ಬಾಕ್ಸಾಫೀಸ್ ಧೂಳೆಬ್ಬಿಸಿದ 'ಇರುಮುಡಿ' ಈಗ OTTಗೆ! ಭಾರೀ ಮೊತ್ತಕ್ಕೆ ಖರೀದಿಸಿದ ನೆಟ್ ಫ್ಲಿಕ್ಸ್, ಸ್ಟ್ರೀಮಿಂಗ್ ಡೇಟ್ ಫಿಕ್ಸ್!

Published : Sep 13, 2026, 03:22 PM IST

ಮಾಸ್ ಮಹಾರಾಜ ರವಿತೇಜ ನಟನೆಯ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ಭಕ್ತಿ ಪ್ರಧಾನ ಥ್ರಿಲ್ಲರ್ ಚಿತ್ರವು ಇದೀಗ ಸೆಪ್ಟೆಂಬರ್ 18 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

PREV
16
250 ಕೋಟಿ ರೂಪಾಯಿ ಕಲೆಕ್ಷನ್

ಮಾಸ್ ಮಹಾರಾಜ ರವಿತೇಜ ನಟನೆಯ 'ಇರುಮುಡಿ' ಸಿನಿಮಾ, ಆಗಸ್ಟ್ 21ರಂದು ಪ್ರೇಕ್ಷಕರ ಎದುರು ಬಂದಿದ್ದರು. ಡಿವೋಷನಲ್ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿ ದಾಖಲೆಗಳನ್ನು ನಿರ್ಮಿಸಿತ್ತು. ಈಗಾಗಲೇ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದಾಗಿ ಸಿನಿಮಾ ನಿರ್ಮಾಕರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

26
OTTಗೆ ಬರ್ತಿದೆ ಇರುಮುಡಿ ಸಿನಿಮಾ

ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಟ್ಟು ಮೂರು ವಾರ ಕಳೆದಿದೆ. ಇಂದಿಗೂ 'ಇರುಮುಡಿ' ಸಿನಿಮಾ ಹೌಸ್ ಫುಲ್ ಕಲೆಕ್ಷನ್ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಭಾಗದಲ್ಲಿ ಜನರು ಟ್ರ್ಯಾಕ್ಟರ್ ಮೇಲೆ ಸಿನಿಮಾ ಥಿಯೇಟರ್‌ಗೆ ತೆರಳಿ ಸಿನಿಮಾ ನೋಡುತ್ತಿದ್ದಾರೆ. ಆದರೆ ಸಿನಿಮಾ ಚಿತ್ರಮಂದಿರಲ್ಲಿ ಇರುವಾಗಲೇ ಓಟಿಟಿಗೆ ಬರುವುದು ಖಚಿತವಾಗಿದೆ.

36
ಯಾವೆಲ್ಲಾ ಭಾಷೆಯಲ್ಲಿ ನೋಡಬಹುದು!

ಸೆಪ್ಟೆಂಬರ್‌ 13ರ ಭಾನುವಾರ ರವಿತೇಜ ಸಿನಿಮಾ 'ಇರುಮುಡಿ' ಓಟಿಟಿಗೆ ಬರ್ತಿದೆ ಎಂದು ನೆಟ್ ಫ್ಲಿಕ್ಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ಭಾರೀ ಹಣಕ್ಕೆ ಇರುಮುಡಿ ಸಿನಿಮಾವನ್ನು ನೆಟ್ ಫ್ಲಿಕ್ಸ್ ಖರೀದಿ ಮಾಡಿದ್ದು, ಸೆಕ್ಟೆಂಬರ್ 18ರ ಶುಕ್ರವಾರ 'ಇರುಮುಡಿ' ಸಿನಿಮಾ ಓಟಿಟಿಗೆ ಬರುವುದು ಖಚಿತವಾಗಿದೆ. ಈ ವಿಚಾರವನ್ನು ಅಧಿಕೃತವಾಗಿ ನೆಟ್‌ಫ್ಲಿಕ್ಸ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿದೆ. ತೆಲುಗು ಭಾಷೆಯೊಂದಿಗೆ ಹಿಂದಿ, ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲಿ 'ಇರುಮುಡಿ' ಸಿನಿಮಾ ಓಟಿಟಿಗೆ ಬಿಡುಗಡೆಯಾಗುತ್ತಿದೆ.

46
ನಕ್ಷತ್ರ ಕ್ಯೂಟ್‌ ನಟನೆ

ಶಿವ ನಿರ್ವಾಣ ಅವರು 'ಇರುಮುಡಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ರವಿತೇಜ ಜೊತೆಯಲ್ಲಿ ಪ್ರಿಯಾ ಭವಾನಿ ಶಂಕರ್ ಹೀರೋಯಿನ್ ಆಗಿ ಕಾಣಿಸಿಕೊಂಡರೆ, ಮಗಳ ಪಾತ್ರದಲ್ಲಿ ಬೇಬಿ ನಕ್ಷತ್ರ ಕ್ಯೂಟ್‌ ನಟನೆಯೊಂದಿಗೆ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಳು.

56
ಮೈತ್ರಿ ಮ್ಯೂವಿ ಮೇಕರ್ಸ್ ಬ್ಯಾನರ್ ಸಿನಿಮಾ

ಉಳಿದಂತೆ ಸಾಯಿ ಕುಮಾರ್, ಅಜಯ್ ಘೋಷ್, ರಮೇಶ್ ಇಂದಿರಾ ಸೇರಿದಂತೆ ಪ್ರಮುಖ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಮೈತ್ರಿ ಮ್ಯೂವಿ ಮೇಕರ್ಸ್ ಬ್ಯಾನರ್ ಅಡಿ ಸಿನಿಮಾನವನ್ನು ನವೀನ್ ಯರ್ನೆನಿ, ವೈ ರವಿಶಂಕರ್ ಭಾರೀ ಬಜೆಟ್‌ನೊಂದಿಗೆ ನಿರ್ಮಾಣ ಮಾಡಿದ್ದರು. ಜಿವಿ ಪ್ರಕಾಶ್ ಕುಮಾರ್ ಈ ಸಿನಿಮಾಗೆ ಸಂಗೀತ ನೀಡಿದ್ದರು.

66
ಕುಟುಂಬದೊಂದಿಗೆ ಸಿನಿಮಾ ನೋಡಿ!

ಆಕ್ಷನ್, ಡ್ರಾಮಾ, ಭಕ್ತಿ ಭಾವ, ಕುಟುಂಬ ಸೆಂಟಿಮೆಂಟ್ನೊಂದಿಗೆ ಇರುಮುಡಿ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿದ್ದರೂ, ನೋಡದಿದ್ದರೂ ಓಟಿಟಿಯಲ್ಲಿ ಮನೆಮಂದಿಯಲ್ಲಾ ಒಟ್ಟಿಗೆ ಕುಳಿತುಕೊಂಡು ನೋಡಬಹುದಾದ ಸಿನಿಮಾ ಇದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories