ಸಿನಿಮಾಕ್ಕಾಗಿ ಸರ್ಕಾರಿ ಕೆಲಸವನ್ನೇ ಬಿಟ್ಟ ಸೆಲೆಬ್ರೆಟಿಗಳಿವರು!

First Published | Apr 27, 2024, 6:30 PM IST

ಸಿನಿಮಾದಲ್ಲಿ ನಟಿಸುವ ಆಸೆಯಿಂದ ಮನೆ ಬಿಟ್ಟು ಬಂದ ಕಲಾವಿದರ ಬಗ್ಗೆ ಕೇಳಿದ್ದೇವೆ, ಅದೇರೀತಿ ಸಿನಿಮಾಕ್ಕಾಗಿ ಶಾಲೆ ಕಾಲೇಜಿಗೆ ಗುಡ್‌ಬೈ ಹೇಳಿದ ನಟನಟಿಯರೂ ಇದ್ದಾರೆ. ಆದರೆ ಸಿನಿಮಾಕ್ಕಾಗಿ ಸರ್ಕಾರಿ ನೌಕರಿಯನ್ನೇ ತ್ಯಜಿಸಿದ ನಟರು ಸಹ ಇದ್ದಾರೆ ಗೊತ್ತಾ? ಸರ್ಕಾರಿ ಕೆಲಸ ಬಿಟ್ಟು ನಟನೆಯ ಕಡೆ ಮುಖಮಾಡಿದ ಸೆಲೆಬ್ರೆಟಿಗಳು ಇವರುಗಳು.
 

ರಜನಿಕಾಂತ್:
ಸೂಪರ್‌ಸ್ಟಾರ್ ರಜನಿಕಾಂತ್ ಬೆಳ್ಳಿತೆರೆಯಲ್ಲಿ ಹೆಸರು ಮಾಡುವ  ಮೊದಲು ಬೆಂಗಳೂರು ಸಾರಿಗೆ ಸೇವೆಯಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದರು.

ರಾಜಕುಮಾರ್:
ಬಾಲಿವುಡ್‌ನ ಲೆಜೆಂಡ್‌ ನಟ ರಾಜ್‌ಕುಮಾರ್‌ ಅವರು ಚಿತ್ರರಂಗಕ್ಕೆ ಬರುವ ಮೊದಲು ಅವರು ಮುಂಬೈ ಪೊಲೀಸ್‌ನಲ್ಲಿ ಎಸ್‌ಐ ಆಗಿದ್ದರು.

Tap to resize

ಶಿವಾಜಿ ಸತ್ಯಂ:
ಕಿರುತೆರೆಯ ಧಾರಾವಾಹಿ CID ಖ್ಯಾತಿಯ ನಟ ಶಿವಾಜಿ ಸತ್ಯಂ ಹಿಂದೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು.

ದೇವಾನಂದ್:
ಬಾಲಿವುಡ್‌ನ ಸ್ಟಾರ್‌ ದೇವಾನಂದ್ ಸಿನಿಮಾದಲ್ಲಿ ಲೈಮ್ ಲೈಟ್ ಪಡೆಯುವ ಮೊದಲು ಸೆನ್ಸಾರ್ ಮಂಡಳಿಯಲ್ಲಿ ಗುಮಾಸ್ತರಾಗಿದ್ದರು.
 

ಅಮೋಲ್ ಪಾಲೇಕರ್:
ನಟ ಅಮೋಲ್ ಪಾಲೇಕರ್ ಸಹ  ಮೊದಲು ಸರ್ಕಾರಿ ಕೆಲಸದಲ್ಲಿದ್ದರು . ಅವರು  ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯಾಗಿದ್ದರು.

ಅಮರೀಶ್ ಪುರಿ:
ಬಾಲಿವುಡ್‌ ನಟ ಅಮರೀಶ್ ಪುರಿ ಬಾಲಿವುಡ್‌ಗೆ ಸೇರುವ ಮೊದಲು ಭಾರತೀಯ ರಾಜ್ಯ ವಿಮಾ ನಿಗಮದ ಉದ್ಯೋಗಿಯಾಗಿದ್ದರು.

ದಿಲೀಪ್ ಕುಮಾರ್:
ಮೊಘಲ್ ಇ ಆಜಂ ಖ್ಯಾತಿಯ ದಿಲೀಪ್ ಕುಮಾರ್ ಪುಣೆಯ ಸಿನಿಮಾ ಸೇರುವ ಮೊದಲು ಮಿಲಿಟರಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರು.

Latest Videos

click me!