ಅಕ್ಷಯ್ ಟ್ವಿಂಕಲ್ ಮನೆಯ ಹೂದೋಟವುಮನೆಯಂತೆಯೇ ಭವ್ಯವಾಗಿದೆ. ಅವರ ಮನೆಯ ಗಾರ್ಡನ್‌ನ ಕೆಲವು ಬೆಸ್ಟ್ ಫೋಟೋಗಳು ಇಲ್ಲಿವೆ.ಟ್ವಿಂಕಲ್ ತನ್ನ ಗಾರ್ಡನ್ ನೋಡಿಕೊಳ್ಳುತ್ತಾರೆ.
ಅಕ್ಷಯ್ ಕುಮಾರ್ ಜುಹುವಿನಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಸೀ ಫೇಸಿಂಗ್ಬಂಗಲೆಒಳಾಂಗಣವನ್ನು ಪತ್ನಿ ಟ್ವಿಂಕಲ್ ಖನ್ನಾ ಡಿಸೈನ್ ಮಾಡಿದ್ದಾರೆ.
ಟ್ವಿಂಕಲ್ ಗಾರ್ಡನಿಂಗ್ ಸಹ ಇಷ್ಟಪಡುತ್ತಾರೆ. ಅವರು ತೋಟದಲ್ಲಿ ಬೆಳೆಸಿರುವ ಅನೇಕ ಬಗೆಯ ಹೂವುಗಳು ಮತ್ತು ಮರಗಳು ಇದಕ್ಕೆ ಸಾಕ್ಷಿ.
ಅವರು ತಮ್ಮ ಗಾರ್ಡನ್‌ನಲ್ಲಿ ವಿಶೇಷ ಮಾವಿನ ಮರಗಳನ್ನು ನೆಟ್ಟಿದ್ದಾರೆ. ವಾಸ್ತವವಾಗಿ, ಅವರ ತಂದೆ ರಾಜೇಶ್ ಖನ್ನಾ ಅವರ ಬಂಗಲೆ ಆಶಿರ್ವಾದದಲ್ಲಿ ಮಾವಿನ ಮರಗಳನ್ನು ನೆಡಲಾಗಿತ್ತು. ಬಾಲ್ಯದಲ್ಲಿ, ಟ್ವಿಂಕಲ್ ತನ್ನ ತಂಗಿ ರಿಂಕಿಯೊಂದಿಗೆ ಮರವನ್ನು ಏರಿ ಬಹಳಷ್ಟು ಮಾವಿನಹಣ್ಣುಗಳನ್ನು ಕೀಳುತ್ತಿದ್ದಂತೆ.
ತೋಟದಲ್ಲಿ ದೊಡ್ಡ ಮೂರ್ತಿಗಳು. ಕೂರಲು ಅಮೃತಶಿಲೆಯ ಕುರ್ಚಿಗಳೊಂದಿಗೆ ಡೈನಿಂಗ್ ಟೇಬಲ್ ಸಹ ಕಾಣಬಹುದು.
ಮನೆಯಲ್ಲಿ ಪ್ರಕೃತಿಗೆ ಒತ್ತು ನೀಡಲಾಗಿದೆ. ಗಾರ್ಡನ್‌ನಲ್ಲಿ ಹಲವು ಬಗೆಯ ಮರ ಗಿಡಗಳಿವೆ.
ದೊಡ್ಡ ಬೊಗನ್ವಿಲ್ಲಾ ಗಿಡಗಳು ಹಾಗೂ ಇನ್‌ಡೋರ್ ಕೊಳ ಮನೆಸೌಂದರ್ಯವನ್ನು ಹೆಚ್ಚಿಸುತ್ತದೆ.
ಈ ಐಷಾರಾಮಿ ಗಾರ್ಡನ್ ಅಕ್ಷಯ್ ಮನೆಯ ಡೈನಿಂಗ್ ಏರಿಯಾದಿಂದ ಕಾಣುತ್ತದೆ. ಇಲ್ಲಿ ವಿವಿಧ ಸ್ಥಳಗಳಲ್ಲಿ ಜೋಕಾಲಿಗಳು ಸಹ ಇವೆ.
ಅಕ್ಷಯ್ ಬಂಗಲೆಯಲ್ಲಿ ವಿಶೇಷ ಕೊಳವಿದೆ, ಅದರ ಮೇಲೆ ಸುಮಾರು 13 ಹ್ಯಾಂಗಿಂಗ್ ಲೈಟ್‌ಗಳಿವೆ.
ಮನೆಯ ಗಾರ್ಡನ್‌ನನ್ನು ಐಷಾರಾಮಿ ರೀತಿಯಲ್ಲಿ ಡೆಕೊರೇಟ್ ಮಾಡಲಾಗಿದೆ.
ಇದಲ್ಲದೆ, ಇಡೀ ಕುಟುಂಬದ ಹೊಸ ಮತ್ತು ಹಳೆಯ ಫೋಟೋಗಳನ್ನು ಮನೆಯ ಒಂದು ಗೋಡೆಯ ಮೇಲೆ ಜೋಡಿಸಲಾಗಿದೆ.
ಗ್ರೌಂಡ್ ಫ್ಲೋರ್‌ನಲ್ಲಿ ಲೀವಿಂಗ್ ಏರಿಯಾ, ಡೈನಿಂಗ್ ಏರಿಯಾ ,ಅಡಿಗೆಮನೆ ಹಾಗೂ ಹೋಮ್ ಥಿಯೇಟರ್ ಇದೆ.
ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಸ್ವತಃ ತನ್ನ ಗಾರ್ಡನ್ ನೋಡಿಕೊಳ್ಳುತ್ತಾರೆ.