ಸಣ್ಣ ವಯಸ್ಸಲ್ಲೇ ಸ್ಮೋಕರ್ ಆದ ಕಂಗನಾ, ಸ್ಮೋಕಿಂಗ್‌ ಇಷ್ಷ ಅಂತಾರೆ ವಿದ್ಯಾ ಬಾಲನ್!

Published : Apr 27, 2024, 05:51 PM IST

ಸಾಮಾನ್ಯವಾಗಿ  ತಾರೆಯರು ಧೂಮಪಾನ ಅಥವಾ ಮದ್ಯಪಾನದಂತ ಚಟಗಳಲ್ಲಿ ತೊಡಗಿಸಿಕೊಳ್ಳುವ ದೃಶ್ಯಗಳನ್ನು ಸಿನಿಮಾದಲ್ಲಿ ನೋಡುತ್ತೇವೆ, ಆದರೆ ಕೇವಲ ರೀಲ್‌ ಲೈಫ್‌ನಲ್ಲಿ ಮಾತ್ರವಲ್ಲದೆ ರಿಯಲ್‌ ಲೈಫಲ್ಲೂ ಕೆಲವು ನಟಿಯರು  ಧೂಮಪಾನದ ಚಟವನ್ನು ಹೊಂದಿದ್ದಾರೆ. ನಿಜ ಜೀವನದಲ್ಲಿ ಧೂಮಪಾನದ ಚಟಕ್ಕೆ ಬಿದ್ದ ಬಾಲಿವುಡ್ ನಟಿಯರು ಇವರು.

PREV
16
ಸಣ್ಣ ವಯಸ್ಸಲ್ಲೇ ಸ್ಮೋಕರ್ ಆದ ಕಂಗನಾ, ಸ್ಮೋಕಿಂಗ್‌ ಇಷ್ಷ ಅಂತಾರೆ ವಿದ್ಯಾ ಬಾಲನ್!

ವಿದ್ಯಾ ಬಾಲನ್:
ವಿದ್ಯಾ ಬಾಲನ್‌ ಮುಂಬರುವ ಚಿತ್ರ ದೋ ಔರ್ ದೋ ಪ್ಯಾರ್ ಪ್ರಚಾರದ ಸಂದರ್ಭದಲ್ಲಿ ತಮ್ಮ ಧೂಮಪಾನ ಚಟದ ಬಗ್ಗೆ ಬಹಿರಂಗಪಡಿಸಿದರು. ಅದರ ಬಗ್ಗೆ ಮಾತನಾಡಿದ ವಿದ್ಯಾ ಬಾಲನ್, 'ಡರ್ಟಿ ಪಿಕ್ಚರ್' ನಂತರ ತಾನು ಧೂಮಪಾನದ ಚಟಕ್ಕೆ ಬಿದ್ದೆ. ಚಿತ್ರದ ನಂತರ ದಿನಕ್ಕೆ 2-3 ಸಿಗರೇಟ್ ಸೇದುತ್ತಿದ್ದೆ ಎಂದಿದ್ದಾರೆ.

26

ಕಂಗನಾ ರಣಾವತ್:
ಬಾಲಿವುಡ್ ನ ಹೆಸರಾಂತ ನಟಿ ಕಂಗನ್ ಹಲವು ವರ್ಷಗಳಿಂದ ಧೂಮಪಾನದ ಈ ಕೆಟ್ಟ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ನಿಜ ಜೀವನದ ಚೈನ್ ಸ್ಮೋಕರ್ (Chain Smoker). ಇದರಿಂದ ಒತ್ತಡದಿಂದ ಮುಕ್ತಿ  ಹೊಂದುತ್ತೇನೆ ಎಂದು ಕಂಗನಾ ಹೇಳಿದ್ದಾರೆ.

36

ಸುಶ್ಮಿತಾ ಸೇನ್:
ಸುಶ್ಮಿತಾ ಸೇನ್‌ ಸಾರ್ವಜನಿಕವಾಗಿ ಹಲವಾರು ಬಾರಿ ಸಿಗೇರೇಟ್‌ ಸೇದುವುದನ್ನು ಗುರುತಿಸಲಾಗಿದೆ. ತಾನು ಈ ಜೀವನಶೈಲಿಯನ್ನು ಆರಿಸಿಕೊಂಡಿದ್ದೇನೆ ಮತ್ತು ತನಗೆ ಬೇಕಾದಾಗ ತ್ಯಜಿಸುತ್ತೇನೆ ಎಂದು ಅವರು ಹೇಳಿದ್ದರು.

46
Proper rest

ಅನನ್ಯ ಪಾಂಡೆ:
ಕಸಿನ್‌ ಮೆಹಂದಿ ಸಮಾರಂಭದಲ್ಲಿ ಧೂಮಪಾನ ಮಾಡುತ್ತಿದ್ದ ನಟಿ ಅನನ್ಯಾ ಪಾಂಡೆ ಫೋಟೋ ವೈರಲ್ ಆಗಿತ್ತು, ಆದರೆ ನಂತರ ಫೋಟೋವನ್ನು ಅಳಿಸಲಾಗಿದೆ.

56

ರಾಣಿ ಮುಖರ್ಜಿ:
ರಾಣಿ ಮುಖರ್ಜಿ ಅವರು ಭಯಂಕರವಾಗಿ ಧೂಮಪಾನ ಚಟ ಹೊಂದಿದ್ದರು. ಸಿಗರೇಟ್ ಇಲ್ಲದೆ ಅವರ ದಿನ ಪ್ರಾರಂಭವಾಗುವುದಿಲ್ಲ. ಧೂಮಪಾನವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ಅವರು ಸುಮ್ ಸುಮ್ಮನೆ ನಂಬಿದ್ದರು.

66

ಪ್ರಿಯಾಂಕಾ ಚೋಪ್ರಾ:
ಪ್ರಿಯಾಂಕಾ ಚೋಪ್ರಾ ಕೂಡ ಧೂಮಪಾನದ ಚಟ ಹೊಂದಿದ್ದಾರೆ. ಅವರು ತನ್ನ ಪತಿ ನಿಕ್ ಜೊನಾಸ್‌ ಜೊತೆ ಇದ್ದ ಫೋಟೋದಲ್ಲಿ ಧೂಮಪಾನ ಮಾಡುತ್ತಿದ್ದರು.
 

Read more Photos on
click me!

Recommended Stories