ನಿಮ್ಮ ಗೆಲುವಿಗೆ ಪ್ರೇರಣೆ ಬೇಕಿದ್ದರೆ ಈ 5 ವೆಬ್ ಸರಣಿ ಒಟಿಟಿಯಲ್ಲಿ ಮಿಸ್ ಮಾಡದೇ ನೋಡಿ..

Published : Feb 08, 2024, 01:05 PM IST

'ಟ್ವೆಲ್ತ್ ಫೇಲ್' ಚಿತ್ರ ದೇಶಾದ್ಯಂತ ಸಾವಿರಾರು ಜನರನ್ನು ಪ್ರೇರೇಪಿಸಿದೆ. ಹೀಗೆ ಜೀವನದಲ್ಲಿ ಏನಾದರೂ ಸಾಧಿಸಲು ಪ್ರೇರಣೆಯನ್ನು ಜೀವಂತವಾಗಿರಿಸಲು ಈ ವಾರಾಂತ್ಯದಲ್ಲಿ ನೀವು ವೀಕ್ಷಿಸಬಹುದಾದ 5 ವೆಬ್ ಸರಣಿಗಳು ಇಲ್ಲಿವೆ.

PREV
16
ನಿಮ್ಮ ಗೆಲುವಿಗೆ ಪ್ರೇರಣೆ ಬೇಕಿದ್ದರೆ ಈ 5 ವೆಬ್ ಸರಣಿ ಒಟಿಟಿಯಲ್ಲಿ ಮಿಸ್ ಮಾಡದೇ ನೋಡಿ..

ಜೀವನವನ್ನು ಮುಂದುವರಿಸಲು ನಮಗೆಲ್ಲರಿಗೂ ನಮ್ಮ ಆಗಾಗ ಸ್ಫೂರ್ತಿ ಮತ್ತು ಪ್ರೇರಣೆ ಬೇಕು. ಇತ್ತೀಚೆಗಷ್ಟೇ ಬಿಡುಗಡೆಯಾದ 'ಟ್ವೆಲ್ತ್ ಫೇಲ್' ಚಿತ್ರವು ದೇಶಾದ್ಯಂತ ಯುವಕರು ಮತ್ತು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪ್ರಮುಖ ಸ್ಫೂರ್ತಿಯಾಗಿದೆ. ನೀವು ಇಂಥ ಪ್ರೇರಣೆ ನೀಡುವಂಥ ವೆಬ್‌ಸರಣಿಗಳಿಗಾಗಿ ಹುಡುಕುತ್ತಿದ್ದರೆ, ನೀವು ನೋಡಬೇಕಾದ 5 ವೆಬ್ ಸಿರೀಸ್ ಆಯ್ಕೆಗಳು ಇಲ್ಲಿವೆ.

26
ಸ್ಲಮ್ ಗಾಲ್ಫ್

ಸ್ಲಮ್ ಗಾಲ್ಫ್
ಸ್ಲಮ್ ಗಾಲ್ಫ್ ಮುಂಬೈನ ಕೊಳೆಗೇರಿಯಲ್ಲಿ ಜನಿಸಿದ ಹುಡುಗನೊಬ್ಬನ ಹೋರಾಟದ ಕಥೆಯಾಗಿದ್ದು, ಅವನು ಗಾಲ್ಫ್ ತಾರೆಯಾಗಬೇಕೆಂದು ಬಯಸುತ್ತಾನೆ. ವೆಬ್ ಸರಣಿಯಲ್ಲಿ ಶರದ್ ಕೇಲ್ಕರ್, ಮಯೂರ್ ಮೋರ್ ಮತ್ತು ಅರ್ಜುನ್ ಔಜ್ಲಾ ನಟಿಸಿದ್ದಾರೆ. ನೀವು ಅಮೆಜಾನ್ ಮಿನಿ ಟಿವಿಯಲ್ಲಿ ಈ ಸ್ಪೂರ್ತಿದಾಯಕ ವೆಬ್ ಸರಣಿಯನ್ನು ವೀಕ್ಷಿಸಬಹುದು.
 

