ಮದುವೆಯಾಗಿ ಎರಡು ವರ್ಷಗಳಲ್ಲೇ ವಿಚ್ಛೇದನ ಪಡೆದ್ರಾ ರಾಮ್ ಚರಣ್ ಸಹೋದರಿ?

First Published | Mar 23, 2023, 4:59 PM IST

ಆರ್‌ಆರ್‌ಆರ್‌ ಚಿತ್ರಗಳಲ್ಲಿ ನಟಿಸಿದ ತೆಲುಗು ಸ್ಟಾರ್ ರಾಮ್ ಚರಣ್ (Ram Charan)  ಅವರ ಸೋದರ ಸಂಬಂಧಿ ನಿಹಾರಿಕಾ ಕೊನಿಡೇಲಾ ಸುದ್ದಿಯಲ್ಲಿದ್ದಾರೆ ಅವರು ತಮ್ಮ ಪತಿ ಚೈತನ್ಯ ಜೊನ್ನಲಗಡ್ಡರಿಂದ ವಿಚ್ಛೇದನ ಪಡೆಯಲಿದ್ದಾರೆ. ಎಂದು ಹಲವು  ವರದಿಗಳಲ್ಲಿ ಹೇಳಲಾಗಿದೆ.

ನಿಹಾರಿಕಾ ಮತ್ತು ಪತಿ ಚೈತನ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲ, ಚೈತನ್ಯ ತಮ್ಮ ಸಾಮಾಜಿಕ ಜಾಲತಾಣ ಖಾತೆಯಿಂದ ಮದುವೆಯ ಚಿತ್ರಗಳನ್ನೂ ಡಿಲೀಟ್ ಮಾಡಿದ್ದಾರೆ. ಅಂದಿನಿಂದ ಚಿರಂಜೀವಿ ತಮ್ಮನ ಮಗಳ ಡಿವೋರ್ಸ್ ವರದಿಗಳು ಹೆಚ್ಚು ಬಲಗೊಳ್ಳುತ್ತಿವೆ.

ನಿಹಾರಿಕಾ ಕೊನಿಡೇಲ ಮತ್ತು ಚೈತನ್ಯ ಜೊನ್ನಲಗಡ್ಡ ಮದುವೆಯಾಗಿ ಬಹಳ ವರ್ಷಗಳಾಗಿಲ್ಲ. ಎರಡು ವರ್ಷಗಳ ಹಿಂದೆ 9 ಡಿಸೆಂಬರ್ 2020 ರಂದು ಅವರು ರಾಜಸ್ಥಾನದ ಉದಯಪುರದ ಹೋಟೆಲ್ ಒಬೆರಾಯ್ ಪ್ಯಾಲೇಸ್‌ನಲ್ಲಿ ಹಸೆಮಣೆ ಏರಿದರು.

Tap to resize

ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ದಂಪತಿ ಅನ್‌ಫಾಲೋ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದಾಗ ಇಬ್ಬರ ನಡುವಿನ ಸಂಬಂಧ ಹದಗೆಟ್ಟಿರುವ ವಿಷಯ ಬೆಳಕಿಗೆ ಬಂದಿತ್ತು.

ಈ ಬಗ್ಗೆ ದಂಪತಿಯಿಂದಾಗಲೀ ಅಥವಾ ಅವರ ಕುಟುಂಬದಿಂದಾಗಲೀ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಇತ್ತೀಚಿನ ಸುದ್ದಿಯ ಪ್ರಕಾರ ಅವರು ವಿಚ್ಛೇದನದತ್ತ ಸಾಗುತ್ತಿದ್ದಾರೆ.

ನಿಹಾರಿಕಾ ಕೊನಿಡೇಲಾ ರಾಮಚರಣ್ ಅವರ ತಂದೆ ಚಿರಂಜೀವಿ ಮತ್ತು ಚಿಕ್ಕಪ್ಪ ಪವನ್ ಕಲ್ಯಾಣ್ ಅವರ ಸಹೋದರ ನಾಗೇಂದ್ರ ಬಾಬು ಅವರ ಮಗಳು. ನಿಹಾರಿಕಾ ಕೊನಿಡೆಲಾ ಅವರು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುವ ವೃತ್ತಿಯಲ್ಲಿ ನಟಿ ಮತ್ತು ನಿರ್ಮಾಪಕಿ. ಪತಿ ಚೈತನ್ಯ ಜೊನ್ನಲಗಡ್ಡ ಉದ್ಯಮಿ.

2016 ರಲ್ಲಿ, ನಿಹಾರಿಕಾ ನಟಿಯಾಗಿ ದೊಡ್ಡ ಪರದೆಯ ಪಾದಾರ್ಪಣೆ ಮಾಡಿದರು. ಆಕೆಯ ಮೊದಲ ಚಿತ್ರ 'ಒಕ ಮನಸು', ಇದರಲ್ಲಿ ಆಕೆಯ ನಾಯಕ ನಾಗ ಶೌರ್ಯ. ಅವರ ಚಿಕ್ಕಪ್ಪ ಚಿರಂಜೀವಿ ಅವರ 'ಸೈರಾ ನರಸಿಂಹ ರೆಡ್ಡಿ'ಯಲ್ಲಿ ಅವರು ಕೊನೆಯದಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು

ನಿಹಾರಿಕಾ ಟಿವಿ ಶೋಗಳು ಮತ್ತು ವೆಬ್ ಸರಣಿಗಳ ನಿರ್ಮಾಪಕಿ. ‘ನನ್ನ ಕೂಚಿ’ಯಂತಹ ಕಾರ್ಯಕ್ರಮಗಳಲ್ಲಿ ನಟಿಯಾಗಿ ಹಾಗೂ ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿ ಅವರ  ವೆಬ್ ಸರಣಿ 'ಹಲೋ ವರ್ಲ್ಡ್', ಇದು 2022 ರಲ್ಲಿ ZEE5 ನಲ್ಲಿ ಸ್ಟ್ರೀಮ್ ಆಗಿತ್ತು.
 

Latest Videos

click me!