ಮತ್ತೊಂದು ಹೊಸ ಮುಖ ಲಾಂಚ್ ಮಾಡುತ್ತಾರೆ RGV

First Published Jul 15, 2022, 5:27 PM IST

ರಂಗೀಲಾ’, ‘ಸತ್ಯ’, ‘ಶೂಲ್’, ‘ಕಂಪನಿ’ಯಂತಹ ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Goapl Varma) ಸಿನಿಮಾ ರಂಗಕ್ಕೆ  ಟ್ಯಾಲೆಂಟೆಡ್‌ ನಟಿಯರಾದ ಊರ್ಮಿಳಾ ಮಾತೋಂಡ್ಕರ್, ಶೆಫಾಲಿ ಶಾ, ಅಂತರ ಮಾಲಿಯನ್ನೂ ನೀಡಿದ್ದಾರೆ. ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಲು ಫೇಮಸ್‌ ಆಗಿರುವ ರಾಮ್ ಗೋಪಾಲ್ ವರ್ಮಾ ಅವರ ಮುಂದಿನ ಚಿತ್ರ 'ಲಡ್ಕಿ: ಎಂಟರ್ ದಿ ಗರ್ಲ್ ಡ್ರಾಗನ್'. ಜುಲೈ 15 ರಂದು ಭಾರತ ಮತ್ತು ಚೀನಾದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಅವರು ಮಾರ್ಷಲ್ ಆರ್ಟಿಸ್ಟ್ ಪೂಜಾ ಭಾಲೇಕರ್  (Pooja Bhalekar) ಅವರನ್ನು ಪರಿಚಯಿಸಲಿದ್ದಾರೆ. ರಾಮ್‌ ಗೋಪಾಲ್‌ ವರ್ಮಾ ಲಾಂಚ್‌ ಮಾಡಿದ ನಟಿಯರ ಪರಿಚಯ ಇಲ್ಲಿದೆ.

ಊರ್ಮಿಳಾ ಮಾತೋಂಡ್ಕರ್:

ಊರ್ಮಿಳಾ ಮಾತೋಂಡ್ಕರ್ ಅವರು 1991 ರಲ್ಲಿ ಬಿಡುಗಡೆಯಾದ ಸನ್ನಿ ಡಿಯೋಲ್ ಅಭಿನಯದ 'ನರಸಿಂಹ' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಬಹಳ ಹಿಂದೆಯೇ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರೂ 1995 ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಚಿತ್ರ 'ರಂಗೀಲಾ'ದಿಂದ ರಾಮ್ ಗೋಪಾಲ್ ವರ್ಮಾ ಅವರ ವೃತ್ತಿಜೀವನಕ್ಕೆ ನಿಜವಾದ ಬ್ರೇಕ್‌ ನೀಡಿದರು. ಈ ಚಿತ್ರದ ಮೂಲಕವೇ ಊರ್ಮಿಳಾ ನಾಯಕಿ ನಟಿಯಾಗಿ ತನ್ನನ್ನು ತಾನು ಪ್ರೂವ್ ಮಾಡಿದರು. ಇದಾದ ನಂತರ ಇಬ್ಬರೂ ಸೇರಿ 'ದೌರ್', 'ಸತ್ಯ', 'ಜಂಗಲ್', 'ಕಂಪನಿ', 'ಭೂತ್' ಮುಂತಾದ ಹಲವು ಹಿಟ್‌ಗಳನ್ನು ನೀಡಿದರು.

ಶೆಫಾಲಿ ಶಾ:

ಶೆಫಾಲಿ ಶಾ ಕೂಡ ರಾಮ್ ಗೋಪಾಲ್ ವರ್ಮಾ ಅವರ ಅನ್ವೇಷಣೆ. ‘ರಂಗೀಲಾ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಾದ ನಂತರ ರಾಮ್‌ ಗೋಪಾಲ್‌ ಅವರ ‘ಸತ್ಯ’ ಚಿತ್ರದಲ್ಲಿ ಕಾಣಿಸಿಕೊಂಡರು. ಅವರು ಚಿತ್ರದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ. ಇದರ ನಂತರ, 'ಮೊಹಬ್ಬತೇನ್', 'ದಿಲ್ ಧಡಕ್ನೆ ದೋ' ಮತ್ತು 'ಅಜೀಬ್ ದಸ್ತಾನ್' ಚಿತ್ರಗಳಲ್ಲಿ ಕಾಣಿಸಿಕೊಂಡ ಶೆಫಾಲಿ ಇಂದು ಉದ್ಯಮದ ಅತ್ಯುತ್ತಮ ನಟಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇತ್ತೀಚೆಗೆ ಅವರು 'ದೆಹಲಿ ಕ್ರೈಮ್' ಮತ್ತು 'ಹ್ಯೂಮನ್' ಎಂಬ ಎರಡು ಯಶಸ್ವಿ ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಂತರಾ ಮಾಲಿ:

