ಜಯಾ ಬಚ್ಚನ್‌ ನಿಂದ ರೇಖಾ, ರೀನಾರವರೆಗೆ 70ರ ದಶಕದ ನಟಿಯರ ದುರಂತ ಜೀವನ

First Published | Aug 22, 2022, 4:50 PM IST

ಬಾಲಿವುಡ್ ಇಂಡಸ್ಟ್ರಿಯ 70 ರ ದಶಕದಲ್ಲಿ ಹಲವು ಸುಂದರ ನಟಿಯರಿದ್ದಾರೆ. ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ಈ ನಟಿಯರು ತಮ್ಮ ಅಭಿನಯ, ಸೌಂದರ್ಯದ ಮೂಲಕ ಜನರ ನೆನಪಿನಲ್ಲಿ ಇನ್ನೂ ಉಳಿದಿದ್ದಾರೆ ಆದರೆ ಈ ನಟಿಯರಲ್ಲಿ ಕೆಲವರ ವೈಯಕ್ತಿಕ ಜೀವನವು ಅವರ ವೃತ್ತಿಪರ ಜೀವನದಷ್ಟು ಉತ್ತಮವಾಗಿರಲಿಲ್ಲ.  ರಾಖಿ, ಜೀನತ್ ಅಮಾನ್, ಪರ್ವೀನ್ ಬಾಬಿ, ರೀನಾ ರಾಯ್, ಜಯಾ ಬಚ್ಚನ್ ಮತ್ತು ರೇಖಾ  ಟಾಪ್‌ ನಟಿಯರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಇತ್ತು. . ಈ ನಟಿಯರ ಟ್ರಾಜಿಕ್‌ ಲೈಫ್‌ ಸ್ಟೋರಿ ಇಲ್ಲಿದೆ.

ಬಾಲಿವುಡ್‌ ನಟಿ  ರಾಖಿ ಜೀವನದಲ್ಲಿ 2 ಮದುವೆ ಆಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮೊದಲ ಮದುವೆ ಆಗಿದ್ದು ಈ ಸಂಬಂಧವು ಶೀಘ್ರದಲ್ಲೇ ಕೊನೆಗೊಂಡಿತು. ಇದಾದ ನಂತರ ನಟಿ  ಗುಲ್ಜಾರ್ ಅವರನ್ನು ವಿವಾಹವಾದರು. ಕೆಲ ಸಮಯ ಇಬ್ಬರ ನಡುವೆ ಎಲ್ಲವೂ ಸರಿಯಿತ್ತು. ಆದರೆ ರಾಖಿ ಸಿನಿಮಾಗಳಲ್ಲಿ ಕೆಲಸ ಮಾಡುವುದು ಗುಲ್ಗಾರ್‌ಗೆ ಇಷ್ಟವಾಗಿರಲಿಲ್ಲ. ಇದರಿಂದ ದಿನವೂ ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಗುಲ್ಜಾರ್ ಅವರು ರಾಖಿಗೆ ಹೊಡೆಯುತ್ತಿದ್ದರು ಎನ್ನಲಾಗಿದೆ. ಇದನ್ನು ಸಹಿಸಲಾಗದೆ ರಾಖಿ ದಂಪತಿ ಬೇರೆಯಾದರು.
 

70ರ ದಶಕದ ಮನಮೋಹಕ ನಟಿ ಜೀನತ್ ಅಮಾನ್ ಅವರು ಬಾಲಿವುಡ್‌ಗೆ ಕಾಲಿಟ್ಟ ತಕ್ಷಣ ಇಡೀ ಟ್ರೆಂಡ್ ಅನ್ನು ಬದಲಾಯಿಸಿದರು. ಅವರು ತಮ್ಮ ವೃತ್ತಿಜೀವನದಲ್ಲಿ ಒಂದಕ್ಕಿಂತ ಹೆಚ್ಚು ಹಿಟ್‌  ಚಿತ್ರಗಳನ್ನು ನೀಡಿದರು, ಆದರೆ ಅವರ ವೈಯಕ್ತಿಕ ಜೀವನವು ನೋವಿನಿಂದ ತುಂಬಿತ್ತು. ಈ ನಟಿ ಸಹ ಪತಿಯಿಂದ ದೈಹಿಕ ಹಿಂಸೆ ಅನುಭವಿಸಿದ್ದಾರೆ. ವರದಿಗಳ ಪ್ರಕಾರ, ಜೀನತ್ ಸಂಜಯ್‌ ಖಾನ್‌ ಅವರನನ್ನು ರಹಸ್ಯವಾಗಿ ಮದುವೆಯಾಗಿದ್ದರು ಮತ್ತು ಈ ಸಂಬಂಧವು ಶೀಘ್ರದಲ್ಲೇ ಮುರಿದುಹೋಯಿತು. ನಂತರ ಅವರು ಮಝರ್ ಖಾನ್ ಅವರನ್ನು ವಿವಾಹವಾದರು. ಮಝರ್ ಕೂಡ ಅವರಿಗೆ ನೋವು ಬಿಟ್ಟು ಬೇರೇನನ್ನೂ ಕೊಟ್ಟಿಲ್ಲ.

