ಗಣೇಶನ ಭಕ್ತಿಯಲ್ಲಿ ರಾಧಿಕಾ ಪರವಶ: ಅಂಬಾನಿ ಕಿರಿಯ ಸೊಸೆಯ ಡ್ಯಾನ್ಸ್ ಗೆ ಜನ ಫಿದಾ

Published : Sep 15, 2026, 11:24 AM IST

ಅಂಬಾನಿ ಕುಟುಂಬದಲ್ಲಿ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. ಗಣೇಶ ಚೌತಿ ಸಂದರ್ಭದಲ್ಲಿ ಕಿರಿ ಸೊಸೆ ರಾಧಿಕಾ ಮರ್ಚೆಂಟ್‌ ಎಲ್ಲರನ್ನು ಆಕರ್ಷಿಸಿದ್ದಾರೆ. ಗಣೇಶನಿಗೆ ನೃತ್ಯದ ಮೂಲಕ ನಮನ ಸಲ್ಲಿಸಿದ್ದಾರೆ.

PREV
15
ಆಂಟಿಲಿಯಾದಲ್ಲಿ ಗಣೇಶೋತ್ಸವ

ಅಂಬಾನಿ ಕುಟುಂಬದ ಗಣೇಶೋತ್ಸವ ಅಂದ್ರೆ ಅದ್ಧೂರಿತನಕ್ಕೆ ಮತ್ತೊಂದು ಹೆಸರು. ಪ್ರತಿವರ್ಷದಂತೆ ಈ ವರ್ಷವೂ ಮುಂಬೈನ ಆಂಟಿಲಿಯಾದಲ್ಲಿ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗ್ತಿದೆ. ಗಣಪತಿ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರದ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಆದರೆ ಈ ಬಾರಿ ಎಲ್ಲರ ಗಮನ ಸೆಳೆದಿದ್ದು ಅಂಬಾನಿ ಕುಟುಂಬದ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಅವರ ಡ್ಯಾನ್ಸ್.

25
ರಾಧಿಕಾ ಮರ್ಚೆಂಟ್ ಭರ್ಜರಿ ಡಾನ್ಸ್

ಮೊದಲಿನಿಂದಲೂ ಡಾನ್ಸ್‌ ನಲ್ಲಿ ಆಸಕ್ತಿ ಹೊಂದಿರುವ, ಅನೇಕ ದಿನಗಳಿಂದ ಡಾನ್ಸ್‌ ನಿಂದ ದೂರವಿದ್ದ ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ಈಗ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ಗಣೇಶೋತ್ಸವ ಸಂದರ್ಭದಲ್ಲಿ ರಾಧಿಕಾ ಮರ್ಚೆಂಟ್, ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಏಕದಂತಾಯ ವಕ್ರತುಂಡಾಯ ಭಕ್ತಿಗೀತೆಗೆ ಅವರು ನೃತ್ಯ ಮಾಡಿದ್ದು, ಅಲ್ಲಿದ್ದವರ ಗಮನ ಸೆಳೆದಿದೆ. ರಾಧಿಕಾ ಅವರ ಡಾನ್ಸ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ.

35
ಸೋಶಿಯಲ್‌ ಮೀಡಿಯಾದಲ್ಲಿ ವೈರಲ್

ರಾಧಿಕಾ ಅವರ ನೃತ್ಯ ಸಂಯೋಜಕಿ ವೈಭವೀ ಮರ್ಚಂಟ್ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗಣೇಶ ಚತುರ್ಥಿಯಂದು ರಾಧಿಕಾ ಮತ್ತೆ ಡ್ಯಾನ್ಸ್ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ರಾಧಿಕಾ ಅವರ ಡ್ಯಾನ್ಸ್ ಮೇಲಿನ ಆಸಕ್ತಿ ಮತ್ತು ಶಿಸ್ತನ್ನು ಮೆಚ್ಚಿಕೊಂಡಿದ್ದಾರೆ.

45
ಗಮನ ಸೆಳೆದ ರಾಧಿಕಾ ಲುಕ್

ಇನ್ನು ಗಣೇಶೋತ್ಸವದ ದಿನ ರಾಧಿಕಾ ಅವರ ಲುಕ್ ಕೂಡ ಗಮನ ಸೆಳೆದಿದೆ. ಕೆಂಪು ಬಣ್ಣದ ಕಾಂಜೀವರಂ ಸೀರೆಯಲ್ಲಿ ಅವರು ಕಾಣಿಸಿಕೊಂಡಿದ್ದರು. ಸೀರೆಯ ಮೇಲಿನ ಆಂಟಿಕ್ ಗೋಲ್ಡ್ ವರ್ಕ್ ಮತ್ತು ಜರ್ದೋಸಿ ಡಿಸೈನ್ ಅವರ ಲುಕ್ಗೆ ಮತ್ತಷ್ಟು ಮೆರುಗು ನೀಡಿತ್ತು.

55
ಬಾಲಿವುಡ್‌ ದಂಡು

ಅಂದಹಾಗೆ, ಅಂಬಾನಿ ಕುಟುಂಬದ ಗಣೇಶೋತ್ಸವಕ್ಕೆ ಬಾಲಿವುಡ್ನ ಹಲವು ತಾರೆಯರು ಆಗಮಿಸಿದ್ದರು. ಸಲ್ಮಾನ್ ಖಾನ್, ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ರಣಬೀರ್ ಕಪೂರ್, ಆಲಿಯಾ ಭಟ್, ಕಾಜೋಲ್, ರೇಖಾ, ರಣವೀರ್ ಸಿಂಗ್, ಕೃತಿ ಸನೋನ್, ದಿಶಾ ಪಟಾನಿ, ಜಾನ್ವಿ ಕಪೂರ್ ಸೇರಿದಂತೆ ಹಲವು ಗಣ್ಯರು ಬಪ್ಪನ ದರ್ಶನ ಪಡೆದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories