ಬುರ್ಖಾದೊಳಗೆ ಬಿಕಿನಿ ಧರಿಸಿ ಮೈ ಹೂಂ ನಾ ಚಿತ್ರದ ಆಡಿಶನ್‌ಗೆ ಬಂದಿದ್ದ ರಾಖಿ ಸಾವಂತ್!

First Published | Mar 10, 2024, 1:46 PM IST

ರಾಖಿ ಸಾವಂತ್ ಮೊದಲ ಚಿತ್ರ ಮೈ ಹೂಂ ನಾ. ಇದು ಸೂಪರ್ ಡೂಪರ್ ಹಿಟ್ ಆಯ್ತು. ಈ ಚಿತ್ರಕ್ಕಾಗಿ ರಾಖಿ ಆಡಿಶನ್‌ಗೆ ಬುರ್ಖಾ ಧರಿಸಿ ಒಳಗೆ ಬಿಕಿನಿಯಲ್ಲಿ ಬಂದಿದ್ದಳಂತೆ. 

ರಾಖಿ ಸಾವಂತ್ ಫಸ್ಟ್ ಟೈಂ ಕ್ಯಾಮೆರಾ ಎದುರಿಸಿದ ಸಮಯದ ಆಸಕ್ತಿಕರ ಸಂಗತಿಯೊಂದನ್ನು ಚಿತ್ರದ ಸಹ ನಿರ್ದೇಶಕಿ ಫರಾ ಖಾನ್ ಬಿಚ್ಚಿಟ್ಟಿದ್ದಾರೆ. ಮೈ ಹೂಂ ನಾ ರಾಖಿಗೆ ಚೊಚ್ಚಲ ಚಿತ್ರ.  

ಶಾರುಖ್ ಖಾನ್-ಸುಶ್ಮಿತಾ ಸೇನ್ ಅಭಿನಯದ ಚಿತ್ರವು ರಾಖಿ ಸಾವಂತ್ ಅವರ ಚೊಚ್ಚಲ ಚಿತ್ರವಾಗಿದ್ದು, ಚಿತ್ರದಲ್ಲಿದ್ದ ರಾಖಿಗೂ ಈಗಿನ ರಾಖಿಗೂ ಅಜಗಜಾಂತರ. 
 

Tap to resize

ಡಾರ್ಜಿಲಿಂಗ್‌ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾದ ಎರಡು ದಿನಗಳ ನಂತರ ರಾಖಿ ಸಾವಂತ್ ಮೈ ಹೂಂ ನಾ ಶೂಟಿಂಗ್‌ಗೆ ಸೇರಿಕೊಂಡರು ಎಂದು ಫರಾ ಖಾನ್ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದರು. 

ಬೇರೆ ನಟಿ ಪಾತ್ರ ರಾಖಿ ಪಾಲಿಗೆ ಬಂದಿದ್ದು ಹೇಗೆ?
ಚಿತ್ರದಲ್ಲಿ ರಾಖಿ ಸಾವಂತ್ ನಟಿಸಿದ ಪಾತ್ರಕ್ಕಾಗಿ ಮೊದಲು ಬೇರೆ ನಟಿಯ ಆಯ್ಕೆಯಾಗಿತ್ತಂತೆ. ಆದರೆ, ಆಕೆಯ ಅಮ್ಮ ಕಂಡಿಶನ್ ಮೇಲೆ ಕಂಡಿಶನ್ ಹಾಕುತ್ತಾ ಹೋದರಂತೆ. ಶಾರೂಖ್ ತಂಗಿರುವ ಹೋಟೆಲ್‌ನಲ್ಲೇ ಮಗಳನ್ನು ಉಳಿಸಬೇಕು ಎಂಬಲ್ಲಿಂದ ಹಿಡಿದು, ಬಹಳಷ್ಟು ಬೇಡಿಕೆಗಳನ್ನು ಮುಂದಿಟ್ಟರಂತೆ.

ಇದನ್ನು ತಡೆದುಕೊಳ್ಳಲು ಅಸಾಧ್ಯ ಎನಿಸಿದ ಕೂಡಲೇ ಫರಾ, ಈ ಪಾತ್ರಕ್ಕಾಗಿ ಬೇರೆ ಯಾವ ನಟಿಯನ್ನು ಆಡಿಷನ್ ಮಾಡಲಾಗಿದೆ ಎಂದು ಕೇಳಿದರು. ಆಗ ಬುರ್ಖಾ ಧರಿಸಿ ಬಂದಿದ್ದ ರಾಖಿಯನ್ನು ಕರೆಸುವಂತೆ ಹೇಳಿದರಂತೆ. 