ಬಾಲಿವುಡ್‌ನ ಖ್ಯಾತ ಛಾಯಾಗ್ರಾಹಕ ಜಗದೀಶ್ ಮಾಲಿ ಅವರ ಮಗಳು ಅಂತರಾ ಮಾಲಿಗೆ 1999 ರಲ್ಲಿ ಆರ್‌ಜಿವಿ ಅವರ ತಮಿಳು ಚಿತ್ರ 'ಪ್ರೇಮ್ ಕಥಾ'ದಲ್ಲಿ ಮೊದಲು ಬ್ರೇಕ್ ನೀಡಿದರು. ಇದಾದ ನಂತರ ರಾಮ್‌ ಗೋಪಾಲ್‌ ಅವರ 'ಮಸ್ತ್', 'ಕಂಪನಿ', 'ರೋಡ್', 'ದರ್ನಾ ಜರೂರಿ ಹೈ', 'ಗಾಬ್', 'ನಾಚ್' ಮತ್ತು 'ಮೇನ್ ಮಾಧುರಿ ದೀಕ್ಷಿತ್ ಬನಾನಾ ಚಾಹತಿ ಹೂ' ಮುಂತಾದ ಹಲವು ಚಿತ್ರಗಳಲ್ಲಿ ಅಂತರಾಗೆ ಬಾಲಿವುಡ್‌ನಲ್ಲಿ ಅವಕಾಶ ನೀಡಿದರು. ನಂತರ ಅಂತಾರಾ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟಾಗ ಅವರ ‘ಮಿಸ್ಟರ್ ಯಾ ಮಿಸ್’ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ನಿರ್ಮಿಸಿದ್ದರು. ಆದರೆ ಈ ಚಿತ್ರವೂ ಕೈಗೂಡಲಿಲ್ಲ. ನಟಿ ಸಾಕಷ್ಟು ಪ್ರಯತ್ನಗಳ ನಂತರ, 2009 ರಲ್ಲಿ, ಅವರು GQ ನಿಯತಕಾಲಿಕದ ಸಂಪಾದಕ ಚೆ ಕುರಿಯನ್ ಅವರನ್ನು ವಿವಾಹವಾದರು ಮತ್ತು ನಟನೆಗೆ ವಿದಾಯ ಹೇಳಿದರು.

ನಿಶಾ ಕೊಠಾರಿ:

ನಿಶಾ ಕೊಠಾರಿ ಅವರನ್ನು ದಕ್ಷಿಣದಿಂದ ಬಾಲಿವುಡ್‌ಗೆ ಕರೆತಂದ ಶ್ರೇಯಸ್ಸು ರಾಮ್ ಗೋಪಾಲ್ ವರ್ಮಾ ಅವರಿಗೆ ಸಲ್ಲುತ್ತದೆ. ಇವರ ನಿರ್ದೇಶನದ ‘ಸರ್ಕಾರ್’ ಚಿತ್ರದ ಮೂಲಕ ನಿಶಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಇಬ್ಬರೂ 'ಜೇಮ್ಸ್', 'ಡರ್ನಾ ಜರೂರಿ ಹೈ', 'ರಾಮ್ ಗೋಪಾಲ್ ವರ್ಮಾ ಕಿ ಆಗ್', 'ಗೋ' ಮತ್ತು 'ಡಾರ್ಲಿಂಗ್' ಮುಂತಾದ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ರಾಮ್‌ ಗೋಪಾಲ್‌ ವರ್ಮಾ ಅವರ ಕ್ಯಾಂಪ್ ಹೊರತುಪಡಿಸಿ, ಅವರು ಕೆಲವು ಚಿತ್ರಗಳಲ್ಲಿ ನಟಿಸಿದರು ಆದರೆ ಅವರ ವೃತ್ತಿಜೀವನವು ವೇಗವನ್ನು ಪಡೆಯಲಿಲ್ಲ. 2016 ರಲ್ಲಿ ಅವರು ದೆಹಲಿ ಮೂಲದ ಉದ್ಯಮಿ ಭಾಸ್ಕರ್ ಪ್ರಧಾನ್ ಅವರನ್ನು ವಿವಾಹವಾದರು ಮತ್ತು ಚಿತ್ರ ಉದ್ಯಮಕ್ಕೆ ವಿದಾಯ ಹೇಳಿದರು.

ಜಿಯಾ ಖಾನ್‌:

ಅಮಿತಾಭ್ ಬಚ್ಚನ್ ಅವರೊಂದಿಗೆ ಪಾದಾರ್ಪಣೆ ಮಾಡುವುದು ಪ್ರತಿಯೊಬ್ಬ ನಟಿಯ ಕನಸು ಮತ್ತು ನಟಿ ಜಿಯಾ ಖಾನ್ ಅವರ ಈ ಕನಸನ್ನು ರಾಮ್ ಗೋಪಾಲ್ ವರ್ಮಾ ಅವರು ಈಡೇರಿಸಿದ್ದಾರೆ. ಜಿಯಾ ತನ್ನ 19ನೇ ವಯಸ್ಸಿನಲ್ಲಿ ಅಮಿತಾಬ್ ಜೊತೆಗಿನ 'ನಿಶಬ್ದ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅವರು ತನಗಿಂತ 46 ವರ್ಷ ದೊಡ್ಡ ಬಿಗ್ ಬಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಈ ಚಿತ್ರದ ನಂತರ ಅವರು ಆಮೀರ್ ಖಾನ್ ಅವರ 'ಗಜಿನಿ' ಮತ್ತು ಅಕ್ಷಯ್ ಕುಮಾರ್ ಅವರ 'ಹೌಸ್‌ಫುಲ್' ಚಿತ್ರದಲ್ಲೂ ಕಾಣಿಸಿಕೊಂಡರು. ಜೂನ್ 2013 ರಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡ ಸಮಯಲ್ಲಿ ಅವರ ವೃತ್ತಿಜೀವನವು ವೇಗವನ್ನು ಪಡೆಯುತ್ತಿತ್ತು. ಕೇವಲ 25ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ ಜಿಯಾ ಸಾವಿನ ರಹಸ್ಯ ಇಂದಿಗೂ ಬಗೆಹರಿದಿಲ್ಲ.

click me!