ಆಯುಷ್ಮಾನ್ ಖುರಾನಾ:
ಆಯುಷ್ಮಾನ್ ಅತ್ಯಂತ ಪ್ರತಿಭಾವಂತ ನಟ ಮಾತ್ರವಲ್ಲದೆ ಅವರ ಉತ್ತಮ ಗಾಯಕ ಕೂಡ ಹೌದು. ಅವರ ಪಾನಿ ಡಾ ರಂಗ್, ಮಿಟ್ಟಿ ಡಿ ಖುಷ್ಬೂ ಹಾಡುಗಳು ಸಖತ್ ಫೇಮಸ್.
ಆಲಿಯಾ ಭಟ್:
ಬಾಲಿವುಡ್ ದಿವಾ ಆಲಿಯಾ ಭಟ್ ಉತ್ತಮ್ಮ ನಟಿ ಮಾತ್ರವಲ್ಲ ಉತ್ತಮ ಗಾಯಕಿ ಕೂಡ ಹೌದು. ಹಂಮ್ಟಿ ಶರ್ಮಾ ಕಿ ದುಲ್ಹಾನಿಯಾ, ಡಿಯರ್ ಜೀದಂಗಿ, ಉಡ್ತಾ ಪಂಜಾಬ್ ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ.
ಪರಿಣಿತಿ ಚೋಪ್ರಾ:
ಪರಿಣಿತಿ ಚೋಪ್ರಾ ಉತ್ತಮ ಗಾಯಕಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರು ತಮ್ಮ ಚಲನಚಿತ್ರಗಳಲ್ಲಿ ಅನೇಕ ಹಾಡುಗಳನ್ನು ಹೇಳಿದ್ದಾರೆ. ಪರಿಣಿತಿಯ ಧ್ವನಿಯನ್ನು ಜನರು ತುಂಬಾ ಇಷ್ಟಪಡುತ್ತಾರೆ.
ಶ್ರದ್ಧಾ ಕಪೂರ್:
ಬಾಲಿವುಡ್‌ನ ಯಂಗ್ ನಟಿ ಶ್ರದ್ಧಾ ಕಪೂರ್ ಉತ್ತಮ ಗಾಯಕಿ ಮತ್ತು ನರ್ತಕಿ ಕೂಡ ಹೌದು. ತೇರಿ ಗಲಿಯಾನ್, ಫಿರ್ ಭಿ ತುಮ್ಕೊ ಚಾಹುಂಗಿ ಮುಂತಾದವು ಇವರು ಧ್ವನಿಯಲ್ಲಿ ಮೂಡಿ ಬಂದ ಫೇಮಸ್ ಗೀತೆಗಳು.
ಫರ್ಹಾನ್ ಅಖ್ತರ್:
ಫರ್ಹಾನ್ ಉದ್ಯಮದ ಅತ್ಯಂತ ಪ್ರತಿಭಾವಂತ ನಟ. ಅಷ್ಟೇ ಅಲ್ಲ ಉತ್ತಮ ಗಾಯಕ ಕೂಡ ಹೌದು. ಅವರು ಯಾವಾಗಲೂ ಪ್ರದರ್ಶನ ನೀಡುವುದನ್ನು ನೋಡಬಹುದು
ದಿಲ್ಜಿತ್ ದೋಸಾಂಜ್:
ದಿಲ್ಜಿತ್ ಅವರು ಪಂಜಾಬಿ ಹಾಡುಗಳು ಮತ್ತು ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಹೆಸರನ್ನು ಮಾಡಿದ್ದಾರೆ. ನಟನೆಯ ಜೊತೆಗೆ ಅವರು ಯಾವಾಗಲೂ ಲೈವ್ ಕನ್ಸರ್ಟ್‌ಗಳಲ್ಲಿ ಹಾಡುತ್ತಾರೆ ಮತ್ತು ಪ್ರದರ್ಶನ ನೀಡುತ್ತಾರೆ.