ವೇದಿಕೆ ಮೇಲೆ ಸೊಂಟಕ್ಕೆ ಕೈ ಹಾಕಿ ಅಸಭ್ಯ ವರ್ತನೆ, ನಟಿ ಮೌನಿ ರಾಯ್ ನೋವಿನ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ವೇದಿಕೆ ಮೇಲೆ ನಡೆದ ಘಟನೆ ಏನು? ಮೌನಿ ರಾಯ್ ಸೊಂಟಕ್ಕೆ ಕೈ ಹಾಕಿದ್ದು ಯಾರು?
ಬಾಲಿವುಡ್ ನಟಿ ಮೌನಿ ರಾಯ್‌ಗೆ ವೇದಿಕೆ ಮೇಲೆ ಕಿರುಕುಳ ಕೊಟ್ಟ ಘಟನೆ ನಡೆದಿದೆ. ಈ ಕುರಿತು ಸ್ವತಃ ಮೌನಿ ರಾಯ್ ನೋವು ತೋಡಿಕೊಂಡಿದ್ದಾರೆ. ಕರ್ನಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌನಿ ರಾಯ್ ಪರ್ಫಾಮೆನ್ಸ್ ಆಯೋಜನೆ ಮಾಡಲಾಗಿತ್ತು. ತಮ್ಮ ಪರ್ಫಾಮೆನ್ಸ್ ನಡುವೆ ನಡೆದ ಕಿರುಕುಳ ಘಟನೆ ಕುರಿತು ಮೌನಿ ರಾಯ್ ಹೇಳಿಕೊಂಡಿದ್ದಾರೆ.
26
ಸೊಂಟಕ್ಕೆ ಕೈ ಹಾಕಿದ ಇಬ್ಬರು ಹಿರಿಯ ವ್ಯಕ್ತಿಗಳು
ಕರ್ನಲ್ ಕಾರ್ಯಕ್ರಮದ ನಡುವೆ ವೇದಿಕೆಯಲ್ಲಿರುವಾಗ ಅತಿಥಿಗಳ ನಡವಳಿಕೆ ನನಗೆ ಆಘಾತ ತಂದಿತ್ತು. ಕಾರಣ ಇಬ್ಬರು ಹಿರಿಯ ವ್ಯಕ್ತಿಗಳು, ಅವರ ವಯಸ್ಸು ಅಜ್ಜಂದಿರ ವಯಸ್ಸು. ವೇದಿಕೆ ಬಳಿ ಬಂದು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಹಿರಿಯರಿದ್ದಾರೆ ಎಂದು ಫೋಟೋ ಕ್ಲಿಕ್ ಮಾಡಲು ಅವಕಾಶ ನೀಡಿದ್ದೆ. ಆದರೆ ಇಬ್ಬರು ನನ್ನ ಸೊಂಟಕ್ಕೆ ಕೈ ಹಾಕಿದ್ದಾರೆ. ಅವರ ನಡವಳಿಕೆ ಅಸಭ್ಯವಾಗಿತ್ತು ಎಂದು ಮೌನಿ ರಾಯ್ ನೋವು ತೋಡಿಕೊಂಡಿದ್ದಾರೆ
36
ಕೈ ತೆಗೆಯಲು ಸೂಚಿಸಿದ ಮೌನಿ ರಾಯ್
ಇಬ್ಬರು ಹಿರಿಯ ವ್ಯಕ್ತಿಗಳು ಏಕಾಏಕಿ ಸೊಂಟಕ್ಕೆ ಕೈ ಹಾಕಿ ಫೋಟೋ ಕ್ಲಿಕ್ಕಿಸಲು ನಿಂತಿದ್ದಾರೆ. ಫೋಟೋ ನೆಪದಲ್ಲಿ ಅವರ ವರ್ತನೆ ಅಸಹ್ಯವಾಗಿತ್ತು. ಹೀಗಾಗಿ ತಾನು, ಸರ್ ದಯವಿಟ್ಟು ಕೈ ತೆಗೆಯಿರಿ ಎಂದು ಸೂಚಿಸಿದ್ದೆ. ಇದು ಅವರಿಗೆ ಇಷ್ಟವಾಗಲಿಲ್ಲ. ಗರಂ ಆಗಿದ್ದಾರೆ.ಕೋಪದಿಂದ ವರ್ತಿಸಿದ್ದಾರೆ ಎಂದು ಮೌನಿ ರಾಯ್ ಘಟನೆ ವಿವರಿಸಿದ್ದಾರೆ.
