ನಯನತಾರಾರ ಎಕ್ಸ್ ಬಾಯ್‌ಫ್ರೆಂಡ್ ಸಿಂಬು ಮದುವೆಯಾಗ್ತಾರಾ ತ್ರಿಶಾ?
First Published | Jul 22, 2020, 7:23 PM ISTಸೌತ್ ಫೇಮಸ್ ನಟಿಯರಲ್ಲಿ ಒಬ್ಬರಾದ ತ್ರಿಶಾ ಕೃಷ್ಣನ್ ಚಿತ್ರಗಳಿಗಿಂತ ಹೆಚ್ಚಾಗಿ ಮದುವೆಯ ವಿಷಯಕ್ಕೆ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಶೀಘ್ರದಲ್ಲೇ ತ್ರಿಶಾ ದಕ್ಷಿಣದ ನಟಿ ನಯನತಾರಾ ಅವರ ಮಾಜಿ ಗೆಳೆಯ ಸಿಂಬು ಅವರನ್ನು ಮದುವೆಯಾಗಬಹುದು, ಎನ್ನಲಾಗುತ್ತಿದೆ. ತ್ರಿಶಾ ಹಿಂದೆ ಬಾಹುಬಲಿಯ ಭಲ್ಲಾಳ ದೇವ ಖ್ಯಾತಿಯ ರಾಣಾ ದಗ್ಗುಬಾಟಿ ಜೊತೆ ರಿಲೆಷನ್‌ಶಿಪ್ ಹೊಂದಿದ್ದರು. ಆದರೆ, ರಾಣಾ ದಗ್ಗುಬಟಿ ಇತ್ತೀಚೆಗೆ ಮಿಹಿಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ತ್ರಿಶಾ ಕೂಡ ಶೀಘ್ರದಲ್ಲೇ ಸಿಂಬುವನ್ನು ತನ್ನ ಲೈಫ್ ಪಾರ್ಟನರ್ ಆಗಿ ಮಾಡಿಕೊಳ್ಳುತ್ತಿದ್ದಾರೆ ಎಂಬುದು ನ್ಯೂಸ್. ಪ್ರಸಿದ್ಧ ನಿರ್ದೇಶಕ ಗೌತಮ್ ಮೆನನ್ ಅವರ ವಿನಿಟಾಂಡಿ ವರುವಾಯ ಸಿನಿಮಾದಲ್ಲಿ ತ್ರಿಶಾ ಮತ್ತು ಸಿಂಬು ಜೋಡಿ ಪ್ರೇಕ್ಷಕರ ಮನ ಗೆದ್ದಿತ್ತು.