ರಾಖಿ- ಗುಲ್ಜಾರ್ ಮದುವೆ ಮುರಿಯಲು ಕಾರಣವಾಗಿದ್ದೇ ಆ ಒಂದು ರಾತ್ರಿ!
First Published | Aug 19, 2020, 6:26 PM ISTಬರಹಗಾರ, ಗೀತರಚನೆಕಾರ, ನಿರ್ಮಾಪಕ ಮತ್ತು ನಿರ್ದೇಶಕ ಗುಲ್ಜಾರ್‌ಗೆ 86 ವರ್ಷ. ಆಗಸ್ಟ್ 18, 1934 ರಂದು ಪಂಜಾಬ್‌ನ ಜೇಲಂ (ಈಗ ಪಾಕಿಸ್ತಾನಕ್ಕೆ ಸೇರಿದೆ)ಜನಿಸಿದರು. ವಿಭಜನೆಯ ಸಮಯದಲ್ಲಿ, ಅವರ ಇಡೀ ಕುಟುಂಬ ಅಮೃತಸರದಲ್ಲಿ ನೆಲೆಸಿತ್ತು, ಆದರೆ ಗುಲ್ಜಾರ್‌ಗೆ ಅಮೃತಸರ ಹಿಡಿಸಲಿಲ್ಲ. ಮುಂಬೈಗೆ ತೆರಳಿದರು. ಗುಲ್ಜಾರ್ ಬಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾದ ರಾಖಿಯನ್ನು ವಿವಾಹವಾದರು. ಆದರೆ, ಅವರ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಈ ಕಪಲ್ ಜೀವನದ ಆ ಒಂದು ರಾತ್ರಿ ಎಲ್ಲವನ್ನೂ ಬದಲಿಸಿತ್ತು. ರಾಖಿಗೆ ಈಗ 73 ವರ್ಷ ಮತ್ತು ಮುಂಬೈಯಿಂದ ದೂರದಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ರಾಖಿ-ಗುಲ್ಜಾರ್ ಮಗಳು ಚಿತ್ರ ನಿರ್ದೇಶಕಿ ಮೇಘನಾ ಗುಲ್ಜಾರ್ ಇವರನ್ನು ನೋಡಿ ಕೊಳ್ಳುತ್ತಿದ್ದಾರೆ. ಅತ್ಯದ್ಭುತ ಪ್ರೇಮ ಗೀತೆಗಳನ್ನು ರಚಿಸಿದ ಗುಲ್ಜರ್ ಪ್ರೇಮ ಕಥೆ ಇದು.