ಬುರ್ಖಾದೊಳಗೆ ಬಿಕಿನಿ
ಆಡಿಶನ್‌ಗೆ ಬಂದಾಗ ರಾಶಿ ಸಾವಂತ್ ಬುರ್ಖಾ ಧರಿಸಿದ್ದರಂತೆ. ‘ಹಾಟ್ ಹುಡುಗಿಯ ಪಾತ್ರ’ ಆಗಿದ್ದರಿಂದ ಅಸಿಸ್ಟೆಂಟ್ ಜಾಗರೂಕರಾಗಿದ್ದರು. ಆದರೆ, ರಾಖಿ ತನ್ನ ವಿಶಿಷ್ಟ ಶೈಲಿಯಲ್ಲಿ ಕ್ಯಾಮರಾವನ್ನು ರೋಲ್ ಮಾಡಲು ಹೇಳಿದಳು.
 

ನಂತರ ಅವಳು ಬುರ್ಕಾವನ್ನು ತೆಗೆದಳು ಮತ್ತು ಒಳಗೆ ಬಿಕಿನಿಯಲ್ಲಿದ್ದ ಆಕೆಯನ್ನು ನೋಡುತ್ತಲೇ  ಇಡೀ ಕ್ಯಾಮೆರಾ ನಡುಗುತ್ತಿತ್ತು ಎಂದು ಫರಾ ವಿವರಿಸಿದ್ದಾರೆ. 

ಅವಳಿಗೆ ಕಿತ್ತಳೆ ಬಣ್ಣದ ಕೂದಲು ಇದ್ದುದರಿಂದ ನಾವು ಅವಳನ್ನು ತಕ್ಷಣ ಆಯ್ಕೆ ಮಾಡಲಿಲ್ಲ. ನಂತರ ಆಕೆ ಡಾರ್ಜಿಲಿಂಗ್‌ಗೆ ಬಂದಾಗ ಅವಳನ್ನು ಪೂರ್ತಿ ಮುಚ್ಚಿಡುವುದು ಹೇಗೆ ಎಂಬುದೇ ದೊಡ್ಡ ತಲೆನೋವಾಗಿತ್ತು.

ನಾವು ಚಳಿ ಇದೆ ಸ್ವೆಟರ್ ಹಾಕ್ಕೋ ಎಂದರೆ ಆಕೆಗೆ ಮೈ ತೋರಿಸಬೇಕಿತ್ತು. ಕಡೆಗೆ, ನೀನು ಬಟ್ಟೆ ಹಾಕಿದಾಗಲೂ ಸುಂದರವಾಗಿ ಕಾಣುತ್ತಿ ಎಂದೆಲ್ಲ ಪುಸಲಾಯಿಸಿ ಮೈ ಮುಚ್ಚಿಸಿದೆವು ಎಂದು ಆ ದಿನವನ್ನು ನೆನೆಸಿಕೊಂಡಿದ್ದಾರೆ ಫರಾ. 
 

ರಾಖಿಗೆ ಹೆಚ್ಚು ಬೇಡಿಕೆ ಇರಲಿಲ್ಲ
ರಾಖಿ ಅವರೊಂದಿಗೆ ಕೆಲಸ ಮಾಡಲು ಸಂತೋಷವಾಗಿದೆ ಎಂದಿರುವ ಫರಾ 'ಅವಳು ಕೆಲಸ ಮಾಡಲು ಸಂತೋಷವಾಯಿತು. ಒಂದು ಹಾಡಿನಲ್ಲಿ ಶಾರುಖ್ ಪಕ್ಕದಲ್ಲಿ ಅಥವಾ ಅವನ ಹಿಂದೆ ನಿಲ್ಲುವಂತೆ ಮಾಡಬೇಕೆಂಬುದು ಆಕೆಯ ಏಕೈಕ ವಿನಂತಿಯಾಗಿತ್ತು. ಅವಳು ಅದರಿಂದ ಸಂತೋಷಪಟ್ಟಳು' ಎಂದು ತಿಳಿಸಿದ್ದಾರೆ. 

Latest Videos

click me!