Tap to resize

ಪರ್ವೀನ್ ಬಾಬಿ ತನ್ನ ಸಾವಿನವರೆಗೂ ಪ್ರೀತಿಗಾಗಿ ಹಾತೊರೆಯುತ್ತಿದ್ದ ನಟಿ. ಮೊದಲು  ಡ್ಯಾನಿ ಜೊತೆ ನಂತರ ಪರ್ವೀನ್‌  ಕಬೀರ್ ಬೇಡಿಯೊಂದಿಗೆ ಸಂಬಂಧದಲ್ಲಿದ್ದರು. ಇದಾದ ನಂತರ ಆಕೆ ಮಹೇಶ್ ಭಟ್ ಜೊತೆ ಸಂಬಂಧ ಹೊಂದಿದ್ದರು. ಆದರೆ ಮೂರೂ ಸಂಬಂಧಗಳಲ್ಲಿ ಯಾವುದೂ ವರ್ಕ್‌ ಆಗಲಿಲ್ಲ. ಇದೇ ವೇಳೆ ಪರ್ವೀನ್ ಗಂಭೀರ ಕಾಯಿಲೆಗಳಿಗೆ ಬಲಿಯಾದರು ಮತ್ತು  ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದರು. ಅಂತಿಮವಾಗಿ ಅವರು ದುಃಖದ ಅಂತ್ಯವನ್ನು ಹೊಂದಿದ್ದರು.

ಬಾಲಿವುಡ್‌ನ ಎವರ್‌ ಗ್ರೀನ್‌ ನಟಿ ರೇಖಾ ಬಗ್ಗೆ ಹೇಳುವುದಾದರೆ, ಚಿಕ್ಕ ವಯಸ್ಸಿನಲ್ಲೇ ನಟನಾ ಜಗತ್ತಿಗೆ ಕಾಲಿಟ್ಟ ರೇಖಾ ತಮ್ಮ ಜೀವನದುದ್ದಕ್ಕೂ ನಿಜವಾದ ಪ್ರೀತಿಗಾಗಿ ಹಂಬಲಿಸುತ್ತಿದ್ದರು.ಅನೇಕರ ಜೊತೆ ಸಂಬಂಧ ಹೊಂದಿದ್ದರು. ಆದರೆ ಯಾರೊಂದಿಗೂ ಸಂಬಂಧವನ್ನು ಬೆಳೆಸಲು ಸಾಧ್ಯವಾಗಲಿಲ್ಲ. ನಂತರ ಅವಳು ಮುಖೇಶ್ ಅಗರ್ವಾಲ್ ಎಂಬ ವ್ಯಕ್ತಿಯನ್ನು ಮದುವೆಯಾದರು ಆದರೆ ಇದು ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಮುಖೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ರೇಖಾ ಸಾಕಷ್ಟು ಕುಖ್ಯಾತಿಗೆ ಒಳಗಾಗಬೇಕಾಯಿತು. ಇಂದಿಗೂ ರೇಖಾ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.

ಜಯಾ ಬಚ್ಚನ್ ಅವರ ಜೀವನದ್ದು ಇನ್ನೊಂದು ಕಥೆ. ಪತಿ ಅಮಿತಾಬ್ ಬಚ್ಚನ್ ಅವರ ಯಶಸ್ಸಿನ ಜೊತೆಗೆ, ರೇಖಾ ಅವರೊಂದಿಗಿನ ಅವರ ಸಂಬಂಧದ ಸುದ್ದಿ ಜಯಾ ಅವರನ್ನು ಬೆಚ್ಚಿಬೀಳಿಸಿತು.  ಎಷ್ಟು ಮನವೊಲಿಸಿದರೂ ಬಿಗ್ ಬಿ ಒಪ್ಪದಿದ್ದಾಗ ಜಯಾ ಚಿತ್ರದ ಸೆಟ್‌ಗೆ ಆಗಮಿಸಿ ರೇಖಾ ಅವರಿಗೆ ಕಪಾಳಮೋಕ್ಷ ಮಾಡಿದ್ದರು ಎನ್ನಲಾಗಿದೆ. ಆದರೆ, ಇದಾದ ನಂತರವೂ ಅಮಿತಾಬ್-ರೇಖಾ ಪ್ರೀತಿಯ ಕಥೆಗಳು ಕಡಿಮೆಯಾಗಿಲ್ಲ.

ರೀನಾ ರಾಯ್ ಪ್ರೀತಿಯಲ್ಲಿ  ಮೋಸ ಹೋಗಿದ್ದನ್ನು ಸಹಿಸಲಾಗಲಿಲ್ಲ. ರೀನಾ ರಾಯ್ ಅವರು ಶತ್ರುಘ್ನ ಸಿನ್ಹಾ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಇಬ್ಬರ ಸಂಬಂಧ ಬಹಳ ಕಾಲ ನಡೆಯಿತು. ಒಮ್ಮೆ ರೀನ ವಿದೇಶಕ್ಕೆ ಹೋಗಿದ್ದ ಸಮಯದಲ್ಲಿ ಶತ್ರುಘ್ನ ಸಿನ್ಹಾ  ಪೂನಂ ಅವರನ್ನು ವಿವಾಹವಾದರು ಎಂದು ಹೇಳಲಾಗುತ್ತದೆ. ಈ ವಿಷಯ ರೀನಾಗೆ ತಿಳಿದಾಗ ಕುಸಿದ್ದರು. ಹಟಕ್ಕೆ ಬಿದ್ದು  ರೀನಾ ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ಅವರನ್ನು ವಿವಾಹವಾದರು. ಮತ್ತು ಈ ಮೂಲಕ ಶತ್ರುಘ್ನ ಸಿನ್ಹಾ ಅವರ ವಿರುದ್ಧ ತಿರುಗಿಬಿದ್ದರು.
 

Latest Videos

click me!