'ಡಿಯರೆಸ್ಟ್ ಫ್ರೆಂಡ್‌' ಎಂದು ಚಿರಂಜೀವಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸಂಸದೆ ಸುಮಲತಾ

Published : Aug 22, 2022, 03:48 PM IST

ನಟ ಚಿರಂಜೀವಿ ಅವರಿಗೆ ಬೇರೆ ಬೇರೆ ಭಾಷೆಯ ಸಿನಿಮಾ ಗಣ್ಯರು ಸಹ ಶುಭಾಶಯ ತಿಳಿಸುತ್ತಿದ್ದಾರೆ. ಕನ್ನಡದ ನಟಿ, ಸಂಸದೆ ಹಾಗೂ ಚಿರಂಜೀವಿ ಅವರ ಆಪ್ತೆ ಸುಮಲತಾ ಅಂಬರೀಶ್ ಕೂಡ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಕನ್ನಡದಲ್ಲೇ ವಿಶ್ ಮಾಡಿರುವ ಸುಮಲತಾ ಅಂಬರೀಶ್ ಹಳೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

PREV
16
 'ಡಿಯರೆಸ್ಟ್ ಫ್ರೆಂಡ್‌' ಎಂದು ಚಿರಂಜೀವಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸಂಸದೆ ಸುಮಲತಾ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇಂದು (ಆಗಸ್ಟ್ 22) ಹುಟ್ಟುಹಬ್ಬದ ಸಂಭ್ರಮ. ಚಿರಂಜೀವಿ ಅವರಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಚಿರಂಜೀವಿ ಅಭಿಮಾನಿಗಳು ಹಬ್ಬಮಾಡುತ್ತಿದ್ದಾರೆ. ಚಿರಂಜೀವಿ ಫೋಟೋ, ವಿಡಿಯೋ ಶೇರ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ. 
 

26

ಕೇವಲ ತೆಲುಗು ಸಿನಿ ಸ್ಟಾರ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸಿನಿಮಾ ಗಣ್ಯರು ಸಹ ಶುಭಾಶಯ ತಿಳಿಸುತ್ತಿದ್ದಾರೆ. ಕನ್ನಡದ ನಟಿ, ಸಂಸದೆ ಹಾಗೂ ಚಿರಂಜೀವಿ ಅವರ ಆಪ್ತೆ ಸುಮಲತಾ ಅಂಬರೀಶ್ ಕೂಡ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಕನ್ನಡದಲ್ಲೇ ವಿಶ್ ಮಾಡಿರುವ ಸುಮಲತಾ ಅಂಬರೀಶ್ ಹಳೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. 
 

36

ಅಂಬರೀಶ್ ಮತ್ತು ಚಿರಂಜೀವಿ ಕುಟುಂಬದ ನಡುವೆ ಉತ್ತಮವಾದ ಬಾಂಧವ್ಯವಿದೆ. ಅಂಬರೀಶ್ ನಿಧನದ ಬಳಿಕವೂ ಇವರ ಸ್ನೇಹ ಬಾಂಧವ್ಯ ಹಾಗೆ ಇದೆ. ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭಗಳಲ್ಲಿಯೂ  ಭಾಗಿಯಾಗುತ್ತಾರೆ. 

46

ಇದೀಗ ಚಿರಂಜೀವಿ ಅವರ ಹುಟ್ಟುಹಬ್ಬಕ್ಕೆ ಸುಮಲತಾ ಅಂಬರೀಶ್ ವಿಶ್ ಮಾಡಿದ್ದಾರೆ. 'ತೆಲುಗಿನ ಖ್ಯಾತ ನಟರು, ನಮ್ಮ ಕುಟುಂಬದ ಆತ್ಮೀಯರು ಆಗಿರುವ ಚಿರಂಜೀವಿ ಅವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು. ಅವರು ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆ ಶ್ಲ್ಯಾಘನೀಯ. ಸಮಾಜಕ್ಕೆ ಮತ್ತು ಚಿತ್ರರಂಗಕ್ಕೆ ಅವರ ಸೇವೆ ಮತ್ತಷ್ಟು ದೊರೆಯಲಿ ಎಂದು ಪ್ರಾರ್ಥಿಸುವೆ' ಎಂದು ಹೇಳಿದ್ದಾರೆ. 

56

ಡಿಯರೆಸ್ಟ್ ಫ್ರೆಂಡ್ ಚಿರಂಜೀವಿ ಅವರಿಗೆ ಶುಭಾಶಯಗಳು ಎಂದು ಸುಮಲತಾ ಹೇಳಿದ್ದಾರೆ. ವಿಶ್ ಮಾಡಿ ಅಂಬರೀಶ್ ಮತ್ತು ಚಿರಂಜೀವಿ ಜೊತೆ ಇರುವ ಫೋಟೋ ಹಾಗೂ ರಜನಿಕಾಂತ್ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.  
 

66

ಇಂದು ಚಿರಂಜೀವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷೆಯ ಗಾಡ್ ಫಾದರ್ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಲೂಸಿಫರ್ ಸಿನಿಮಾದ ರಿಮೇಕ್ ಇದಾಗಿದ್ದು ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ವಿಶೇಷ ಎಂದರೆ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಸಲ್ಮಾನ್ ಮೊದಲ ಬಾರಿಗೆ ಸೌತ್ ಸಿನಿರಂಗದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇಂದು ರಿಲೀಸ್ ಆಗಿರುವ ಟೀಸರ್ ನಲ್ಲಿ ಸಲ್ಮಾನ್ ಖಾನ್ ಲುಕ್ ಅನಾವರಣವಾಗಿದೆ.   

Read more Photos on
click me!

Recommended Stories