'ರಾಮಾಯಣ' ಚಿತ್ರದಲ್ಲಿ ಮೂಗು ಕತ್ತರಿಸಿಕೊಳ್ಳೋ 'ಶೂರ್ಪನಖಿ' ಪಾತ್ರಕ್ಕೆ ಆಯ್ಕೆಯಾದ ಬಾಲಿವುಡ್ ಬ್ಯೂಟಿ!

Published : Feb 11, 2024, 11:56 AM IST

ಬಾಲಿವುಡ್ ಜಗತ್ತಿನಿಂದ ರಾಮಾಯಣ ಸಿನಿಮಾದ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಅಪ್‌ಡೇಟ್‌ ಸಿಕ್ಕಿದೆ. ಇತ್ತೀಚಿಗಷ್ಟೇ ರಾವಣ ಪಾತ್ರವನ್ನು ಯಶ್ ಮಾಡ್ತಾರೆ ಅನ್ನೋ ವಿಚಾರ ಬಹಿರಂಗವಾಗಿತ್ತು. ಸದ್ಯ ರಾವಣನ ತಂಗಿ ಶೂರ್ಪನಖಿ ಪಾತ್ರವನ್ನು ಮಾಡಲು ನಟಿಯ ಆಯ್ಕೆಯಾಗಿದೆ. ಯಾರು ಆ ನಟಿ?

PREV
18
'ರಾಮಾಯಣ' ಚಿತ್ರದಲ್ಲಿ ಮೂಗು ಕತ್ತರಿಸಿಕೊಳ್ಳೋ 'ಶೂರ್ಪನಖಿ' ಪಾತ್ರಕ್ಕೆ ಆಯ್ಕೆಯಾದ ಬಾಲಿವುಡ್ ಬ್ಯೂಟಿ!

ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ರಾಮಾಯಣ ಕಥೆ ಆಧರಿಸಿ ಮಾಡುತ್ತಿರುವ 'ರಾಮಾಯಣ' ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ. ಬಿಗ್‌ಬಜೆಟ್‌ನ ಈ ಸಿನಿಮಾದಲ್ಲಿ ಹಲವಾರು ಹೆಸರಾಂತ ಸ್ಟಾರ್‌ ನಟ-ನಟಿಯರು ಅಭಿನಯಿಸುತ್ತಿದ್ದಾರೆ. 
 

28

ಮುಖ್ಯ ಪಾತ್ರಗಳಾದ ರಾಮ ಹಾಗೂ ರಾವಣ ಪಾತ್ರದಲ್ಲಿ ರಣಬೀರ್‌ ಕಪೂರ್ ಮತ್ತು ಯಶ್‌ ಅಭಿನಯಿಸುವುದು ಬಹುತೇಕ ಪಕ್ಕಾ ಆಗಿದೆ ಎನ್ನಲಾಗ್ತಿದೆ.

38

ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅಥವಾ ಜಾನ್ವಿ ಕಪೂರ್ ನಟಿಸ್ತಾರೆ ಎನ್ನಲಾಗ್ತಿದೆ. ಈಗ ಮತ್ತೊಂದು ಮುಖ್ಯ ಪಾತ್ರಕ್ಕೆ ಬಾಲಿವುಡ್ ನಟಿಯ ಆಯ್ಕೆಯಾಗಿದೆ

48

ರಾಮಾಯಣದಲ್ಲಿ ಮುಖ್ಯ ಪಾತ್ರಗಳಲ್ಲೊಂದು ಶೂರ್ಪನಖಿ. ಯಶ್ ರಾವಣನಾಗಿ ನಟಿಸುತ್ತಿರುವ ಕಾರಣ ಯಶ್ ತಂಗಿ ಶೂರ್ಪನಖಿಯ ಪಾತ್ರ ಯಾರು ಮಾಡ್ತಾರೆ ಅನ್ನೋದು ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯ ಈ ಪಾತ್ರ ರಾಕುಲ್ ಪ್ರೀತ್‌ ಸಿಂಗ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ರಕುಲ್ ಲುಕ್‌ ಟೆಸ್ಟ್ ಸಹ ನಡೆದಿದೆ ಎನ್ನಲಾಗ್ತಿದೆ. 

58

'ರಾಕುಲ್ ಮತ್ತು ನಿತೇಶ್ ತಿವಾರಿ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಶೂರ್ಪನಖ ರಾಮಾಯಣದ ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ, ಏಕೆಂದರೆ ಭಗವಾನ್ ರಾಮ ಮತ್ತು ರಾವಣನ ಪೈಪೋಟಿಗೆ ಶೂರ್ಪನಖಾ ಕಾರಣಳಾದಳು. ಹೀಗಾಗಿ ಸೂಕ್ತವಾದ ನಟಿಯನ್ನು ಆಯ್ಕೆ ಮಾಡಲಾಗುತ್ತದೆ' ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ

68

ಚಿತ್ರದಲ್ಲಿ ಹನುಮಾನ್ ಪಾತ್ರವನ್ನು ನಿರ್ವಹಿಸಲು ಸನ್ನಿ ಡಿಯೋಲ್ ಲಾಕ್ ಆಗಿದ್ದಾರೆ ಎಂದು ಕಳೆದ ತಿಂಗಳು ವರದಿಯಾಗಿತ್ತು. ಸನ್ನಿ ಡಿಯೋಲ್ ಈ ಪಾತ್ರವನ್ನು ಮಾಡಲು ತುಂಬಾ ಉತ್ಸುಕರಾಗಿದ್ದಾರೆ. ತಮ್ಮನ್ನು ತಾವು ಅದೃಷ್ಟಶಾಲಿ ಎಂದು ಭಾವಿಸಿದ್ದಾರೆ ಎಂದು ಹೇಳಲಾಗ್ತಿದೆ.

78

ವಿಭೀಷಣನ ಪಾತ್ರ ಮಾಡಲು ವಿಜಯ್ ಸೇತುಪತಿ ಅವರನ್ನು ಸಂಪರ್ಕಿಸಲಾಗಿದೆ. ಆದರೆ, ಸದ್ಯಕ್ಕೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ವರದಿಯ ಪ್ರಕಾರ, ಮೇ 2024ರಲ್ಲಿ ರಾಮಾಯಣ: ಭಾಗ ಒಂದರ ಚಿತ್ರೀಕರಣ ಆರಂಭವಾಗುತ್ತದೆ. ಮುಂದಿನ ವರ್ಷ ದೀಪಾವಳಿಗೆ ಪಾರ್ಟ್‌-1 ರಿಲೀಸ್ ಆಗುವ ನಿರೀಕ್ಷೆಯಿದೆ. 

88

ಈ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸುತ್ತಿದ್ದರೆ, ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ, ಆಲಿಯಾ ಭಟ್ ಸೀತೆಯ ಪಾತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದರು ಆದರೆ ದಿನಾಂಕಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಅವರು ಈ ವರ್ಷದ ಆರಂಭದಲ್ಲಿ ಹಿಂದೆ ಸರಿದಿದ್ದರು.

Read more Photos on
click me!

Recommended Stories