'ತಲೈವಿ' ಚಿತ್ರಕ್ಕಾಗಿ 20 ಕೆಜಿ ತೂಕ ಹೆಚ್ಚಿಸಿ ಇಳಿಸಿದ ಕಂಗನಾ, ಈಗ ವಿತರಕರಿಂದ ನಷ್ಟದ 6 ಕೋಟಿ ಬೇಡಿಕೆ?

Published : Mar 23, 2023, 04:43 PM ISTUpdated : Mar 23, 2023, 04:59 PM IST

ಬಾಲಿವುಡ್‌ ಕ್ವೀನ್‌ ಕಂಗನಾ ರಣಾವತ್ (Kangana Ranaut) ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 23 ಮಾರ್ಚ್ 1987 ರಂದು ಹಿಮಾಚಲ ಪ್ರದೇಶದ ಭಂಬ್ಲಾದಲ್ಲಿ ಜನಿಸಿದ ಕಂಗನಾ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಪ್ರಸ್ತುತ, ಅವರು ತಲೈವಿ ಚಿತ್ರದ ಮೂಲಕ ಮತ್ತೆ ಸುದ್ದಿ ಮಾಡುತ್ತಿದ್ದಾರೆ. 'ತಲೈವಿ' ಚಿತ್ರ  ವಿತರಕರು 6 ಕೋಟಿ ನಷ್ಟದ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ. ನಷ್ಟ ಪರಿಹಾರ ಕೋರಿರುವ ಸುದ್ದಿಗೆ ಕಂಗನಾ ಪ್ರತಿಕ್ರಿಯಿಸಿದ್ದಾರೆ. .

PREV
19
'ತಲೈವಿ' ಚಿತ್ರಕ್ಕಾಗಿ 20 ಕೆಜಿ ತೂಕ ಹೆಚ್ಚಿಸಿ ಇಳಿಸಿದ ಕಂಗನಾ, ಈಗ ವಿತರಕರಿಂದ ನಷ್ಟದ 6 ಕೋಟಿ ಬೇಡಿಕೆ?

ತಲೈವಿ ಸಿನಿಮಾ ನಷ್ಟದಲ್ಲಿದೆ ಮತ್ತು ವಿತರಕರು ಆಕೆಗೆ 6 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ ಎಂಬ ಸುದ್ದಿಗೆ ಕಂಗನಾ ಪ್ರತಿಕ್ರಿಯಿಸಿದ್ದಾರೆ.

29

ಇಂತಹ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಕಂಗನಾ ರಣಾವತ್,'ಇದು ಬಾಲಿವುಡ್ ಮಾಫಿಯಾ ಹರಡಿದ ಸುಳ್ಳು ಸುದ್ದಿ, ಇದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಕಂಗನಾ ಸ್ಪಷ್ಪಪಡಿಸಿದ್ದಾರೆ.

39

ಯಾವ ವಿತರಕರ ಬಗ್ಗೆ ಸುದ್ದಿ ಹಬ್ಬಿಸಲಾಗುತ್ತಿದೋ. ಅದೇ ಕಂಪನಿಯು ನನ್ನ ಮುಂಬರುವ ಚಿತ್ರ ಎಮರ್ಜೆನ್ಸಿಯ ಹಕ್ಕುಗಳನ್ನು ಖರೀದಿಸಿದೆ ಎಂದು ಕಂಗನಾ ಬಹಿರಂಗ ಪಡಿಸಿದ್ದಾರೆ.

 

 

49

ತಲೈವಿ' ಬಿಡುಗಡೆಗೂ ಮುನ್ನ ಹಕ್ಕುಗಳ ಮಾರಾಟದಿಂದ ಸಿನಿಮಾ ವೆಚ್ಚವನ್ನು ವಸೂಲಿ ಮಾಡಿದೆ ಮತ್ತು ಈಗ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಇಂತಹ ಫೇಕ್ ನ್ಯೂಸ್ ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕಿಡಿ ಕಾರಿದ್ದಾರೆ.
 

59
kangana

ಸುಮಾರು ಎರಡು ವರ್ಷಗಳ ಹಿಂದೆ 'ತಲೈವಿ' ಚಿತ್ರದ ವಿತರಣಾ ಹಕ್ಕನ್ನು ಖರೀದಿಸಿದ್ದ 'ಝೀ' ಸಂಸ್ಥೆಯು ಆರು ಕೋಟಿಗೆ ಖರೀದಿಸಿತ್ತು ಎಂದು ETimes ನ ಸುದ್ದಿಯಲ್ಲಿ ಹೇಳಲಾಗಿದೆ.

69

ವೆಚ್ಚದ ಆರನೇ ಒಂದು ಭಾಗವನ್ನು ಮಾತ್ರ ಚಿತ್ರ ಗಳಿಸಲು ಸಾಧ್ಯವಾಯಿತು. 60 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಒಟ್ಟು 10 ಕೋಟಿ ರೂ. ಗಳಿಸಿದೆ. ಅದೇ ಸಮಯದಲ್ಲಿ, ವಿತರಕರು ಚಿತ್ರದ ನಿರ್ಮಾಪಕರಿಂದ 6 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಕೇಳುತ್ತಿದ್ದಾರೆ. ಎಂದು ವರದಿಗಳು ಹೇಳುತ್ತಿವೆ.

79

23 ಮಾರ್ಚ್ 2021 ರಂದು ಬಿಡುಗಡೆಯಾದ ತಲೈವಿಗಾಗಿ ಕಂಗನಾ ರಣಾವತ್ ಬಾರೀ ಕಷ್ಟಪಟ್ಟಿದ್ದಾರೆ ಇದಕ್ಕಾಗಿ ಅವರು ತಮ್ಮ ತೂಕವನ್ನು 20 ಕೆಜಿ ಹೆಚ್ಚಿಸಿಕೊಂಡಿದ್ದರು.

89
kangana

 ಜಯಲಲಿತಾ ಬಯೋಪಿಕ್ ತಲೈವಿ ಚಿತ್ರಕ್ಕಾಗಿ, ಕಂಗನಾ ಕೆಲವೇ ತಿಂಗಳುಗಳಲ್ಲಿ 20 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರು ಮತ್ತು ನಂತರ ಅದನ್ನು ಕೆಲವೇ ದಿನಗಳಲ್ಲಿ ಹೆಚ್ಚಿಸಿಕೊಂಡಿದ್ದ ತೂಕವನ್ನು ಕಡಿಮೆ ಮಾಡುವ ಸವಾಲನ್ನು ಸ್ವೀಕರಿಸಿದರು.


 

99
kangana

ತಲೈವಿಯನ್ನು ವಿಮರ್ಶಕರು ಚೆನ್ನಾಗಿ ಸ್ವೀಕರಿಸಿದರು. ಇದರಲ್ಲಿ ಕಂಗನಾ ಕೂಡ ಅತ್ಯುತ್ತಮ ನಟನೆ ಮಾಡಿದ್ದಾರೆ. ಮತ್ತೊಂದೆಡೆ, ನಟಿಯ ಅಭಿಮಾನಿಗಳ ಪ್ರಕಾರ  ಬಾಲಿವುಡ್ ಗ್ಯಾಂಗ್ ತಲೈವಿ ಚಿತ್ರ ಮತ್ತು ಕಂಗನಾ ಅವರನ್ನು ಫ್ಲಾಪ್ ಎಂದು ಟ್ಯಾಗ್ ಮಾಡಲು ಪ್ರಯತ್ನಿಸುತ್ತಿದೆ .

Read more Photos on
click me!

Recommended Stories