Sushant Singh Rajput case - ಮತ್ತೆ ಸಂಕಷ್ಟದಲ್ಲಿ ರಿಯಾ ಚಕ್ರವರ್ತಿ

Published : Jun 23, 2022, 05:21 PM IST

ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput)ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ (Riya Chakraborty) ಅವರ ಸಹೋದರ ಶೋಭಿಕ್ ಚಕ್ರವರ್ತಿ (Showik Chakraborty) ಮತ್ತು ಇತರರ ವಿರುದ್ಧ ಮುಂಬೈನ ವಿಶೇಷ ನ್ಯಾಯಾಲಯದ ಚಾರ್ಜ್ ಶೀಟ್ ಸಲ್ಲಿಸಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ವಿರುದ್ಧ ನ್ಯಾಯಾಲಯದಲ್ಲಿ ಹಲವು ಆರೋಪಗಳನ್ನು ಹೋರಿಸಿದೆ.  

PREV
16
Sushant Singh Rajput case - ಮತ್ತೆ ಸಂಕಷ್ಟದಲ್ಲಿ  ರಿಯಾ ಚಕ್ರವರ್ತಿ

ಡ್ರಗ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ವಿರುದ್ಧ  ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಅವರ ವಿರುದ್ಧ ಆರೋಪಗಳನ್ನು ಹೊರಿಸಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಸರ್ಪಾಂಡೆ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಆರೋಪಗಳನ್ನು ರಚಿಸಿದ್ದಾರೆ.

26

ಸುಶಾಂತ್ ಜೂನ್ 14, 2020 ರಂದು ಬಾಂದ್ರಾದ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿಗೆ ಸಂಬಂಧಿಸಿದ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಆ ನಂತರ ಜಾರಿ ನಿರ್ದೇಶನಾಲಯ (Enforcement Directorate) ಮತ್ತು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (Narcotics Control Bureau) ಕೂಡ ಈ ಪ್ರಕರಣದಲ್ಲಿ ಪ್ರತ್ಯೇಕ ತನಿಖೆ ಆರಂಭಿಸಿವೆ. 

36

ಸೆಪ್ಟೆಂಬರ್ 2020 ರಲ್ಲಿ, ಈ ಪ್ರಕರಣದಲ್ಲಿ ಸುಶಾಂತ್ ಅವರ ಗೆಳತಿ ರಿಯಾ ಅವರನ್ನು ಬಂಧಿಸಲಾಯಿತು. ಅದೇ ಸಮಯದಲ್ಲಿ, ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆದ ನಂತರ, ಬಾಂಬೆ ಹೈಕೋರ್ಟ್ (Bomay High Court) ಅವರಿಗೆ ಜಾಮೀನು ನೀಡಿತು.

46

ಶೋಭಿಕ್ ಮತ್ತು ಇತರ ಹಲವರು ಡ್ರಗ್ಸ್‌ ಸೇವನೆ, ಸ್ವಾಧೀನ ಮತ್ತು ವಹಿವಾಟು ನಡೆಸಿದ ಆರೋಪದ ಮೇಲೆ ಆರೋಪಿಗಳಾಗಿದ್ದಾರೆ. ಈ ಪೈಕಿ ಬಹುತೇಕ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.


 

56

ವರದಿಯ ಪ್ರಕಾರ, ಪ್ರಾಸಿಕ್ಯೂಷನ್ ರಿಯಾ ಮತ್ತು ಶೋಭಿಕ್ ಮಾದಕ ದ್ರವ್ಯ ಸೇವನೆ ಮತ್ತು ಸುಶಾಂತ್‌ಗೆ ಅಂತಹ ಡ್ರಗ್ಸ್ ಖರೀದಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ನ್ಯಾಯಾಲಯವು ಚಾರ್ಜ್ ಶೀಟ್ ಸಲ್ಲಿಸಿದೆ, ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದರು. ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದ್ದರೂ, ಕೆಲವು ಆರೋಪಿಗಳು ಪ್ರಕರಣದಿಂದ ಮುಕ್ತಿಗೊಳಿಸುವಂತ ಅರ್ಜಿ ಸಲ್ಲಿಸಿದ್ದಾರೆ. 

66

ವಿಚಾರಣೆ ವೇಳೆ ರಿಯಾ ಮತ್ತು ಶೋಭಿಕ್ ಹಾಗೂ ಇತರೆ ಆರೋಪಿಗಳು ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಶೇಷ ನ್ಯಾಯಾಧೀಶ ವಿಜಿ ರಘುವಂಶಿ ಅವರು ಜುಲೈ 12 ರಂದು ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.

Read more Photos on
click me!

Recommended Stories