ ನಲ್ಲಿ ಅಂಜಲಿ  ಪುಷ್ಪಾ ಎಂಬ ವೇಶ್ಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಈ ಪಾತ್ರದಲ್ಲಿ ತಮ್ಮ ಅಭಿನಯದಿಂದ ಜನ ಮನ ಗೆದ್ದಿದ್ದಾರೆ.  ವೆಬ್ ಸೀರೀಸ್ ನ ನಟನೆಯ ಬಗ್ಗೆ ಅಂಜಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಹಸಿಬಿಸಿ ದೃಶ್ಯಗಳಲ್ಲಿ ಮೊದಲ ಬಾರಿಗೆ ನಟಿಸಿರುವ ಅನುಭವವನ್ನು ಸಹ ಬಿಚ್ಚಿಟ್ಟಿದ್ದಾರೆ. 
 

ಪುಷ್ಪಾ ಪಾತ್ರಕ್ಕೆ ಬಂದ ಪ್ರತಿಕ್ರಿಯೆ ಬಗ್ಗೆ ಉತ್ತರಿಸಿರುವ ಅಂಜಲಿ ಬಹಿಷ್ಕರಣ ಸರಣಿಯಲ್ಲಿ ಪುಷ್ಪಾ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದೊಂದು ರಾ ಮತ್ತು ಹಳ್ಳಿಗಾಡಿನ ಪಾತ್ರವಾಗಿದ್ದು, ನನಗೆ ತುಂಬಾನೆ ಇಷ್ಟವಾದ ಪಾತ್ರ ಇದಾಗಿದ್ದು. ಏಕೆಂದರೆ ಪುಷ್ಪಾ ಪಾತ್ರ ಅಷ್ಟೊಂದು ಡೀಪ್ ಆಗಿದೆ. ತನ್ನ ಪಾತ್ರದಲ್ಲಿನ ಭಾವನೆಗಳನ್ನು ಬಹಳ ಸ್ಟ್ರಾಂಗ್ ಆಗಿ ತೋರಿಸಲಾಗಿದೆ ಎಂದು ಅಂಜಲಿ ಹೇಳಿದ್ದಾರೆ. 
 

ಗ್ರಾಮೀಣ ಕಥೆಯನ್ನು ಹೊಂದಿರುವ ಬಹಿಷ್ಕರಣ ಸೀರೀಸ್ ನ ಪುಷ್ಪಾ ಪಾತ್ರದಲ್ಲಿನ ಇಮೋಶನ್ ಜೊತೆ ಪ್ರೇಕ್ಷಕರು ಕನೆಕ್ಟ್ ಆಗಿದ್ದಾರೆ. ಪಾತ್ರಕ್ಕೆ ಸರಿಹೊಂದುವಂತೆ ಅಂಜಲಿ ಕೆಲವು ಬೋಲ್ಡ್ ಸೀನ್ ಗಳಲ್ಲೂ ನಟಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, "ಆರಂಭದಲ್ಲಿ, ಬೋಲ್ಡ್ ದೃಶ್ಯಗಳಲ್ಲಿ ನಟಿಸುವುದು ಸ್ವಲ್ಪ ಕಷ್ಟಕರವಾಗಿತ್ತು. ಅಂತಹ ಪಾತ್ರಗಳನ್ನು ಮಾಡುವುದು ನನಗೆ ಚಾಲೆಂಜ್ ಆಗಿತ್ತು ಎಂದಿದ್ದಾರೆ. 

ಮೊದಲ ಬಾರಿಗೆ ಹಸಿಬಿಸಿ ದೃಶ್ಯಗಳಲ್ಲಿ (bold scene) ನಟಿಸಿದ ನಂತರ, ನಾನು ತುಂಬಾ ಭಾವುಕಳಾಗಿದ್ದೆ.  ಆ ದೃಶ್ಯ ಮಾಡಿದ ಬಳಿಕ ಕಣ್ಣೀರಿಟ್ಟಿದ್ದೆ, ಯಾಕಂದ್ರೆ ಇದಕ್ಕೂ ಮೊದಲು ನಾನು ಇಂಥ ದೃಶ್ಯಗಳನ್ನ ಮಾಡಿರಲಿಲ್ಲ. ಬೋಲ್ಡ್ ದೃಶ್ಯದಲ್ಲಿ ನಟಿಸಲು ನಾನು ಮೊದಲೇ ರೆಡಿಯಾಗಿರಲಿಲ್ಲ. ಆದರೂ, ನಾನು ಅದನ್ನು ಸವಾಲಾಗಿ ತೆಗೆದುಕೊಂಡು ಅದರಲ್ಲಿ ನಟಿಸಿದೆ" ಎಂದು ಅಂಜಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸುವಾಗಿನ ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಹೇಳಿದ್ದಾರೆ. 

"ಪುಷ್ಪಾ ಪಾತ್ರವನ್ನು ಬೋಲ್ಡ್ ಆಗಿ ನಿರ್ವಹಿಸೋದು ನನಗೆ ಹೊಸದು, ಆದರೆ ನಾನು ಮಾಡುತ್ತಿರುವ ಪಾತ್ರ ಮತ್ತು ಅದನ್ನು ಹೇಗೆ ಮಾಡಬೇಕೆನ್ನುವ ತಿಳುವಳಿಕೆ ನನಗಿತ್ತು. ಅದಕ್ಕಾಗಿಯೇ ಈ ಪಾತ್ರ ಪ್ರೇಕ್ಷಕರಿಗೂ ಇಷ್ಟವಾಗಿದೆ. ನಾನು ಆ ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಿದ್ದಾಗ, ಸೆಟ್ ಗಳಲ್ಲಿ ಕೆಲವೇ ಜನ ಇದ್ದರು. ನಿರ್ದೇಶಕರು ಉಳಿದವರನ್ನೆಲ್ಲಾ ಹೊರಗೆ ಕಳುಹಿಸಿದರು. ಹಾಗಾಗಿ ನಾನು ಆರಾಮವಾಗಿ ನಟಿಸಲು ಸಾಧ್ಯವಾಯಿತು ಎಂದಿದ್ದಾರೆ ಅಂಜಲಿ. 
 

ಬಿಡುಗಡೆಯಾದ ಮೂರು ದಿನಗಳಲ್ಲಿ, ಬಹಿಷ್ಕರಣ ಸೀರೀಸ್ 35 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳನ್ನು ಗಳಿಸಿತು. ಈ ವೆಬ್ ಸೀರೀಸ್ ನ್ನು ಮುಖೇಶ್ ಪ್ರಜಾಪತಿ ನಿರ್ದೇಶಿಸಿದ್ದಾರೆ ಮತ್ತು ಪ್ರಶಾಂತಿ ಮಾಲಿಶೆಟ್ಟಿ ನಿರ್ಮಿಸಿದ್ದಾರೆ. ಆರು ಕಂತುಗಳ ಸರಣಿ ಈಗ ಝೀ 5 ನಲ್ಲಿ ಪ್ರಸಾರವಾಗುತ್ತಿದೆ.

Latest Videos

click me!