ಸೌಂದರ್ಯದಲ್ಲಿ ಸೊಸೆಗೆ ಸ್ವರ್ಧೆ ನೀಡುವ ಪ್ರಿಯಾಂಕಾ ಚೋಪ್ರಾ ಅತ್ತೆ; ಇಬ್ಬರ ಏಜ್‌ಗ್ಯಾಪ್‌ ಗೊತ್ತಾ?

First Published | Jul 13, 2022, 7:34 PM IST

ಪ್ರಿಯಾಂಕಾ ಚೋಪ್ರಾ ಅವರ ಅತ್ತೆ ಡೆನಿಸ್ ಮಿಲ್ಲರ್ ಜೋನಾಸ್ ಅವರಿಗೆ 56 ವರ್ಷ. ಅತ್ತೆಗೆ ಹುಟ್ಟುಹಬ್ಬದಂದು ನಟಿ ವಿಶಿಷ್ಟ ರೀತಿಯಲ್ಲಿ ಶುಭ ಹಾರೈಸಿದರು. ಇನ್‌ಸ್ಟಾ ಸ್ಟೋರಿಯಲ್ಲಿ ಅತ್ತೆಯೊಂದಿಗೆ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಪ್ರಿಯಾಂಕಾ ಅವರಿಗೆ ಬರ್ತ್‌ಡೇ ವಿಶ್‌ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ಅವರ ಅತ್ತೆ ನಡುವಿನ ಅದ್ಭುತ ಬಾಂಧವ್ಯದ ಫೋಟೋಗಳು ಇಲ್ಲಿವೆ

'ಜನ್ಮದಿನದ ಶುಭಾಶಯಗಳು.ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ನನ್ನ ಜೀವನದಲ್ಲಿ ನಿಮ್ಮನ್ನು ಹೊಂದಿದ್ದಕ್ಕೆ ತುಂಬಾ ಸಂತೋಷವಾಗಿದೆ' ಎಂದು ಫೋಟೋ ಜೊತೆ ಪ್ರಿಯಾಂಕಾ ಚೋಪ್ರಾ ಬರೆದಿದ್ದಾರೆ.

ಅತ್ತೆಯೊಂದಿಗೆ ಪ್ರಿಯಾಂಕಾ ಚೋಪ್ರಾ ತಮ್ಮ ಕಿರಿಯ ಸಹೋದರ ಸಿದ್ಧಾರ್ಥ್ ಚೋಪ್ರಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಲವ್ ಯೂ ಸಿದ್, ನಾನು ಯಾವಾಗಲೂ ನಿನಗಾಗಿ ಇದ್ದೇನೆ. ಜನ್ಮದಿನದ ಶುಭಾಶಯಗಳು, ನಿನ್ನನ್ನು ಪ್ರೀತಿಸುತ್ತೇನೆ ಎಂದು ತನ್ನ ಸಹೋದರನ ಬಾಲ್ಯದ ಫೋಟೋವನ್ನು ಹಂಚಿಕೊಂಡ ಅವರು ಬರೆದಿದ್ದಾರೆ..

Tap to resize

ಪ್ರಿಯಾಂಕಾ ಚೋಪ್ರಾ ಹೆಚ್ಚಾಗಿ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಆದರೆ ಸಮಯ ಸಿಕ್ಕಾಗ ಅತ್ತೆಯೊಂದಿಗೆ ಗುಣಮಟ್ಟದ ಸಮಯ ಕಳೆಯುವುದನ್ನು ಸಹ ಕಾಣಬಹುದು.ಅಂತಹ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ನಿಕ್ ಜೋನಾಸ್ ಅವರೊಂದಿಗೆ ಪ್ರಿಯಾಂಕಾ ಚೋಪ್ರಾ ಅವರ ನಿಶ್ಚಿತಾರ್ಥದ ಸಮಯದಲ್ಲಿ ಡೆನಿಸ್ ಜೋನಾಸ್ ಕೂಡ ಮುಂಬೈಗೆ ಬಂದಿದ್ದರು.  ಅತ್ತೆ ಮತ್ತು ಸೊಸೆಯ ನಡುವೆ  ವಯಸ್ಸಿನಲ್ಲಿ ಕೇವಲ 16 ವರ್ಷಗಳ ವ್ಯತ್ಯಾಸವಿದೆ.

ಜೋನಾಸ್ ಕುಟುಂಬ ಆಗಾಗ ರಜೆಯನ್ನು ಆನಂದಿಸುತ್ತಿದೆ.  ಆ ಸಮಯದ ಫೋಟೋಗಳಲ್ಲಿ ಪ್ರಿಯಾಂಕಾ ಮತ್ತು ಡೆನಿಸ್ ಅವರ ಬಾಂಧವ್ಯವು ಕಂಡುಬರುತ್ತದೆ. ಈ ವಯಸ್ಸಿನಲ್ಲೂ ಡೆನಿಸ್ ಸೌಂದರ್ಯದಲ್ಲಿ ಸೊಸೆಯೊಂದಿಗೆ ಸ್ಪರ್ಧಿಸುತ್ತಾರೆ. 

ತನ್ನ ಮಗನ ನಿಶ್ಚಿತಾರ್ಥಕ್ಕಾಗಿ ಅವರು ಭಾರತೀಯ ಬಟ್ಟೆಗಳನ್ನು ಧರಿಸಿದ್ದರು . ಪ್ರಿಯಾಂಕಾ ಚೋಪ್ರಾ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಾಗ, ಅವರ ಅತ್ತೆ ಡೆನ್ನಿಸ್ ಅದರಲ್ಲಿ ಸೀರೆ ಮತ್ತು ಸಲ್ವಾರ್ ಸೂಟ್ ಅನ್ನು ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
 

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಡೆನಿಸ್‌ಗೆ ನಾಲ್ಕು ಗಂಡು ಮಕ್ಕಳಿದ್ದಾರೆ, ಕೆವಿನ್ ಜೊನಾಸ್, ಜೋ ಜೋನಾಸ್, ನಿಕ್ ಜೊನಾಸ್ ಮತ್ತು ಫ್ರಾಂಕಿ ಜೊನಾಸ್. ಪ್ರಿಯಾಂಕಾ ಅವರ ಪತಿ ನಿಕ್ ಮೂರನೇಯವರು.

ಪ್ರಿಯಾಂಕಾ ಚೋಪ್ರಾ 2018 ರಲ್ಲಿ ಉದಯಪುರದಲ್ಲಿ ತನಗಿಂತ 10 ವರ್ಷ ಕಿರಿಯ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾದರು. ಜೋನಾಸ್ ಕುಟುಂಬದ ಅನೇಕ ಸದಸ್ಯರು ಮದುವೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದರು ಮತ್ತು ಭಾರತೀಯ ಉಡುಗೆಯಲ್ಲಿಯೂ ಕಾಣಿಸಿಕೊಂಡರು.

Latest Videos

click me!