36
ಕೋಟಾ ಫ್ಯಾಕ್ಟರಿ

ಕೋಟಾ ಫ್ಯಾಕ್ಟರಿ
ಸೌರಭ್ ಖನ್ನಾ ನಿರ್ದೇಶಿಸಿದ, ಕೋಟಾ ಫ್ಯಾಕ್ಟರಿ ಭಾರತದಲ್ಲಿ ಐಐಟಿ-ಜೆಇಇ ಆಕಾಂಕ್ಷಿಯ ಜೀವನವನ್ನು ಚಿತ್ರಿಸುತ್ತದೆ. ಬ್ಲ್ಯಾಕ್ ಆ್ಯಂಡ್ ವೈಟ್ ಸ್ವರೂಪದಲ್ಲಿ ತಯಾರಿಸಲಾದ ಈ ವೆಬ್ ಸರಣಿಯು ಐಐಟಿ ಆಕಾಂಕ್ಷಿಗಳ ಕೋಚಿಂಗ್ ಸೆಂಟರ್ ಎಂದು ಕರೆಯಲ್ಪಡುವ ರಾಜಸ್ಥಾನದ ಕೋಟಾ ನಗರದಲ್ಲಿ ಐಐಟಿ-ಜೆಇಇ ಆಕಾಂಕ್ಷಿಯೊಬ್ಬರು ಎದುರಿಸುವ ಹೋರಾಟದ ಕುರಿತು ತಿಳಿಸುತ್ತದೆ. ನೀವು ಇದನ್ನು Netflix ಮತ್ತು YouTube ನಲ್ಲಿ ವೀಕ್ಷಿಸಬಹುದು.

 

46
ಪಂಚಾಯತ್

ಪಂಚಾಯತ್
ಪಂಚಾಯತ್ ಎಂಬುದು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಲಭ್ಯವಿರುವ ಬ್ಲಾಕ್‌ಬಸ್ಟರ್ ಹಿಟ್ ಸರಣಿಯಾಗಿದ್ದು, ಉತ್ತಮ ಉದ್ಯೋಗ ಆಯ್ಕೆಗಳ ಕೊರತೆಯಿಂದಾಗಿ ಉತ್ತರ ಪ್ರದೇಶದ ಫುಲೇರಾ ಎಂಬ ದೂರದ ಕಾಲ್ಪನಿಕ ಹಳ್ಳಿಯಲ್ಲಿ ಪಂಚಾಯತ್ ಕಾರ್ಯದರ್ಶಿಯಾಗಿ ಸೇರುವ ಎಂಜಿನಿಯರಿಂಗ್ ಪದವೀಧರರ ಜೀವನದ ಬಗ್ಗೆ ಕತೆ ಇದೆ. ಈ ಇಂಜಿನಿಯರಿಂಗ್ ಪದವೀಧರನ ಜೀವನ ಹೇಗೆ ಬದಲಾಯಿತು ಮತ್ತು ಹಳ್ಳಿಯ ಅವ್ಯವಸ್ಥೆಯನ್ನು ಅವನು ಹೇಗೆ ಎದುರಿಸುತ್ತಾನೆ ಎಂಬುದನ್ನು ತಿಳಿಯಲು ವೆಬ್ ಸರಣಿಯನ್ನು ವೀಕ್ಷಿಸಿ.

56
ಆ್ಯಸ್ಪಿರೆಂಟ್ಸ್

ಆ್ಯಸ್ಪಿರೆಂಟ್ಸ್
ಆ್ಯಸ್ಪಿರೆಂಟ್ಸ್ ಯುಪಿಎಸ್‌ಸಿ ಆಕಾಂಕ್ಷಿಗಳ ಪ್ರಯಾಣವನ್ನು ವಿವರಿಸುವ ಜನಪ್ರಿಯ ವೆಬ್ ಸರಣಿಯಾಗಿದೆ. ಇದು UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮೂವರು ಗೆಳೆಯರ ಕುರಿತಾದ ಕಥೆ. ಅವರ ಸ್ನೇಹ ಮತ್ತು ಮಹತ್ವಾಕಾಂಕ್ಷೆ ಇರುವವರಿಗೆ ಜೀವನವು ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ತಿಳಿಯಲು ಈ ಸರಣಿಯನ್ನು ವೀಕ್ಷಿಸಿ. ನೀವು ಇದನ್ನು Amazon Prime ವೀಡಿಯೊದಲ್ಲಿ ವೀಕ್ಷಿಸಬಹುದು.

66
ಪಿಚರ್ಸ್

ಪಿಚರ್ಸ್
ಪಿಚರ್ಸ್ ನಾಲ್ಕು ಸ್ನೇಹಿತರು ಮತ್ತು ತಮ್ಮ ವ್ಯಾಪಾರವನ್ನು ಪ್ರಾರಂಭಿಸಲು ತಮ್ಮ ದಿನದ ಕೆಲಸವನ್ನು ತೊರೆದ ಯುವ ಉದ್ಯಮಿಗಳ ಕಥೆಯಾಗಿದೆ. ಅವರ ಹೋರಾಟ ಮತ್ತು ಯುವ ಉದ್ಯಮಿಗಳಾಗಿ ಅವರ ಪ್ರಯಾಣವು ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ತಿಳಿಯಲು ವೆಬ್ ಸರಣಿಯನ್ನು ವೀಕ್ಷಿಸಿ. ನೀವು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಈ ವೆಬ್ ಸರಣಿಯನ್ನು ವೀಕ್ಷಿಸಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories