ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟರಲ್ಲಿ ರಜನಿಕಾಂತ್ ಅಗ್ರಸ್ಥಾನದಲ್ಲಿದ್ದಾರೆ. ಅಭಿಮಾನಿಗಳ ತಲೈವಾಗೆ 72 ವರ್ಷ ವಯಸ್ಸಾಗಿದ್ದರೂ, ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟರಲ್ಲಿ ರಜನೀಕಾಂತ್ ಸಹ ಇದ್ದಾರೆ. ನಿಮಿಷಕ್ಕೆ 1 ಕೋಟಿ ರೂ.ಗಳನ್ನು ಚಾರ್ಜ್ ಮಾಡುವ ಭಾರತೀಯ ನಟ ಎಂದು ಗುರುತಿಸಿಕೊಂಡಿದ್ದಾರೆ
ತಲೈವಾ ತಮ್ಮ ಮುಂದಿನ ಚಿತ್ರ 'ಲಾಲ್ ಸಲಾಮ್'ನಲ್ಲಿ ಅತಿಥಿ ಪಾತ್ರಕ್ಕಾಗಿ, 40 ಕೋಟಿ ರೂಪಾಯಿಗಳನ್ನು ವಿಧಿಸುತ್ತಿದ್ದಾರೆ ಎಂದು ವರದಿಯಾಗಿದೆ. ರಜನೀಕಾಂತ್ ಈ ಚಿತ್ರದಲ್ಲಿ ಕೇವಲ 30-40 ನಿಮಿಷಗಳ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.
ಅಂದರೆ ಅವರ ಶುಲ್ಕವು ನಿಮಿಷಕ್ಕೆ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಬರುತ್ತದೆ. ಇದು ಭಾರತೀಯ ನಟರು ತೆಗೆದುಕೊಂಡ ಅತ್ಯಧಿಕ ಸಂಭಾವನೆಗಳಲ್ಲಿ ಒಂದಾಗಿದೆ.
ರಜನೀಕಾತ್ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ರಜನಿಕಾಂತ್ ತಂದೆ ಪೊಲೀಸ್ ಪೇದೆಯಾಗಿದ್ದರು. ಚಿಕ್ಕವಯಸ್ಸಿನಲ್ಲಿ ಬೆಂಗಳೂರಿಗೆ ಬಂದಿದ್ದರು. ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ರಜನಿಕಾಂತ್ ಬೆಂಗಳೂರು ಸಾರಿಗೆ ಸೇವೆಯಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಇದಕ್ಕೂ ಮೊದಲು ಕೂಲಿ ಸೇರಿದಂತೆ ಹಲವಾರು ಸಣ್ಣ ಕೆಲಸಗಳನ್ನು ಮಾಡಿದರು. ಒಂದು ದಿನ ಕೆ.ಬಾಲಚಂದರ್ ರಜನೀಕಾಂತ್‌ರನ್ನು ನೋಡಿದರು. ಈಗಾಗಲೇ ಇಂಡಸ್ಟ್ರಿಯಲ್ಲಿ ಶಿವಾಜಿ ಗಣೇಶನ್ ಫೇಮಸ್ ಆಗಿದ್ದ ಕಾರಣ ಹೆಸರಿನಿಂದ ಆಗುವ ಗೊಂದಲವನ್ನು ತಪ್ಪಿಸಲು ಶಿವಾಜಿರಾವ್‌ಗೆ ರಜನೀಕಾಂತ್ ಎಂದು ನಾಮಕರಣ ಮಾಡಿದರು.
ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ರಜನಿಕಾಂತ್ ಅವರ ಮೈಬಣ್ಣದಿಂದ ಕಾರಣ ಸಿನಿ ಇಂಡಸ್ಟ್ರಿಯಲ್ಲಿ ಟೀಕೆಗೆ ಒಳಗಾದರು. ಅನೇಕ ಚಲನಚಿತ್ರ ನಿರ್ಮಾಪಕರು ರಜನೀಕಾಂತ್‌ರನ್ನು ನಾಯಕನಾಗಿ ತೆಗೆದುಕೊಳ್ಳಲು ನಿರಾಕರಿಸಿದರು.
1975ರಲ್ಲಿ ರಜನೀಕಾಂತ್ ಅಪೂರ್ವ ರಾಗಂಗಲ್ ಚಿತ್ರದೊಂದಿಗೆ ಸಿನಿಮಾ ಜೀವನ ಆರಂಭಿಸಿದರು. ಈ ಚಿತ್ರ ಪ್ರೇಕ್ಷಕರ ಗಮನವನ್ನು ಸೆಳೆಯಿತು.
ಆ ನಂತರ ಮುಲ್ಲುಂ ಮಾಲರುಮ್, ಬಾಷಾ, ದಳಪತಿ, ಮುತ್ತು, ಶಿವಾಜಿ, ಬಿಲ್ಲಾ, ಅಣ್ಣಾಮಲೈ, ಪಡಿಯಪ್ಪ, ಎಂದಿರನ್, 2.0 ಮೊದಲಾದ ಸೂಪರ್‌ಹಿಟ್ ಸಿನಿಮಾಗಳಲ್ಲಿ ರಜನೀಕಾಂತ್ ನಟಿಸಿದ್ದಾರೆ ತಮ್ಮ ನಟನೆಗಾಗಿ ಹಲವಾರು ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ.
ಇತ್ತೀಚಿಗೆ ರಜನಿಕಾಂತ್ ಅಭಿನಯಿಸಿದ 'ಜೈಲರ್' ಬರೋಬ್ಬರಿ 650 ಕೋಟಿ ಗಳಿಸಿ ತಲೈವಾ ಅಭಿನಯದ ಸೂಪರ್‌ಹಿಟ್ ಸಿನಿಮಾವೆಂದು ಗುರುತಿಸಿಕೊಂಡಿದೆ. 'ಲಾಲ್ ಸಲಾಮ್' ಮತ್ತು 'ತಲೈವರ್' ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ರಜನೀಕಾಂತ್ ಬಿಝಿಯಾಗಿದ್ದಾರೆ.