ಸನಲ್ ಕುಮಾರ್ ವಿರುದ್ಧ Manju Warrier ದೂರು; ಮಾಲಿವುಡ್ ಚಲನಚಿತ್ರ ನಿರ್ಮಾಪಕ ಬಂಧನ

Published : May 05, 2022, 05:19 PM IST

ಮಂಜು ವಾರಿಯರ್ (Manju Warrier) ನೀಡಿದ ದೂರಿನ ಮೇರೆಗೆ ಕೊಚ್ಚಿ ಪೊಲೀಸರು ಗುರುವಾರ ಮಲಯಾಳಂ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ (Sanal Kumar Sasidharan ) ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಸನಲ್ ಕುಮಾರ್ ಶಶಿಧರನ್ ಮಲಯಾಳಂ ಚಲನಚಿತ್ರೋದ್ಯಮದ ಫೇಮಸ್ ಚಲನಚಿತ್ರ ನಿರ್ಮಾಪಕ. ಅಷ್ಟಕೂ ನಟಿ ಮಂಜು ವಾರಿಯರ್‌ ಅವರು ನಿರ್ಮಾಪಕರ ವಿರುದ್ಧ ದೂರು ನೀಡಲು ಕಾರಣವೇನು ಗೊತ್ತಾ?

PREV
16
ಸನಲ್ ಕುಮಾರ್ ವಿರುದ್ಧ Manju Warrier ದೂರು; ಮಾಲಿವುಡ್ ಚಲನಚಿತ್ರ ನಿರ್ಮಾಪಕ ಬಂಧನ

ಶಶಿಧರನ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ನಟಿಯ ಮಾನಹಾನಿ ಮತ್ತು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮಂಜು ವಾರಿಯರ್ ಅವರು ಕೊಚ್ಚಿಯ ಎಲಮಕ್ಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

26

ನಟಿ ಮಂಜು ವಾರಿಯರ್ ಅವರು ನೀಡಿದ ದೂರಿನ ಮೇರೆಗೆ ಕೊಚ್ಚಿ ಪೊಲೀಸರು ಗುರುವಾರ ಮಲಯಾಳಂ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. 

36

ಮಾಧ್ಯಮ ವರದಿಗಳ ಪ್ರಕಾರ, ಸನಲ್ ಕುಮಾರ್ ಶಶಿಧರನ್ ಅವರನ್ನು ಗುರುವಾರ ಬೆಳಗ್ಗೆ ತಿರುವನಂತಪುರಂನ ಪರಸ್ಸಾಲದಿಂದ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆತನನ್ನು ಬಂಧಿಸುವ ಮೊದಲ ಘಟನೆಗಳನ್ನು ತೋರಿಸಲು ಚಲನಚಿತ್ರ ನಿರ್ಮಾಪಕ ಫೇಸ್‌ಬುಕ್ ಲೈವ್ ವೀಡಿಯೊವನ್ನು ಸಹ ಮಾಡಿದ್ದಾರೆ.

46

ಸನಲ್ ಕುಮಾರ್ ಶಶಿಧರನ್ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರ ನಿರ್ಮಾಪಕ. ಅವರು ಮತ್ತು  ಮಂಜು ವಾರಿಯರ್ ಒಟ್ಟಿಗೆ 'ಕಯಾಟ್ಟಂ' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಮಲಯಾಳಂ ನಿರ್ದೇಶಕರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಮಂಜು ವಾರಿಯರ್ ಅವರ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿದರು.

 


 

56

ಈ ವಾರದ ಆರಂಭದಲ್ಲಿ, ಮಾಲಿವುಡ್ ನಿರ್ದೇಶಕರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಾಕಿದ್ದರು: 'ತುಂಬಾ ಗಂಭೀರವಾಗಿದೆ: ನಟಿಯ ಜೀವಕ್ಕೆ ಅಪಾಯವಿದೆ. ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಅವರ ಜೀವಕ್ಕೆ ಅಪಾಯವಿದೆ,  ಹಿತಾಸಕ್ತಿ ಹೊಂದಿರುವ ಕೆಲವರ ವಶದಲ್ಲಿದ್ದಾರೆ ಎಂದು ನಾನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ನಾಲ್ಕು ದಿನಗಳಾಗಿವೆ. ನಾನು ಆಕೆಯ ಮ್ಯಾನೇಜರ್‌ಗಳಾದ ಬಿನೀಶ್ ಚಂದ್ರನ್ ಮತ್ತು ಬಿನು ನಾಯರ್ ಅವರ ಹೆಸರುಗಳನ್ನು ಪೋಸ್ಟ್ ಮಾಡಿದ್ದೇನೆ ಮತ್ತು ಅವಳು ಬಂಧನದಲ್ಲಿದ್ದಾರೆ ಎಂದು ನಾನು ನಂಬಲು ಕಾರಣಗಳನ್ನು ಪೋಸ್ಟ್ ಮಾಡಿದ್ದೇನೆ. ಆದರೆ ಇದುವರೆಗೂ ಮಂಜು ವಾರಿಯರ್ ಆಗಲಿ ಅಥವಾ ಸಂಬಂಧಪಟ್ಟವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಂಜು ವಾರಿಯರ್ ಅವರ ಮೌನ ನನ್ನ ಅನುಮಾನವನ್ನು ಬಲಪಡಿಸುತ್ತದೆ. ಎಂದು ಸನಲ್ ಕುಮಾರ್ ಹೇಳಿದ್ದರು. 

66

'ನಿನ್ನೆ ನಾನು ಮಲಯಾಳಂ ಚಿತ್ರರಂಗದಲ್ಲಿ ಲಿಂಗ ಸಮಾನತೆಗಾಗಿ ಶ್ರಮಿಸುತ್ತಿರುವ @wcc_cinema wcc ಸಂಸ್ಥೆಗೆ ಇಮೇಲ್ ಕಳುಹಿಸಿದ್ದೇನೆ. ಅವರು ಕೂಡ ಈ ವಿಷಯದ ಬಗ್ಗೆ ಮೌನವಾಗಿದ್ದಾರೆ. ಇಂದು ನಾನು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದಾಗ, ಅನೇಕರು ಈ ಗಂಭೀರ ಸಮಸ್ಯೆಯನ್ನು  ತಮಾಷೆಯಾಗಿ ನೋಡಲು ಪ್ರಯತ್ನಿಸುತ್ತಾರೆ. ಕೇರಳದ ಮುಖ್ಯವಾಹಿನಿಯ ಮಾಧ್ಯಮಗಳು ಈ ವಿಷಯವನ್ನು ನೋಡಿಲ್ಲ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿರುವುದು ಭಯ ಹುಟ್ಟಿಸುತ್ತದೆ. ನಾನು ಎತ್ತಿರುವ ವಿಚಾರ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಚಿತ್ರನಟಿಯ ಜೀವನ ಮತ್ತು ಸ್ವಾತಂತ್ರ್ಯದ ಬಗ್ಗೆ ಆಗಿರುವುದರಿಂದ ರಾಷ್ಟ್ರೀಯ ಮಾಧ್ಯಮಗಳು ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ.' ಎಂದು ಸನಲ್ ಕುಮಾರ್ ಶಶಿಧರನ್ ಪೋಸ್ಟ್‌ ಮಾಡಿದ್ದರು.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories