ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ:ಆಲಿಯಾ ಭಟ್ ವೈಬ್ರೆಂಟ್ ಸೀರೆ ಲುಕ್‌ಗೆ ಫ್ಯಾನ್ಸ್‌ ಫಿದಾ!

Published : Jun 22, 2023, 04:24 PM IST

ಆಲಿಯಾ ಭಟ್ (Alia Bhatt) ಮತ್ತು ರಣವೀರ್ ಸಿಂಗ್ (Ranveer Singh) ಅಭಿನಯದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ( Rocky Aur Ran8i Kii Prem Khaani) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆಲಿಯಾ ಅವರ ವೈಬ್ರೆಂಟ್ ಸೀರೆಗಳು ಟೀಸರ್‌ನ ಪ್ರಮುಖ ಹೈಲೈಟ್‌ಗಳಲ್ಲಿ ಒಂದು. ಟೀಸರ್‌ನಿಂದ ಆಲಿಯಾ ಅವರ ಕೆಲವು ಸೀರೆ ನೋಟಗಳು ಇಲ್ಲಿವೆ.

PREV
19
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ:ಆಲಿಯಾ ಭಟ್ ವೈಬ್ರೆಂಟ್ ಸೀರೆ ಲುಕ್‌ಗೆ ಫ್ಯಾನ್ಸ್‌ ಫಿದಾ!

ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅಭಿನಯದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ಬಗ್ಗೆ ಘೋಷಣೆಯಾದ ಕ್ಷಣದಿಂದ ಸಾಕಷ್ಟು ಸುದ್ದಿಯಲ್ಲಿದೆ. 

29

ಈ ಚಿತ್ರದ ಮೂಲಕ ಕರಣ್ ಜೋಹರ್ ಅವರು ಏಳು ವರ್ಷಗಳ ನಂತರ ನಿರ್ದೇಶಕರ ಕುರ್ಚಿಗೆ ಮರಳಿದ್ದಾರೆ. ಯೇ ದಿಲ್‌ ಹೇ ಮುಶ್ಕಿಲ್‌ ಅವರ ಕೊನೆಯ ಪ್ರಾಜೆಕ್ಟ್‌.

39

ಅಂತಿಮವಾಗಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ  ಚಿತ್ರದ ಟೀಸರ್ ಬಿಡಲಾಯಿತು. ಗ್ರ್ಯಾಂಡ್ ಟೀಸರ್ ಆರೋಗ್ಯಕರ ಮನರಂಜನೆಯ ಭರವಸೆ ನೀಡಿದೆ ಮತ್ತು ಪ್ರತಿ ಫ್ರೇಮ್‌ನಲ್ಲಿಯೂ ಅದ್ದೂರಿತನವಿದೆ.

49

ಟೀಸರ್‌ ಬಗ್ಗೆ ಹೇಳುವುದಾದರೆ ಇದು ಕಥೆಯನ್ನು ಬಿಟ್ಟುಕೊಡುವುದಿಲ್ಲ, ಆದರೆ ಆಲಿಯಾ ಮತ್ತು ರಣವೀರ್ ಪ್ರೇಮಿಗಳ ಪಾತ್ರವನ್ನು ಊಹಿಸುವುದು ಸುಲಭ, ಆದರೆ ಅವರ ಪ್ರೇಮಕಥೆಯು ಸುಲಭವಾಗಿಲ್ಲ ಎಂದು ತಿಳಿಯಬಹುದು.

59

ಆಲಿಯಾ ಭಟ್‌ ಅವರು ಎಲ್ಲಾ ಸೀರೆ ಲುಕ್‌ನಲ್ಲಿ ತುಂಬಾ  ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ರಣವೀರ್ ಜೊತೆಗೆ ಉತ್ತಮ ಕೆಮಿಸ್ಟ್ರಿ ಹಂಚಿಕೊಂಡಿರುವುದು ನೋಡಬಹುದು.

69

ಈ  ಟೀಸರ್‌ನಲ್ಲಿ ಅಲಿಯಾ ಭಟ್ ಅವರ ಅದ್ಭುತ ಕಲರ್‌ಫುಲ್‌ ಸೀರೆಗಳು ಎದ್ದು ಕಾಣುತ್ತವೆ.1 ನಿಮಿಷ-16 ಸೆಕೆಂಡುಗಳ ಟೀಸರ್‌ನಲ್ಲಿ ಆಲಿಯಾ 20 ವಿವಿಧ  ಕಾಣಿಸಿಕೊಂಡಿದ್ದಾರೆ. 

79

ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಜೊತೆಗೆ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ಚಿತ್ರದ ಭಾಗವಾಗಿದ್ದಾರೆ. ಟೋಟಾ ರಾಯ್ ಚೌಧರಿ ಮತ್ತು ಚೂರ್ನಿ ಗಂಗೂಲಿ ಮುಂತಾದ ನಟರು ಸಹ ಚಿತ್ರದಲ್ಲಿದ್ದಾರೆ.

89

ಕರಣ್ ಜೋಹರ್ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಫ್ಯಾಮಿಲಿ ಡ್ರಾಮಾ ಚಿತ್ರಕ್ಕೆ ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ ಕಥೆ ಬರೆದಿದ್ದಾರೆ. ಪ್ರೀತಂ ಸಂಗೀತ ನೀಡಿದ್ದಾರೆ.

99

ಚಿತ್ರವು ಜುಲೈ 28 ರಂದು ಬಿಡುಗಡೆಯಾಗಲಿದೆ ಮತ್ತು ಅದರ ಜೊತೆಗೆ ಈ ಸಿನಿಮಾದ ಮೂಲಕ ಸಿನಿಮಾರಂಗದಲ್ಲಿ ಕರಣ್ ಜೋಹರ್‌ ಅವರ  25ನೇ ವರ್ಷವೂ ಆಗಿದೆ.

Read more Photos on
click me!

Recommended Stories