ಕರ್ನಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಗಮಿಸಿದ ಕೆಲವರು ಇಡೀ ಕಾರ್ಯಕ್ರಮದ ಗೌರವ ಹಾಳು ಮಾಡಿದ್ದಾರೆ. ನಾನು ವೇದಿಕೆ ಮೇಲೆ ಬಂದಾಗ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಪುರುಷರು ಅಸಭ್ಯವಾಗಿ ಸನ್ನೆ ಮಾಡಿದ್ದಾರೆ. ಜೊತೆಗೆ ಕೆಟ್ಟ ಕಮೆಂಟ್ ಪಾಸ್ ಮಾಡಿದ್ದಾರೆ. ಈ ವೇಳೆ ಸಭ್ಯತೆ ಮೀರದಂತೆ ಸೂಚನೆ ನೀಡಿದ್ದೆ. ಕೆಲ ಹೊತ್ತಿನ ಬಳಿಕ ಸುಖಾಸುಮ್ಮನೆ ಗುಲಾಮಿ ಹೂವು ಎಸೆದು ಕೆಟ್ಟದಾಗಿ ನಗಲು ಆರಂಭಿಸಿದ್ದಾರೆ ಎಂದು ಮೌನಿ ರಾಯ್ ಹೇಳಿದ್ದಾರೆ.
56
ಕಾರ್ಯಕ್ರಮ ಮುಗಿಸಿದರೂ ಕಿರುಕುಳ ತಪ್ಪಲಿಲ್ಲ
ಕಾರ್ಯಕ್ರಮ ಮುಗಿಸಿ ವೇದಿಕೆಯ ಹಿಂಭಾಗಕ್ಕೆ ತೆರಳಿದಾಗ ಅಲ್ಲಿಗೂ ಕೆಲವರು ಬಂದಿದ್ದಾರೆ. ಅವರ ವರ್ತನೆಗಳು ಸರಿಯಾಗಿರಲಿಲ್ಲ. ಆದರೆ ಆಯೋಜಕರು ಅವರನ್ನು ತಡೆದು ರಕ್ಷಣೆ ನೀಡಿದರು. ಕಳೆದ ಹಲವು ವರ್ಷಗಳಿಂದ ಕಾರ್ಯಕ್ರಮ ನೀಡುತ್ತಿದ್ದೇನೆ. ನನಗೆ ಈ ರೀತಿಯ ಅನುಭವ ಆದರೆ, ಹೊಸ ಯುವತಿಯರು, ಕಲಾವಿದರು ಪರ್ಫಾಮೆನ್ಸ್ ಮಾಡಲು ಬಂದಾಗ ಅವರ ಪರಿಸ್ಥಿತಿ ಏನು? ಇದು ಆತಂಕ ತರುತ್ತಿದೆ ಎಂದು ಮೌನಿ ರಾಯ್ ಹೇಳಿದ್ದಾರೆ.
66
ಕಠಿಣ ಕ್ರಮಕ್ಕೆ ಆಗ್ರಹಿಸಿದ ಮೌನಿ ರಾಯ್
ನನಗೆ ಕಿರುಕುಳ ನೀಡಿದ್ದಾರೆ. ಈ ಘಟನೆ ತೀವ್ರ ಆಘಾತ ಹಾಗೂ ನೋವುಂಟು ಮಾಡಿದೆ. ಸುರಕ್ಷತೆ ಪ್ರಶ್ನೆಗಳು ಮೂಡುತ್ತಿದೆ. ಹೀಗಾಗಿ ಕಿರುಕುಳ ನೀಡಿದ ಹಾಗೂ ನೀಡಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೌನಿ ರಾಯ್ ಆರೋಪಿಸಿದ್ದಾರೆ. ನಾವು ಕಲಾವಿದರು ಕನಿಷ್ಢ ಗೌರವ ನಿರೀಕ್ಷಿಸುತ್ತೇವೆ. ಜೊತೆಗೆ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡುತ್ತೇವೆ ಎಂದು ಮೌನಿ ರಾಯ್ ತಮ್ಮ ಇನ್‌ಸ್ಟಾಗ್ರಾ ಮೂಲಕ ಪೋಸ್ಟ್ ಮಾಡಿದ್ದಾರೆ.
ಕಠಿಣ ಕ್ರಮಕ್ಕೆ ಆಗ್ರಹಿಸಿದ ಮೌನಿ ರಾಯ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.