ಸುಕುಮಾರ್‌ರಂತಹ ನಿರ್ದೇಶಕರಿಗೆ ಸ್ಫೂರ್ತಿ ತುಂಬಿದ ಹೀರೋ ಎಂದರೆ ಚಿರಂಜೀವಿ, ಬಾಲಕೃಷ್ಣ, ಎನ್‌ಟಿಆರ್, ರಜನೀಕಾಂತ್, ಶೋಭನ್ ಬಾಬು, ಕೃಷ್ಣ ಮುಂತಾದವರು ಎಂದುಕೊಳ್ಳಬಹುದು. ಆದರೆ ಅವರಲ್ಲ, ರಾಜಶೇಖರ್ ಎಂದು ಸುಕುಮಾರ್ ಹೇಳಿದ್ದಾರೆ. ಕಾಲೇಜು ದಿನಗಳಲ್ಲಿ ಸುಕುಮಾರ್ ರಾಜಶೇಖರ್ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದರಂತೆ. ಅಂಕುಶಂ, ಆಹುತಿ, ತಲಂಬ್ರಾಲು, ಮಗಾಡು ಮುಂತಾದ ಚಿತ್ರಗಳನ್ನು ನೋಡಿ ಅವರ ಅಭಿಮಾನಿಯಾದರಂತೆ.