ಸಿನಿಮಾಗಿಂತ Ms Dhoni ಜೊತೆ ಸಂಬಂಧದಿಂದ ಹೆಚ್ಚು ಫೇಮಸ್‌ ಆದ್ರು ಈ ಕನ್ನಡ ನಟಿ

Published : May 05, 2022, 05:55 PM IST

ದಕ್ಷಿಣದ ನಟಿ ರಾಯ್ ಲಕ್ಷ್ಮಿ (Raai Laxmi ) ಅವರು ಮೇ 5 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಬೆಳಗಾವಿಯಲ್ಲಿ 5 ಮೇ 1988 ರಂದು ಜನಿಸಿದ ನಟಿ ಮಾಡೆಲಿಂಗ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ರಾಯ್ ಲಕ್ಷ್ಮಿ ಅವರ ಚಿತ್ರಗಳಿಗಿಂತ ಹೆಚ್ಚಾಗಿ, ಕ್ರಿಕೆಟಿಗ ಧೋನಿ (Ms Dhoni)  ಅವರೊಂದಿಗಿನ ಸಂಬಂದದ ಕಾರಣದಿಂದ ಪ್ರಚಾರ ಪಡೆದಿದ್ದಾರೆ. 2005ರಲ್ಲಿ ತಮಿಳಿನ ‘ಕರ್ಕ ಕಸದರಾ’ ಚಿತ್ರದ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ನಟಿ ಧೋನಿ ಜೊತೆ ತಮ್ಮ ಸಂಬಂಧ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದರು.  

PREV
110
 ಸಿನಿಮಾಗಿಂತ Ms Dhoni ಜೊತೆ ಸಂಬಂಧದಿಂದ ಹೆಚ್ಚು ಫೇಮಸ್‌ ಆದ್ರು ಈ ಕನ್ನಡ ನಟಿ

ರಾಯ್ ಲಕ್ಷ್ಮಿ ಅಭಿನಯ ಲೋಕಕ್ಕೆ ಕಾಲಿಟ್ಟು ಕೇವಲ 15 ವರ್ಷ ಅವರು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ಇಲ್ಲಿಯವರೆಗೆ ನಟಿ 50 ಕ್ಕೂ ಹೆಚ್ಚು ವಿವಿಧ ಭಾಷೆಗಳ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
 


 

210

 ನಟಿ ಜೂಲಿ 2 ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅವರು ಹೆಚ್ಚು ಬೋಲ್ಡ್ ದೃಶ್ಯಗಳನ್ನು ನೀಡಿದ್ದಾರೆ. ಇಷ್ಟೆಲ್ಲಾ ಆದರೂ ಚಿತ್ರ ಯಶಸ್ಸು ಗಳಿಸಿಲು ಸಾಧ್ಯವಾಗಲಿಲ್ಲ.


 

310

ರಾಯ್ ಲಕ್ಷ್ಮಿ ದಕ್ಷಿಣದ ಎಲ್ಲಾ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. ಚಿರಂಜೀವಿ, ಮಮ್ಮುಟ್ಟಿ, ಮೋಹನ್ ಲಾಲ್, ವಿಜಯ್ ಬಾಬು ಸೇರಿದಂತೆ ಹಲವು ನಟಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ ಆಕೆಗೆ ಚಿರಂಜೀವಿ ಜೊತೆ ಹೆಚ್ಚು ಸಿನಿಮಾ ಮಾಡುವ ಆಸೆ ಇದೆ.


 

410

ರಾಯ್ ಲಕ್ಷ್ಮಿ ಅವರು ಮಹೇಂದ್ರ ಸಿಂಗ್ ಧೋನಿ ಅವರನ್ನು ಅತ್ಯುತ್ತಮ ನಾಯಕ ಎಂದು ಪರಿಗಣಿಸಿದ್ದಾರೆ. ಸಂದರ್ಶನವೊಂದರಲ್ಲಿ, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ನಡುವೆ ಉತ್ತಮ ನಾಯಕ ಯಾರು ಎಂದು ಕೇಳಿದಾಗ, ಅವರು ಎಂಎಸ್ ಧೋನಿ ಹೆಸರನ್ನು ತೆಗೆದುಕೊಂಡರು. 

