ಜತೆಗೆ, ತಾವು ಸಿನಿಮಾ ನಟನೆ ವಿಷಯದಲ್ಲಿ ಯಾವುದೇ ಭಾಷೆಯ ಬೌಂಡರಿ ಇಟ್ಟುಕೊಂಡಿಲ್ಲ. ನನ್ನ ಪಾತ್ರ, ಟೀಮ್, ಸಿನಿಮಾ ಕಥೆ ಎಲ್ಲವೂ ಓಕೆ ಅನ್ನಿಸಿದರೆ ನಾನು ಭಾಷೆಯ ಹಂಗಿಗೆ ಒಳಗಾಗಿ ಸಿನಿಮಾ ಒಪ್ಪಿಕೊಳ್ಳುವುದಿಲ್ಲ. ಕಥೆ ನನಗೆ ಒಪ್ಪಿಗೆಯಾದರೆ ಕನ್ನಡ, ತಮಿಳು, ತೆಲುಗು, ಹಿಂದಿ ಅಥವಾ ಮಲಯಾಳಂ ಹೀಗೆ ಭಾಷೆಗಳ ಬಗ್ಗೆ ನಾನು ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ, ತಲೆ ಕೆಡಿಸಿಕೊಳ್ಳುವುದೂ ಇಲ್ಲ' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.