ಕೋಟಿಗಟ್ಟಲೆ ಆಸ್ತಿಯ ಮಾಲೀಕ ಈ ಸೂಪರ್‌ ಸ್ಟಾರ್‌ ತಮ್ಮ ಮನೆ ತಾವೇ ಕ್ಲೀನ್‌ ಮಾಡೋದು

First Published | Aug 22, 2022, 4:47 PM IST

ಸೌತ್ ಇಂಡಸ್ಟ್ರಿಯ ಪವರ್‌ಸ್ಟಾರ್ ಚಿರಂಜೀವಿ ತಮ್ಮ ಸಿಂಪಲ್‌ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಕೋಟ್ಯಾಧಿಪತಿಯಾಗಿದ್ದರೂ ಅವರ ಜೀವನಶೈಲಿ ಸರಳವಾಗಿದೆ. ಹಿಂದಿ ಚಿತ್ರರಂಗದಲ್ಲೂ  ಚಿರಂಜೀವಿ ಹೆಸರು ತುಂಬಾ ಪರಿಚಿತ. ಸೌತ್‌ನಲ್ಲಿ ಜನರು ಈ ನಟನನ್ನು ಪೂಜಿಸುತ್ತಾರೆ. ಚಿರಂಜೀವಿ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ, ಆದರೆ ಇದರಲ್ಲಿ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಅವರೇ ಈ ಬಂಗಲೆಯನ್ನು ನೋಡಿಕೊಳ್ಳುತ್ತಿದ್ದಾರೆ. ಚಿರಂಜೀವಿ ಅವರ ನೆಟ್ ವರ್ತ್ ಹಾಗೂ ಆಸ್ತಿಯ ವಿವರ ಇಲ್ಲಿದೆ.

ಚಿರಂಜೀವಿ ಕೇವಲ ದಕ್ಷಿಣದ ಚಲನಚಿತ್ರ ನಟ ಮಾತ್ರವಲ್ಲ, ವಾಸ್ತವವಾಗಿ ಜನರು ಅವರನ್ನು ಆರಾಧಿಸುತ್ತಾರೆ. ಚಿರಂಜೀವಿ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್‌ನಲ್ಲಿರುವ ಅತ್ಯಂತ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಇದರ ಬೆಲೆ ಸುಮಾರು 38 ಕೋಟಿ. ಅವರ ಇಡೀ ಕುಟುಂಬ ಈ ಬಂಗಲೆಯಲ್ಲಿ ಒಟ್ಟಿಗೆ ವಾಸಿಸುತ್ತಿದೆ.

ವರದಿಯ ಪ್ರಕಾರ ಸೂಪರ್ ಸ್ಟಾರ್ ಚಿರಂಜೀವಿ ಅವರ ಒಟ್ಟು ಆಸ್ತಿ 1300 ಕೋಟಿ. ಅವರ ಮುಖ್ಯ ಆದಾಯದ ಮೂಲವೆಂದರೆ ಚಲನಚಿತ್ರಗಳಿಂದ ಬರುವ ಆದಾಯ.

Tap to resize

ಮಕ್ಕಳ ಆಯ್ಕೆಯಂತೆ  ಚಿರಂಜೀವಿ ಅವರ ಮನೆ ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ಅವರ ಬಂಗಲೆ ಮೀನುಗಳಿಗಾಗಿ ಪ್ರತ್ಯೇಕ ಈಜುಕೊಳವನ್ನು ಹೊಂದಿದೆ. ಅದನ್ನು ಚಿರಂಜೀವಿ ಅಥವಾ ಮನೆಯ ಸದಸ್ಯರು ನೋಡಿಕೊಳ್ಳುತ್ತಾರೆ.

ಚಿರಂಜೀವಿ ಮನೆ ಕೆಲಸಕ್ಕೂ ಸಹಾಯ ಮಾಡುತ್ತಾರೆ. ಅವರು ಕೆಲವೊಮ್ಮೆ ತಮ್ಮ ಮಕ್ಕಳಿಗಾಗಿ ಅವರ ಇಷ್ಟದ ಅಡುಗೆ ತಯಾರಿಸುತ್ತಾರೆ. ಅವರ ಐಷಾರಾಮಿ ಮನೆಯ ಅಡುಗೆ ಕೋಣೆಯೂ ತುಂಬಾ ಐಷಾರಾಮಿಯಾಗಿದೆ.

ಅವರು ತಮ್ಮ ಬಂಲೆಯ ಮುಂದೆ ಸುಂದರವಾದ ಉದ್ಯಾನವನವನ್ನು ಮಾಡಿದ್ದಾರೆ. ಇದರಲ್ಲಿರುವ ಗಿಡಗಳಿಗೆ ನೀರುಣಿಸುವ ಜತೆಗೆ ಸ್ವತಃ ತಾವೇ ಆರೈಕೆ ಮಾಡುತ್ತಾರೆ. ತಮ್ಮ ಮನೆಯ ಹೊರ ಭಾಗ ಅಥವಾ ಒಳಗೆ ಕ್ಲೀನ್‌ ಮಾಡುವುದರ ಬಗ್ಗೆ ಈ ಸೂಪರ್‌ಸ್ಟಾರ್‌ಗೆ ಯಾವುದೇ ಮುಜುಗರವಿಲ್ಲ. 

ಚಿರಂಜೀವಿ ತನ್ನ ಕೈಯಿಂದಲೇ ಬಂಗಲೆಯನ್ನು ಸ್ವಚ್ಛಗೊಳಿಸುತ್ತಾರೆ. ಸ್ವಚ್ಛತೆಯನ್ನು ಇಷ್ಷ ಪಡುವ ನಟ ಹತ್ತಾರು ಸೇವಕರನ್ನು ಹೊಂದಿದ್ದರೂ ಅವರು ಮನೆಯನ್ನು ಸ್ವಚ್ಛಗೊಳಿಸುವಲ್ಲಿ ಸಹಾಯ ಮಾಡುತ್ತಾರೆ.

ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ಗಳಿಕೆಯಲ್ಲಿ ಯಾರಿಗೂ ಕಡಿಮೆ ಇಲ್ಲ. ಅವರ ಬಳಿ ಐಷಾರಾಮಿ ಬಂಗಲೆಯೂ ಇದೆ. ಮಾಧ್ಯಮ ವರದಿಗಳ ಪ್ರಕಾರ, ಅವರು ಸುಮಾರು 100 ಕೋಟಿ ಮೌಲ್ಯದ ಅತ್ಯಂತ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ.

ತಂದೆಯಂತೆಯೇ ರಾಮ್‌ಚರಣ್‌ ಕೂಡ ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್. 2022 ರಲ್ಲಿ, ಅವರ ಚಲನಚಿತ್ರ RRR ಗಳಿಕೆಯ ಅನೇಕ ದಾಖಲೆಗಳನ್ನು ಮುರಿದಿದೆ. ರಾಮ್ ಚರಣ್ ಹಿಂದಿಯ ಜಂಜೀರ್ ಚಿತ್ರದಲ್ಲೂ ನಟಿಸಿದ್ದಾರೆ.

Latest Videos

click me!