510

ವಾಸ್ತವವಾಗಿ, ರಾಯ್ ಲಕ್ಷ್ಮಿ ಮತ್ತು ಧೋನಿ ನಡುವಿನ ಸಂಬಂಧದ ಚರ್ಚೆಗಳು ಸಖತ್‌ ಸದ್ದು ಮಾಡಿತ್ತು. ಮಾಧ್ಯಮ ವರದಿಗಳ ಪ್ರಕಾರ, ಧೋನಿ 2008 ರಲ್ಲಿ ಐಪಿಎಲ್ ಸಮಯದಲ್ಲಿ ಲಕ್ಷ್ಮಿ ಜೊತೆ ಡೇಟಿಂಗ್ ಮಾಡುತ್ತಿದ್ದರು. 

610

ಆ ಸಮಯದಲ್ಲಿ ನಟಿ ಚೆನ್ನೈ ಸೂಪರ್ ಕಿಂಗ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಇಬ್ಬರೂ ಹಲವೆಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಸಂದರ್ಶನವೊಂದರಲ್ಲಿ ಅವರು ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಟ್ಟಿದ್ದಾರೆ ಎಂದು ಹೇಳಿದರು. 

710

ತಾನು ಅಥವಾ ಧೋನಿ ಯಾವತ್ತೂ ಒಬ್ಬರಿಗೊಬ್ಬರು ಯಾವುದೇ ರೀತಿಯ ಬದ್ಧತೆಯನ್ನು ಮಾಡಿಲ್ಲ ಅಥವಾ ಮದುವೆಯ ಬಗ್ಗೆ ಯೋಚಿಸಿಲ್ಲ ಎಂದು ನಟಿ ರಾಯ್ ಲಕ್ಷ್ಮಿ ಹೇಳಿದ್ದಾರೆ. ಇಬ್ಬರೂ ಬೇರೆಯಾದರೂ  ಅವರಿಬ್ಬರ ಹೆಸರನ್ನು ಪದೇ ಪದೇ ಏಕೆ ಒಟ್ಟಿಗೆ ತೆಗೆದುಕೊಳ್ಳಲಾಗುತ್ತದೆ ಎಂದು ನಟಿ ಕೋಪಗೊಳ್ಳುತ್ತಾರೆ. 

810

'ಈ ಸಂಬಂಧವು ಒಂದು ಕಲೆ ಅಥವಾ ಗುರುತು ಇದ್ದಂತೆ, ಅದು ಬಹಳ ಕಾಲದವರೆಗೆ  ಹೋಗುವುದಿಲ್ಲ ಎಂದು ಹೇಳಿದರು. ಒಂದು ದಿನ ನನ್ನ ಮಕ್ಕಳು ಸಹ ಅದರ ಬಗ್ಗೆ ನನ್ನನ್ನು ಪ್ರಶ್ನಿಸಲು ಪ್ರಾರಂಭಿಸಿದರೆ ಎಂದು ಯೋಚಿಸಲು ನಾನು ಹೆದರುತ್ತೇನೆ' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

910

ಧೋನಿ ನಂತರ ಅವರ ಸಂಬಂಧ ಮೂರ್ನಾಲ್ಕು ಜನರೊಂದಿಗೆ ಇತ್ತು ಎಂಬುದನ್ನು ಸ್ವತಃ ನಟಿಯೇ ಒಪ್ಪಿಕೊಂಡಿದ್ದಾರೆ. ಆದರೆ ಅವುಗಳನ್ನು ಎಂದಿಗೂ ಉಲ್ಲೇಖಿಸಲಾಗಿಲ್ಲ. ಆದರೆ ಧೋನಿಯ ಜೊತೆಯ ನಟಿಯ ಆಫೇರ್‌ ಈಗಲೂ ಆಗಾಗ ಚರ್ಚೆಯಾಗುತ್ತದೆ.

1010

ರಾಯ್ ಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಪ್ರತಿದಿನ ಅವರು ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.  ಪ್ರಸ್ತುತ ಅವರು ಅನೇಕ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರಂತೆ. ಆದರೆ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

Read more Photos on
click me!

Recommended Stories