ರಶ್ಮಿಕಾ ಹಾಕಿದ ಚಾಲೆಂಜ್‌ಗೆ ತೆಲುಗು ರಾಶಿ ದಿಟ್ಟ ಉತ್ತರ!

First Published | Jul 22, 2020, 11:22 PM IST

ಹೈದರಾಬಾದ್(ಜು.  22)   ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗು  ನಟಿಯೊಬ್ಬರಿಗೆ ಸವಾಲು ಹಾಕಿದ್ದಾರೆ. ಆ ಸವಾಲನ್ನು ತೆಲುಗು ನಟಿ ಸ್ವೀಕಾರ ಮಾಡಿದ್ದಾರೆ.  ಇದು ಒಂದು ಒಳ್ಳೆ ಉದ್ದೇಶದ ಸವಾಲು.

ನಟಿ ರಶ್ಮಿಕಾ ಮಂದಣ್ಣ ಈಚೆಗೆ ಒಂದು ಸವಾಲನ್ನು ತೆಲುಗು ನಟಿ ರಾಶಿ ಖನ್ನಾಗೆ ನೀಡಿದ್ದರು.
undefined
ಚಾಲೆಂಜನ್ನು ಸ್ವೀಕರಿಸಿರುವ ರಾಶಿ, ಅದನ್ನು ಪೂರ್ಣಗೊಳಿಸಿ ಮತ್ತೊಂದಿಷ್ಟು ಸಟಿಮಣಿಯರನ್ನು ನಾಮಿನೇಟ್ ಮಾಡಿದ್ದಾರೆ.
undefined
Tap to resize

ಕೊರೋನಾ ನಡುವೆಯೂ ಸೋಶಿಯಲ್‌ ಮೀಡಿಯಾದಲ್ಲಿ ಈಚೆಗೆ ಗ್ರೀನ್‌ ಇಂಡಿಯಾ ಚಾಲೆಂಜ್‌ ಟ್ರೆಂಡ್ ಆಗುತ್ತಿದೆ.
undefined
ಚಾಲೆಂಜ್‌ ಪ್ರಕಾರ, ಮೂರು ಗಿಡಗಳನ್ನು ನೆಡಬೇಕು. ನಂತರ ಅದರ ಫೋಟೋಗಳನ್ನು ಅಪ್‌ಲೋಡ್‌ ಮಾಡಿ, ಮೂರು ಜನಕ್ಕೆ ಈ ಸವಾಲನ್ನು ದಾಟಿಸಬೇಕು.
undefined
ನಟಿ ಸಮಂತಾ ಅಕ್ಕಿನೇನಿ, ಮಾವ ನಾಗಾರ್ಜುನ ಜೊತೆ ಸೇರಿಕೊಂಡು ಮೂರು ಗಿಡಗಳನ್ನು ನೆಟ್ಟು, ರಶ್ಮಿಕಾಗೆ ಈ ಸವಾಲನ್ನು ದಾಟಿಸಿದ್ದರು.
undefined
ಗಿಟ ನೆಟ್ಟ ರಶ್ಮಿಕಾ, ನಟಿ ರಾಶಿ ಖನ್ನಾಗೆ ಸವಾಲು ಎಸೆದಿದ್ದರು.
undefined
ನನ್ನನ್ನು ಈ ಸವಾಲಿಗೆ ನಾಮಿನೇಟ್ ಮಾಡಿದ್ದಕ್ಕಾಗಿ ಕ್ಯೂಟಿ ರಶ್ಮಿಕಾ ಮಂದಣ್ಣಗೆ ಧನ್ಯವಾದ, . ನಾನೀಗ ಈ ಸವಾಲನ್ನು ನಟಿ ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್‌ವಾಲ್, ತಮನ್ನಾ ಭಾಟಿಯಾ ಅವರಿಗೆ ಹಾಕುತ್ತಿದ್ದೇನೆ ಎಂದು ರಾಶಿ ಹೇಳಿದ್ದಾರೆ.
undefined
ಎಲ್ಲರೂ ಗಿಡ ನೆಟ್ಟು ನಿಮ್ಮ ನೆರೆಹೊರೆಯವರು, ಸ್ನೇಹಿತರನ್ನು ಪಾಲ್ಗೊಳ್ಳುವಂತೆ ಮಾಡಿ ಎಂದು ನಟಿ ಕೇಳಿದ್ದಾರೆ.
undefined
ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಇಂಥ ಸವಾಲುಗಳು ಟ್ರೆಂಡ್ ಆಗುತ್ತಿರುತ್ತರವೆ, ಹಿಂದೆ ಐಸ್ ಬಕೆಟ್ ಚ್ಯಾಲೆಂಜ್, ಫಿಟ್ ಇಂಡಿಯಾ ಚಾಲೆಂಜ್, ಬೌಲ್ ರೈಸ್ ಚಾಲೆಂಜ್ ..ಹೀಗೆ ನೂರಾರು ಬಂದಿದ್ದವು.
undefined
ಗ್ರೀನ್ ಇಂಡಿಯಾ ಚಾಲೆಂಜ್ ಮೊದಲು ಆರಂಭಿಸಿದವರು ರಾಜ್ಯಸಭಾ ಸದಸ್ಯ ಜೋಗಿನಪಲ್ಲಿ ಸಂತೋಷ್ ಕುಮಾರ್.
undefined

Latest Videos

click me!