ಟಾಲಿವುಡ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಜೂನ್ 20ರಂದು ಬೆಳಗ್ಗೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ.
ಮಗುವಿಗೆ ಜನ್ಮ ನೀಡಿ ಮೂರು ದಿನಗಳ ಬಳಿಕ ಆಸ್ಪತ್ರೆಯಿಂದಿ ಡಿಸ್ಚಾರ್ಜ್ ಮಾಡಲಾಗಿದೆ. ಇಂದು ಉಪಾಸನಾ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಹೈದರಾಬಾದ್ ಅಪೋಲೋ ಆಸ್ಪತ್ರೆಯಿಂದ ಹೊರಬಂದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
baby
ರಾಮ್ ಚರಣ್ ಮತ್ತು ಉಪಾಸನಾ ಇಬ್ಬರೂ ಮುಗುವನ್ನು ಎತ್ತಿಕೊಂಡು ಕುಟುಂಬದ ಜೊತೆ ಆಸ್ಪತ್ರೆಯಿಂದ ಹೊರ ಬರುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಿವೆ.
ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಬಿಳಿ ಬಟ್ಟೆ ಧರಿಸಿದ್ದಾರೆ. ಮಗು ಕ್ಯಾಮರಾ ಕಣ್ಣಿಗೆ ಸರೆಯಾಗದೆ ಹಾಗೆ ಸುರಕ್ಷಿತವಾಗಿ ಎತ್ತಿಕೊಂಡು ಸಾಗಿದ್ದಾರೆ. ಬಟ್ಟೆಯಿಂದ ಮಗುವನ್ನು ಸಂಪೂರ್ಣ ಮುಚ್ಚಿಕೊಂಡು ರಾಮ್ ಚರಣ್ ದಂಪತಿ ಆಸ್ಪತ್ರೆಯಿಂದ ಹೊರಟಿದ್ದಾರೆ.
ಬಳಿಕ ರಾಮ್ ಚರಣ್ ಕ್ಯಾಮರಾಗಳತ್ತಾ ಕೈ ಮುಗಿದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಉಪಾಸನಾ ಮತ್ತು ರಾಮ್ ಚರಣ್ ಮದುವೆಯಾಗಿ 11 ವರ್ಷಗಳ ಬಳಿಕ ಮಗು ಜನಿಸಿದ್ದು ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.
ಲಿಟ್ಲ್ ಪ್ರಿನ್ಸ್ ಎಂದು ನಟ ಚಿರಂಜೀವಿ ಬಣ್ಣಿಸಿದ್ದಾರೆ. 'ಲಿಟಲ್ ಮೆಗಾ ಪ್ರಿನ್ಸೆಸ್‌ಗೆ ಸುಸ್ವಾಗತ. ನಿನ್ನ ಆಗಮನಿಂದ ಲಕ್ಷಾಂತರ ಮೆಗಾ ಕುಟುಂಬದಲ್ಲಿ ಉತ್ಸಾಹ ತುಂಬಿದ್ದಿಯಾ. ನೀನು ಪೋಷಕರಾದ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಮತ್ತು ನಾವು ಅಜ್ಜ-ಅಜ್ಜಿಯರಿಗೆ ಸಂತೋಷ ಮತ್ತು ಹೆಮ್ಮೆ ಪಡುವಂತೆ ಮಾಡಿದ್ದೀಯಾ' ಎಂದು ಪೋಸ್ಟ್ ಶೇರ್ ಮಾಡಿದ್ದರು.
ramcharan baby
ರಾಮ್ ಚರಣ್ ಮತ್ತು ಉಪಾಸನಾ ದಂಪತಿ 2012 ರಲ್ಲಿ ಜೂನ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಮದುವೆಯಾಗಿ 10 ವರ್ಷಗಳ ಬಳಿಕ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಉಪಾಸನಾ ಗರ್ಭಿಣಯಾಗಿರುವ ವಿಚಾರವನ್ನು ಡಿಸೆಂಬರ್‌ನಲ್ಲಿ ಬಹಿರಂಗ ಪಡಿಸಿದ್ದರು. ಇದೀಗ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.